ಹೀರೊ ಹೊಸ ಸ್ಕೂಟರ್ ಮಾರುಕಟ್ಟೆಗೆ

ಬೆಂಗಳೂರು: ವಿಶ್ವದ ಅತಿದೊಡ್ಡ ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಎಂಬ ಹೆಗ್ಗಳಿಕೆಯನ್ನು ಹೊತ್ತಿರುವ ಹೀರೊ ಮೊಟೊಕಾರ್ಪ್, 110 ಸಿಸಿ ಸಾಮರ್ಥ್ಯದ ‘ಜೂಮ್’ ಹೆಸರಿನ ಸ್ಕೂಟರ್ ಅನಾವರಣ ಮಾಡಿದೆ.
ಈ ಸ್ಕೂಟರ್ ಸಮಕಾಲೀನ ವಿನ್ಯಾಸ ಹಾಗೂ ಅಸಾಧಾರಣವಾದ ಕಾರ್ಯಕ್ಷಮತೆಯನ್ನು ಹೊಂದಿದೆ ಎಂದು ಕಂಪನಿ ಹೇಳಿದೆ. ದೊಡ್ಡದಾದ ಹಾಗೂ ಅಗಲವಾದ ಟೈರ್‌ಗಳು, ಚುರುಕಾದ ಆ್ಯಕ್ಸಲರೇಷನ್ (ವೇಗೋತ್ಕರ್ಷ) ಈ ಸ್ಕೂಟರ್‌ನಲ್ಲಿ ಇವೆ.
ಹೀರೊ ಇಂಟೆಲಿಜೆಂಟ್ ಕಾರ್ನರಿಂಗ್ ಲೈಟ್ ಸೌಲಭ್ಯವು ರಾತ್ರಿಯ ಸಂಚಾರದಲ್ಲಿ ಹೆಚ್ಚಿನ ಸುರಕ್ಷತೆಯನ್ನು ಖಾತರಿಪಡಿಸುತ್ತದೆ ಎಂದು ಕಂಪನಿ ಹೇಳಿದೆ. ಸ್ಕೂಟರ್‌ನ ಪರಿಚಯಾತ್ಮಕ ಎಕ್ಸ್ ಷೋರೂಂ ಬೆಲೆಯು ₹ 68,599ರಿಂದ ಶುರುವಾಗುತ್ತದೆ.
‘ಈ ಮಾದರಿಯ ಮೂಲಕ ನಾವು ಸ್ಕೂಟರ್ ವಿಭಾಗವನ್ನು ಹೊಸದಾಗಿ ವ್ಯಾಖ್ಯಾನಿಸಲು ಮುಂದಾಗುತ್ತಿದ್ದೇವೆ. ದೇಶದ ಯುವಕರನ್ನು ನಾವು ಬಹಳ ಚೆನ್ನಾಗಿ ಅರ್ಥ ಮಾಡಿಕೊಂಡಿರುವುದರ ಫಲವಾಗಿ ಈ ಸ್ಕೂಟರ್ ಸಿದ್ಧವಾಗಿದೆ’ ಎಂದು ಕಂಪನಿಯ ಮುಖ್ಯ ಬೆಳವಣಿಗೆ ಅಧಿಕಾರಿ ರಂಜೀವಜಿತ್ ಸಿಂಗ್ ಹೇಳಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.