ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಟೋಬರ್‌ 7ರಿಂದ ಮಹೀಂದ್ರಾ ಎಕ್ಸ್‌ಯುವಿ700 ಬುಕಿಂಗ್‌ ಆರಂಭ

Last Updated 30 ಸೆಪ್ಟೆಂಬರ್ 2021, 10:54 IST
ಅಕ್ಷರ ಗಾತ್ರ

ಮುಂಬೈ: ಮಹೀಂದ್ರ ಆ್ಯಂಡ್‌ ಮಹೀಂದ್ರ ಕಂಪನಿಯು ತನ್ನ ಪ್ರೀಮಿಯಂ ಸ್ಪೋರ್ಟ್ಸ್‌ ಯುಟಿಲಿಟಿ ವಾಹನ ‘ಎಕ್ಸ್‌ಯುವಿ700’ ಬುಕಿಂಗ್‌ ಅಕ್ಟೋಬರ್‌ 7ರಿಂದ ಆರಂಭ ಆಗಲಿದೆ ಎಂದು ಗುರುವಾರ ತಿಳಿಸಿದೆ.

ಈ ಎಕ್ಸ್‌ಯುವಿ ಡೀಸೆಲ್‌ ಮತ್ತು ಗ್ಯಾಸೊಲಿನ್‌ ಆವೃತ್ತಿಗಳಲ್ಲಿ ಇದ್ದು, ಮ್ಯಾನುಯಲ್‌ ಮತ್ತು ಆಟೊಮ್ಯಾಟಿಕ್‌ ಆಯ್ಕೆಗಳನ್ನು ಹೊಂದಿದೆ ಎಂದು ಹೇಳಿದೆ.

ಎಂಎಕ್ಸ್‌ ಮತ್ತು ಎಕ್ಸ್‌ ಎಂಬ ಎರಡು ಸರಣಿಗಳಲ್ಲಿ ಎಕ್ಸ್‌ಯುವಿ700 ಅನ್ನು ಕಂಪನಿ ನೀಡುತ್ತಿದೆ. ಎಎಕ್ಸ್‌ ಸರಣಿಯಲ್ಲಿ ಎಎಕ್ಸ್‌3, ಎಎಕ್ಸ್‌5 ಮತ್ತು ಎಎಕ್ಸ್‌7 ಎಂದು ಮತ್ತೆ ಮೂರು ವಿಭಾಗಗಳಿವೆ.

ಎಂಎಕ್ಸ್‌ ಸರಣಿಯ ಬೆಲೆ ₹ 11.99 ಲಕ್ಷದಿಂದ ಮತ್ತು ಎಎಕ್ಸ್ ಸರಣಿಯ ಬೆಲೆ ₹ 13.99 ಲಕ್ಷದಿಂದ ಆರಂಭ ಆಗುತ್ತದೆ. ಮೊದಲ 25 ಸಾವಿರ ಬುಕಿಂಗ್‌ಗೆ ಮಾತ್ರ ಈ ಬೆಲೆ ಅನ್ವಯಿಸಲಿದೆ ಎಂದು ಕಂಪನಿಯು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT