ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲಿ ಮರ್ಸಿಡಿಸ್‌ ಹೊಸ ಕಾರು 'ಎಸ್‌ಯುವಿ ಜಿಎಲ್‌ಸಿ'; ಬೆಲೆ ₹52.56 ಲಕ್ಷ

Last Updated 3 ಡಿಸೆಂಬರ್ 2019, 11:49 IST
ಅಕ್ಷರ ಗಾತ್ರ

ನವದೆಹಲಿ: ಜರ್ಮಿಯ ಐಷಾರಾಮಿ ಕಾರು ತಯಾರಿಕಾ ಕಂಪನಿ ಮರ್ಸಿಡಿಸ್‌ ಬೆಂಜ್‌ ತನ್ನ ಪ್ರೀಮಿಯಂ 'ಎಸ್‌ಯುವಿ ಜಿಎಲ್‌ಸಿ' ಕಾರನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಎರಡೂ ಮಾದರಿಯಲ್ಲಿ ಜಿಎಲ್‌ಸಿ ಲಭ್ಯವಿದ್ದು, ಎಕ್ಸ್–ಷೋರೂಂನಲ್ಲಿ ಬೆಲೆ ₹52.56 ಲಕ್ಷ ನಿಗದಿಯಾಗಿದೆ. ಈ ಹೊಸ ಎಸ್‌ಯುವಿ ಜಿಎಲ್‌ಸಿ ಅತ್ಯಾಧುನಿಕ ಎಂಬಕ್ಸ್‌ (MBUX)ತಂತ್ರಜ್ಞಾನವನ್ನು ಹೊಂದಿದೆ.

ಬಿಎಸ್‌ 6 ಗುಣಮಟ್ಟದ 2.0 ಲೀಟರ್ ಪೆಟ್ರೋಲ್‌ ಇಂಜಿನ್‌ 194 ಬಿಎಚ್‌ಪಿ ಮತ್ತು 320 ನ್ಯೂಟನ್‌ ಮೀಟರ್‌ ಟಾರ್ಕ್‌ ಹೊಮ್ಮಿಸುವ ಸಾಮರ್ಥ್ಯ ಹೊಂದಿದೆ. ಡೀಸೆಲ್ ಇಂಜಿನ್‌ 192 ಬಿಎಚ್‌ಪಿ ಮತ್ತು 400 ನ್ಯೂಟನ್‌ ಮೀಟರ್‌ ಟಾರ್ಕ್‌ ಹೊಮ್ಮಿಸುತ್ತದೆ.

ಮರ್ಸಿಡಿಸ್‌ ಬೆಂಜ್‌ ಇಂಡಿಯಾ ಕಾರುಗಳ ಪೈಕಿಜಿಎಲ್‌ಸಿ ಅತಿ ಹೆಚ್ಚು ಮಾರಾಟವಾಗುತ್ತಿರುವ ಎಸ್‌ಯುವಿ ಆಗಿದ್ದು, ಈವರೆಗೆ 7,000 ಕಾರುಗಳು ಮಾರಾಟಗೊಂಡಿವೆ. ಕಾರಿನ ವ್ಯವಸ್ಥೆಯನ್ನು ಅಗತ್ಯಕ್ಕೆ ಹೊಂದಿಸಿಕೊಳ್ಳಲು ಅನುವಾಗಲು ಎಂಬಕ್ಸ್‌ ತಂತ್ರಜ್ಞಾನ ಅಳವಡಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಮರು ವಿನ್ಯಾಸಗೊಳಿಸಿದ ಎಲ್‌ಇಡಿ ಹೆಡ್‌ಲ್ಯಾಂಪ್‌, ಅಲಾಯ್‌ ವೀಲ್ಸ್‌, ಇನ್‌ಫೊಟೈನ್ಮೆಂಟ್‌ ಸಿಸ್ಟಮ್‌ 10.25 ಇಂಚು ಟಚ್‌ ಸ್ಟ್ರೀನ್‌ ಹೊಂದಿದೆ. 'ಹೇಯ್‌ ಮರ್ಸಿಡಿಸ್‌' ಎಂದರೆ ಪ್ರತಿಕ್ರಿಯಿಸುವ ವಾಯ್ಸ್‌ ಕಮಾಂಡ್‌ ವ್ಯವಸ್ಥೆ, 64 ಬಣ್ಣಗಳ ಆಂಬಿಯೆನ್ಸ್‌ ಲೈಟಿಂಗ್‌(ಒಳಗಿನ ಬೆಳಕಿನ ವಾತಾವರಣ), ವೈರ್‌ಲೆಸ್‌ ಚಾರ್ಜಿಂಗ್‌ ವ್ಯವಸ್ಥೆ ಸೇರಿದಂತೆ ಹಲವು ವಿಶೇಷತೆಗಳನ್ನು ಒಳಗೊಂಡಿದೆ.

ಎಸ್‌ಯುವಿಗಳ ಪೈಕಿ ತಾಂತ್ರಿಕವಾಗಿ ಆಧುನಿಕರಣಗೊಂಡಿರುವ ಹಾಗೂ 'ಆಕ್ಟೀವ್‌ ಬ್ರೇಕಿಂಗ್‌ ಅಸಿಸ್ಟ್‌' ಹೊಂದಿರುವ ಸಮರ್ಥ ಎಸ್‌ಯುವಿ ಆಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಪೆಟ್ರೋಲ್‌ ಇಂಜಿನ್‌ನ 'ಜಿಎಲ್‌ಸಿ 200' ಬೆಲೆ ₹52.75 ಲಕ್ಷ, ಡೀಸೆಲ್‌ ಇಂಜಿನ್‌ ಹೊಂದಿರುವ 'ಜಿಎಲ್‌ಸಿ 200ಡಿ' ಬೆಲೆ ₹57.75 ಲಕ್ಷ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT