ಭಾನುವಾರ, 4 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಾಟಾ ಮೋಟರ್ಸ್‌: ಟಿಯಾಗೊ, ಟಿಗಾರ್‌ನ ಸಿಎನ್‌ಜಿ ಟ್ರಿಮ್‌ ಬಿಡುಗಡೆ

Last Updated 19 ಜನವರಿ 2022, 11:27 IST
ಅಕ್ಷರ ಗಾತ್ರ

ನವದೆಹಲಿ: ಟಾಟಾ ಮೋಟರ್ಸ್‌ ತನ್ನ ಟಿಯಾಗೊ ಮತ್ತು ಟಿಗಾರ್‌ ಕಾರುಗಳ ಸಿಎನ್‌ಜಿ ಅವತರಣಿಕೆಯನ್ನು ಬುಧವಾರ ಬಿಡುಗಡೆ ಮಾಡಿದೆ. ದೆಹಲಿಯಲ್ಲಿ ಈ ಕಾರುಗಳ ಎಕ್ಸ್‌ ಷೋರೂಂ ಬೆಲೆ ಕ್ರಮವಾಗಿ ₹ 6.09 ಲಕ್ಷ ಮತ್ತು ₹ 8.41 ಲಕ್ಷ ಇದೆ.

ಟಿಯಾಗೊ ಐಸಿಎನ್‌ಜಿ ಬೆಲೆಯು ₹ 6.09 ಲಕ್ಷದಿಂದ ₹ 7.64 ಲಕ್ಷದವರೆಗಿದೆ. ಮೂರು ಆವೃತ್ತಿಗಳ ಟಿಗಾರ್ ಐಸಿಎನ್‌ಜಿ ಬೆಲೆಯು ಕ್ರಮವಾಗಿ ₹ 7.69 ಲಕ್ಷ, ₹ 8.29 ಲಕ್ಷ ಮತ್ತು ₹ 8.41 ಲಕ್ಷ ಇದೆ.

ಮುಂದಿನ ಐದು ವರ್ಷಗಳಲ್ಲಿ ಸಿಎನ್‌ಜಿ ವಿಭಾಗವು ಉತ್ತಮ ಬೆಳವಣಿಗೆ ಕಾಣಲಿದೆ ಎನ್ನುವುದು ಸ್ಪಷ್ಟವಾಗಿದೆ. ಬೇಡಿಕೆ ಹೆಚ್ಚಾಗಲಿರುವುದಕ್ಕೆ ಅನುಗುಣವಾಗಿ ಎರಡು ಮಾದರಿಗಳ ಸಿಎನ್‌ಜಿ ಅವತರಣಿಕೆ ಬಿಡುಗಡೆ ಮಾಡಲಾಗಿದೆ ಎಂದು ಕಂಪನಿಯ ಪ್ರಯಾಣಿಕ ವಾಹನ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್‌ ಚಂದ್ರ ತಿಳಿಸಿದ್ದಾರೆ.

ಬಿಎಸ್‌6 ಮಾನದಂಡವು ಜಾರಿಗೆ ಬಂದ ಬಳಿಕ ಸಿಎನ್‌ಜಿ ವಾಹನಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ಇದೇ ಹೊತ್ತಿನಲ್ಲಿ ಡೀಸೆಲ್‌ ಚಾಲಿತ ಹ್ಯಾಚ್‌ಬ್ಯಾಕ್‌ ಮತ್ತು ಕಾಂಪ್ಯಾಕ್ಟ್‌ ಸೆಡಾನ್‌ ಕಾರುಗಳ ಬೇಡಿಕೆ ಕುಸಿಯುತ್ತಿದೆ ಎಂದು ಅವರು ಹೇಳಿದ್ದಾರೆ.

ಸಿಎನ್‌ಜಿ ಅವತರಣಿಕೆಗಳು 1.2 ಲೀಟರ್‌ ಸಾಮರ್ಥ್ಯದ, ಬಿಎಸ್‌6 ಎಂಜಿನ್ ಹೊಂದಿದ್ದು, ಗರಿಷ್ಠ 73 ಪಿಎಸ್‌ ಶಕ್ತಿ ಉತ್ಪಾದಿಸಬಲ್ಲದು ಎಂದು ಕಂಪನಿಯು ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT