ಶನಿವಾರ, ಅಕ್ಟೋಬರ್ 1, 2022
20 °C

ಮಹೀಂದ್ರ: ಬೊಲೆರೊ ಮ್ಯಾಕ್ಸ್‌ ಪಿಕಪ್‌ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ದೇಶದ ಮಾರುಕಟ್ಟೆಗೆ ಹೊಸ ಬೊಲೆರೊ ಮ್ಯಾಕ್ಸ್‌ ಪಿಕಪ್‌ ಸಿಟಿ3000 ಬಿಡುಗಡೆ ಮಾಡಿದೆ. ಇದರ ಪರಿಚಯಾತ್ಮಕ ಬೆಲೆ ₹ 7.68 ಲಕ್ಷದಿಂದ (ಎಕ್ಸ್‌ ಷೋರೂಂ) ಆರಂಭ ಆಗುತ್ತದೆ.

₹ 25 ಸಾವಿರ ಡೌನ್‌ಪೇಮೆಂಟ್‌ ಮತ್ತು ಆಕರ್ಷಕ ಹಣಕಾಸು ಯೋಜನೆ ಲಭ್ಯವಿದೆ ಎಂದು ಕಂಪನಿಯು ತಿಳಿಸಿದೆ.

ಹೆಚ್ಚುತ್ತಿರುವ ಸಾಗಣೆಯ ಅಗತ್ಯಗಳನ್ನು ಗಮನದಲ್ಲಿ ಇಟ್ಟುಕೊಂಡು ಪಿಕಪ್‌ ವಿಭಾಗದಲ್ಲಿ ಹೊಸ ಬ್ರ್ಯಾಂಡ್‌ ಪರಿಚಯಿಸಲಾಗಿದೆ. ಆಧುನಿಕ ವಹಿವಾಟಿನ ಅಗತ್ಯಗಳನ್ನು ಇದು ಈಡೇರಿಸಲಿದೆ. ಇದು ಐಮ್ಯಾಕ್ಸ್‌ ಟೆಲೆಮ್ಯಾಟಿಕ್ಸ್‌ ಸಲ್ಯೂಷನ್ ತಂತ್ರಜ್ಞಾನ ಒಳಗೊಂಡಿದೆ. 1,300 ಕೆ.ಜಿಗೂ ಹೆಚ್ಚು ಭಾರ ಹೊರುವ ಸಾಮರ್ಥ್ಯ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು