ಗುರುವಾರ , ಡಿಸೆಂಬರ್ 3, 2020
19 °C

ಮಾರುತಿ ಸ್ವಿಫ್ಟ್‌ನ ವಿಶೇಷ ಆವೃತ್ತಿ ಬಿಡುಗಡೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಾರುತಿ ಸುಜುಕಿ ಇಂಡಿಯಾ ಕಂಪನಿಯು ದೇಶದ ಮಾರುಕಟ್ಟೆಗೆ ಸ್ವಿಫ್ಟ್‌ನ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಹಾಲಿ ಇರುವ ಸ್ವಿಫ್ಟ್‌ನ ಬೆಲೆಗಿಂತಲೂ ₹ 24,999ರಷ್ಟು ಹೆಚ್ಚು ಬೆಲೆಯನ್ನು ಇದಕ್ಕೆ ನೀಡಬೇಕು. ಸದ್ಯ, ಸ್ವಿಫ್ಟ್‌ನ ಎಕ್ಸ್‌ ಷೋರೂಂ ಬೆಲೆ ₹ 5.19 ಲಕ್ಷದಿಂದ ₹ 8.02 ಲಕ್ಷದವರೆಗಿದೆ.

‘ಪ್ರೀಮಿಯಂ ಹ್ಯಾಚ್‌ಬ್ಯಾಕ್‌ ವಿಭಾಗದಲ್ಲಿ ನಮ್ಮ ಮುಂಚೂಣಿ ಸ್ಥಾನ ಬಲಪಡಿಸಲು ಸ್ವಿಫ್ಟ್‌ ನೆರವಾಗಿದೆ. ವೈಶಿಷ್ಟ್ಯ, ವಿನ್ಯಾಸ ಹಾಗೂ ತಂತ್ರಜ್ಞಾನದಲ್ಲಿ ಸ್ವಿಫ್ಟ್‌ ಹೊಸತನವನ್ನು ಒಳಗೊಳ್ಳುತ್ತಿದ್ದು, ಭಾರತದ ಗ್ರಾಹಕರ ಅದ್ಯತೆಗಳಿಗೆ ಅನುಗುಣವಾಗಿ ರೂಪುಗೊಳ್ಳುತ್ತಿದೆ’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು