ಗುರುವಾರ , ಫೆಬ್ರವರಿ 20, 2020
19 °C

ಕಾರಿನಲ್ಲೇ ಮಲಗಲು ಹಾಸಿಗೆ, ಊಟಕ್ಕೆ ಅಡುಗೆ ಮನೆ: ಬೆಂಜ್‌ನ ಮಾರ್ಕೊ ಪೋಲೊ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ವಿ–ಕ್ಲಾಸ್‌ ಮಾರ್ಕೊ ಪೋಲೊ

ನವದೆಹಲಿ: ಜಾಗತಿಕ ಮಟ್ಟದಲ್ಲಿ ಮಾರುಕಟ್ಟೆ ಹೊಂದಿರುವ ಜರ್ಮನಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಜ್‌ ಗುರುವಾರ ಹೊಸ 'ಮಾರ್ಕೊ ಪೋಲೊ' ಎಂಪಿವಿ ಬಿಡುಗಡೆ ಮಾಡಿದೆ. ಭಾರತದಲ್ಲಿ ಇದರ ಆರಂಭಿಕ ಬೆಲೆ ₹1.38 ಕೋಟಿ.

ವಿ–ಕ್ಲಾಸ್‌ ಮಾರ್ಕೊ ಪೋಲೊ ಮೂಲಕ ದೇಶದಲ್ಲಿ ಐಷಾರಾಮಿ ಮಲ್ಟಿ ಪರ್ಪಸ್‌ ವೆಹಿಕಲ್‌ (ಎಂಪಿವಿ) ವಿಭಾಗದ ಮಾರುಕಟ್ಟೆ ವಿಸ್ತರಿಸಿಕೊಳ್ಳುತ್ತಿದೆ. ಎರಡು ಮಾದರಿಗಳಲ್ಲಿ ಲಭ್ಯವಿರುವ ಮಾರ್ಕೊ ಪೋಲೊ, ಹಾರಿಜಾನ್‌ಗೆ ₹1.38 ಕೋಟಿ ಹಾಗೂ ಮತ್ತೊಂದು ಮಾದರಿಗೆ ₹1.46 ಕೋಟಿ ನಿಗದಿಯಾಗಿದೆ. 

ರಜಾ ದಿನಗಳಲ್ಲಿ ಪ್ರಯಾಣ ಹಾಗೂ ವಾರಾಂತ್ಯದ ಪ್ರಯಾಣಗಳಿಗೆ ತಕ್ಕದಾದ ಸೌಲಭ್ಯಗಳನ್ನು ಇದು ಒಳಗೊಂಡಿದೆ. ನಾಲ್ಕು ಜನರು ಆರಾಮವಾಗಿ ಪ್ರಯಾಣಿಸಲು, ಹಾಸಿಗೆ ಮೇಲೆ ಮಲಗಲು ಹಾಗೂ ಅಡುಗೆ ಮಾಡಿಕೊಳ್ಳುವ ಅವಕಾಶವಿದೆ. ಪ್ರತ್ಯೇಕ ವಿಭಾಗದಲ್ಲಿ ಎರಡು ಗ್ಯಾಸ್ ಬರ್ನರ್‌ಗಳನ್ನು ಅಳವಡಿಸಲಾಗಿದೆ. ಕೈ ಮತ್ತು ಪಾತ್ರೆ ತೊಳೆಯಲು ಸಿಂಕ್‌, ಮಡಚಿಡಬಹುದಾದ ಟೇಬಲ್‌ ಹಾಗೂ ರೆಫ್ರಿಜರೇಟರ್‌ ಅಳವಡಿಸಲಾಗಿದೆ. 

ನೀರು ಸಂಗ್ರಹಕ್ಕೆ ಟ್ಯಾಂಕ್‌ ಹಾಗೂ ಬಳಸಿದ ನೀರು ಸಂಗ್ರಹಿಸಲು ಮತ್ತೊಂದು ಟ್ಯಾಂಕ್‌ ಹೊಂದಿದೆ. ಆರು ಸೀಟ್‌ಗಳಿಗೆ ವಿಸ್ತರಿಸಿಕೊಳ್ಳುವ ಆಯ್ಕೆಯನ್ನೂ ಕಂಪನಿ ನೀಡುತ್ತಿದೆ. 1950 ಸಿಸಿ ಡೀಸೆಲ್‌ ಎಂಜಿನ್‌ ಹೊಂದಿದ್ದು, 163 ಹೆಚ್‌ಪಿ ಮತ್ತು 380 ನ್ಯೂಟನ್ ಮೀಟರ್‌ ಟಾರ್ಕ್‌ ಹೊಮ್ಮಿಸುವ ಸಾಮರ್ಥ್ಯವಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು