ಶುಕ್ರವಾರ, ಆಗಸ್ಟ್ 19, 2022
21 °C

ಹೊಸ ಸಿಟ್ರಾನ್‌ ಸಿ3 ಬಿಡುಗಡೆ: ಆರಂಭಿಕ ಪರಿಚಯಾತ್ಮಕ ಬೆಲೆ ₹5.7 ಲಕ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಿಟ್ರಾನ್‌ ಇಂಡಿಯಾ ಕಂಪನಿಯು ಭಾರತದ ಮಾರುಕಟ್ಟೆಗೆ ಹೊಸ ‘ಸಿಟ್ರಾನ್‌ ಸಿ3’ ಬಿಡುಗಡೆ ಮಾಡಿದೆ. ಇದರ ಪರಿಚಯಾತ್ಮಕ ವಿಶೇಷ ಬೆಲೆ ₹ 5.70 ಲಕ್ಷ (ಎಕ್ಸ್‌ ಷೋರೂಂ).

ಈ ಮಾದರಿಯು ಶೇಕಡ 90ರಷ್ಟು ಸ್ಥಳೀಯವಾಗಿ ತಯಾರಾಗಿದೆ. ತಮಿಳುನಾಡಿನ ತಿರುವಲ್ಲೂರು ಬಳಿ ಇರುವ ಘಟಕದಲ್ಲಿ ಇದನ್ನು ತಯಾರಿಸಲಾಗಿದೆ. 1.2 ಲೀಟರ್ ಪೆಟ್ರೋಲ್‌ ಎಂಜಿನ್‌ ಹೊಂದಿದೆ ಎಂದು ಕಂಪನಿಯು ತಿಳಿಸಿದೆ.

ಎಸ್‌ಯುವಿಯಿಂದ ಪ್ರೇರಿತ ಹ್ಯಾಚ್‌ಬ್ಯಾಕ್‌ ಕಾರು ಇದು. ಈ ವಾಹನವು 4 ಮೀಟರ್‌ಗಿಂತ ಕಡಿಮೆ ಉದ್ದವಿದೆ ಎಂದು ಕಂಪನಿ ತಿಳಿಸಿದೆ.

19 ನಗರಗಳಲ್ಲಿ ಇರುವ ಎಲ್ಲಾ ಲಾ ಮೈಸನ್‌ ಸಿಟ್ರಾನ್‌ ಫಿಜಿಟಲ್‌ ಷೋರೂಂಗಳಲ್ಲಿ ಬುಧವಾರದಿಂದಲೇ ವಿತರಣೆ ಆರಂಭ ಆಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು