ಬುಧವಾರ, ಜೂನ್ 29, 2022
24 °C

GRAND i10 NIOS: ಹುಂಡೈ ಗ್ರಾಂಡ್ i10 ನಿಯೊಸ್ ಕಾರ್ಪೊರೇಟ್ ಆವೃತ್ತಿ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

PTI PHOTO

ನವದೆಹಲಿ: ಹುಂಡೈ ಮೋಟಾರ್ ಇಂಡಿಯಾ, ದೇಶದ ಕಾರು ಮಾರುಕಟ್ಟೆಗೆ ನೂತನ ಗ್ರಾಂಡ್ i10 ನಿಯೊಸ್ ಕಾರ್ಪೊರೇಟ್ ಎಡಿಶನ್ ಬಿಡುಗಡೆ ಮಾಡಿದೆ.

1.2 ಲಿ. ಪೆಟ್ರೋಲ್ ಎಂಜಿನ್ ಮಾದರಿಯ ಕಾರು ಮ್ಯಾನುವಲ್ ಮತ್ತು ಅಟೋಮ್ಯಾಟಿಕ್ ಎಂಬ ಎರಡು ಆಯ್ಕೆಗಳಲ್ಲಿ ದೊರೆಯಲಿದೆ.

ಫೈವ್ ಸ್ಪೀಡ್ ಮ್ಯಾನುವಲ್ ಆವೃತ್ತಿಗೆ ₹6.28 ಲಕ್ಷ ಮತ್ತು ಅಟೋಮ್ಯಾಟಿಕ್ ಆವೃತ್ತಿಗೆ ₹6.97 ಲಕ್ಷ ಬೆಲೆ (ಎಕ್ಸ್ ಶೋ ರೂಮ್ ದರ) ನಿಗದಿಪಡಿಸಲಾಗಿದೆ ಎಂದು ಹುಂಡೈ ಹೇಳಿದೆ.

ಹುಂಡೈ ಗ್ರಾಂಡ್ i10 ನಿಯೊಸ್ ಕಾರ್ಪೊರೇಟ್ ಎಡಿಶನ್ ಕಾರಿನ ಒಳಭಾಗ ಸಂಪೂರ್ಣ ಕಪ್ಪು ಬಣ್ಣದ್ದಾಗಿದ್ದು, ಕೆಂಪು ಬಣ್ಣದ ಮಿಶ್ರ ಗೆರೆಗಳ ವಿನ್ಯಾಸ ಹೊಂದಿದೆ.

ಪ್ರಮುಖವಾಗಿ, ಯುವಜನತೆಯನ್ನು ಗಮನದಲ್ಲಿರಿಸಿಕೊಂಡು ನೂತನ ಕಾರು ಪರಿಚಯಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು