ಮಂಗಳವಾರ, ಫೆಬ್ರವರಿ 18, 2020
24 °C

ಟಾಟಾ 'ನೆಕ್ಸಾನ್‌' ಎಲೆಕ್ಟ್ರಿಕ್‌ ಎಸ್‌ಯುವಿ ಬಿಡುಗಡೆ: ಬೆಲೆ ₹13.99 ಲಕ್ಷ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಟಾಟಾ ನೆಕ್ಸಾನ್‌ ಎಲೆಕ್ಟ್ರಿಕ್‌ ಎಸ್‌ಯುವಿ

ಮುಂಬೈ: ಟಾಟಾ ಮೋಟಾರ್ಸ್‌ ಕಾಂಪ್ಯಾಕ್ಟ್‌ ಸ್ಫೋರ್ಟ್ಸ್‌ ಯುಟಿಲಿಟಿ 'ನೆಕ್ಸಾನ್‌' ಎಲೆಕ್ಟ್ರಿಕ್‌ ಕಾರು ಬಿಡುಗಡೆಯಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ₹13.99 ಲಕ್ಷ ನಿಗದಿಯಾಗಿದೆ. ಸಂಸ್ಥೆಯು ಕಳೆದ ಡಿಸೆಂಬರ್‌ನಲ್ಲಿ ಎಲೆಕ್ಟ್ರಿಕ್‌ ಆವೃತ್ತಿಯ ಕಾರು ಅನಾವರಣಗೊಳಿಸಿತ್ತು.

ಮುಂದಿನ 24 ತಿಂಗಳಲ್ಲಿ ಟಾಟಾ ಮೋಟಾರ್ಸ್‌ ಎರಡು ಎಸ್‌ಯುವಿ, ಒಂದು ಹ್ಯಾಚ್‌ಬ್ಯಾಕ್‌ ಹಾಗೂ ಸೆಡಾನ್‌ ಸೇರಿದಂತೆ ಒಟ್ಟು ನಾಲ್ಕು ಮಾದರಿಯ ಎಲೆಕ್ಟ್ರಿಕ್‌ ಕಾರುಗಳನ್ನು ಬಿಡುಗಡೆ ಮಾಡುವ ಯೋಜನೆ ಇರುವುದಾಗಿ ಟಾಟಾ ಸನ್ಸ್‌ ಗ್ರೂಪ್‌ನ ಅಧ್ಯಕ್ಷ ಎನ್‌.ಚಂದ್ರಶೇಕರನ್‌ ಘೋಷಿಸಿದರು. 

ಜಿಪ್ಟ್ರಾನ್‌ ಟೆಕ್ನಾಲಜಿ ಅಳವಡಿಸಿಕೊಂಡಿರುವ ಎಲೆಕ್ಟ್ರಿಕ್‌ ಎಸ್‌ಯುವಿ ವೇಗದ ಚಾರ್ಜಿಂಗ್‌ ಸೌಲಭ್ಯ ಹೊಂದಿದ್ದು, ಒಮ್ಮೆ ಪೂರ್ಣ ಚಾರ್ಜ್‌ ಮಾಡಿದರೆ 312 ಕಿ.ಮೀ. ಸಂಚರಿಸಬಹುದಾಗಿದೆ.

129 ಪಿಎಸ್‌ ಎಸಸಿ ಮೋಟಾರ್‌ಗೆ 30.2 ಕಿ.ವ್ಯಾಟ್‌ ಹವರ್‌ ಲಿಥಿಯಮ್‌ ಐಯಾನ್‌ ಬ್ಯಾಟರಿ ಶಕ್ತಿ ನೀಡುತ್ತದೆ. ಅಳವಡಿಸಲಾಗಿರುವ ಎಲೆಕ್ಟ್ರಿಕ್‌ ಮೋಟಾರ್‌ 245 ನ್ಯೂಟನ್‌ ಮೀಟರ್‌ ಟಾರ್ಕ್ ಬಿಡುಗಡೆ ಮಾಡುತ್ತದೆ. ಶೂನ್ಯದಿಂದ 100 ಕಿ.ಮೀ. ವೇಗವನ್ನು 9.9 ಸೆಕೆಂಡ್‌ಗಳಲ್ಲಿ ತಲುಪುವ ಸಾಮರ್ಥ್ಯ ಹೊಂದಿದೆ. 

ಫಾಸ್ಟ್‌ ಡಿಸಿ ಚಾರ್ಜರ್‌ ಮೂಲಕ 60 ನಿಮಿಷಗಳಲ್ಲಿ ಬ್ಯಾಟರಿ ಶೇ 80ರಷ್ಟು ಚಾರ್ಜ್‌ ಆಗುತ್ತದೆ. ಸುದೀರ್ಘ ಬ್ಯಾಟರಿ ಬಾಳಿಕೆ ಹೊಂದಿದ್ದು, ಬ್ಯಾಟರಿಗೆ 8 ವರ್ಷಗಳವರೆಗೆ ಅಥವಾ 1.60 ಲಕ್ಷ ಕಿ.ಮೀ ವಾರಂಟಿ ನೀಡಲಾಗಿದೆ.

ಟಾಟಾ ನೆಕ್ಸಾನ್‌ ಇವಿ ಎಕ್ಸ್‌ಎಂ ಬೆಲೆ ₹13.99 ಲಕ್ಷ, ಎಕ್ಸ್‌ಝಡ್‌+ ಬೆಲೆ ₹14.99 ಲಕ್ಷ ಹಾಗೂ ಎಕ್ಸ್‌ಝಡ್‌+ಲಕ್ಸ್‌ ಬೆಲೆ ₹15.99 ಲಕ್ಷ ಇದೆ. 

ಟಾಟಾ ಸನ್ಸ್‌ನ ಗೌರವ ಅಧ್ಯಕ್ಷ ರತನ್‌ ಟಾಟಾ ಕಾರು ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು