ಗುರುವಾರ , ಮೇ 26, 2022
24 °C

ಹೊಸ ಹೋಂಡಾ ಸಿಬಿ200ಎಕ್ಸ್‌ ಬೈಕ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಹೋಂಡಾ ಮೋಟರ್‌ಸೈಕಲ್ ಆ್ಯಂಡ್‌ ಸ್ಕೂಟರ್‌ ಇಂಡಿಯಾ ಕಂಪನಿಯು (ಎಚ್‌ಎಂಎಸ್‌ಐ) ದೇಶದ ಮಾರುಕಟ್ಟೆಗೆ ಗುರುವಾರ ಹೊಸ ಸಿಬಿ200ಎಕ್ಸ್‌ ದ್ವಿಚಕ್ರ ವಾಹನ ಬಿಡುಗಡೆ ಮಾಡಿದೆ. ಗುರುಗ್ರಾಮದಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 1.44 ಲಕ್ಷ ಇದೆ.

ಭಾರತದ ಯುವಪೀಳಿಗೆಯ ಜೀವನ ಶೈಲಿಯನ್ನು ಗಮನದಲ್ಲಿ ಇಟ್ಟುಕೊಂಡು ಈ ದ್ವಿಚಕ್ರ ವಾಹನ ಬಿಡುಗಡೆ ಮಾಡಲಾಗಿದೆ. ನಗರ ಪ್ರದೇಶಗಳಲ್ಲಿ ನಿತ್ಯ ಚಲಾಯಿಸಲು ಹಾಗೂ ನಗರದಾಚೆಗೆ ವಾರಾಂತ್ಯದ ಪ್ರಯಾಣಕ್ಕೆ ಇದು ಸೂಕ್ತವಾಗಿದೆ ಎಂದು ಕಂಪನಿಯ ಅಧ್ಯಕ್ಷ ಅತುಷಿ ಒಗಾಟಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದು ಬಿಎಸ್‌–6 ಮಾನದಂಡಕ್ಕೆ ಅನುಗುಣವಾಗಿದ್ದು ಸುಧಾರಿತ 184 ಸಿಸಿ ಎಂಜಿನ್‌ ಹೊಂದಿದೆ. ಡಿಜಿಟಲ್‌ ಲಿಕ್ವಿಡ್‌ ಕ್ರಿಸ್ಟಲ್‌ ಮೀಟರ್‌, ಸ್ಪ್ಲಿಟ್‌ ಸೀಟ್ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ. ಬುಕಿಂಗ್‌ ಆರಂಭವಾಗಿದ್ದು, ಮುಂದಿನ ತಿಂಗಳಿನಿಂದ ಗ್ರಾಹಕರಿಗೆ ವಿತರಣೆ ಮಾಡುವ ನಿರೀಕ್ಷೆಯನ್ನು ಹೊಂದಿರುವುದಾಗಿ ಒಗಾಟಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು