ನವದೆಹಲಿ: ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ಕಂಪನಿಯು ವೆನ್ಯು ಮಾದರಿಯ ಎನ್–ಲೈನ್ ಆವೃತ್ತಿಯನ್ನು ಮಂಗಳವಾರ ಬಿಡುಗಡೆ ಮಾಡಿದೆ. ಅಲ್ಲದೆ, ದೇಶದ ಮಾರುಕಟ್ಟೆಯಲ್ಲಿ ಈ ವರ್ಷ ದಾಖಲೆಯ ಪ್ರಮಾಣದಲ್ಲಿ ವಾಹನ ಮಾರಾಟ ಆಗುವ ನಿರೀಕ್ಷೆ ಕಂಪನಿಗೆ ಇದೆ.

‘ಸೆಮಿಕಂಡಕ್ಟರ್ ಕೊರತೆಯು ಸುಧಾರಿಸುತ್ತಿದೆ. ವಾಹನಗಳಿಗೆ ಬೇಡಿಕೆ ಚೆನ್ನಾಗಿದೆ’ ಎಂದು ಕಂಪನಿಯ ಮಾರಾಟ, ಮಾರುಕಟ್ಟೆ ಹಾಗೂ ಸೇವಾ ವಿಭಾಗದ ನಿರ್ದೇಶಕ ತರುಣ್ ಗರ್ಗ್ ಹೇಳಿದ್ದಾರೆ.

ವೆನ್ಯು ಎನ್–ಲೈನ್ ಆವೃತ್ತಿಯ ಎಕ್ಸ್–ಷೋರೂಂ ಬೆಲೆಯು ₹ 12.16 ಲಕ್ಷದಿಂದ ₹ 13.15 ಲಕ್ಷದವರೆಗೆ ಇದೆ. ಹಿಂದಿನ ವರ್ಷದ ಸೆಪ್ಟೆಂಬರ್ನಲ್ಲಿ ಕಂಪನಿಯು ಐ20 ಮಾದರಿಯ ಎನ್–ಲೈನ್ ಆವೃತ್ತಿಯನ್ನು ಬಿಡುಗಡೆ ಮಾಡಿತ್ತು.

ವೆನ್ಯು ಎನ್–ಲೈನ್ ಆವೃತ್ತಿಯಲ್ಲಿ 1 ಲೀಟರ್ ಸಾಮರ್ಥ್ಯದ ಟರ್ಬೊ ಪೆಟ್ರೋಲ್ ಎಂಜಿನ್ ಇದೆ. ಏಳು ಗಿಯರ್ಗಳ ಆಟೊಮ್ಯಾಟಿಕ್ ಟ್ರಾನ್ಸ್ಮಿಷನ್ ಸೌಲಭ್ಯ ಇದೆ. ಈ ವಾಹನದ ಮಾರಾಟವು ಮುಂದಿನ ವರ್ಷದಲ್ಲಿ 10 ಸಾವಿರದ ಗಡಿಯನ್ನು ದಾಟಲಿದೆ ಎಂಬ ನಿರೀಕ್ಷೆಯನ್ನು ಕಂಪನಿಯು ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.