ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಲೆನೊ, ಗ್ಲಾನ್ಸಾ: ಅಣ್ತಮ್ಮ

ಅಕ್ಷರ ಗಾತ್ರ

ಜಪಾನಿನ ಟೊಯೋಟಮತ್ತು ಸುಜುಕಿ ಕಾರು ತಯಾರಿಕಾ ಕಂಪನಿಗಳು2017ರಲ್ಲಿ ಮಾಡಿಕೊಂಡ ಒಪ್ಪಂದದಂತೆ ತಮ್ಮಿಬ್ಬರ ಪಾಲುದಾರಿಕೆಯ ಮೊದಲ ಕಾರು ಟೊಯೋಟ ಗ್ಲಾನ್ಸಾ ರಸ್ತೆಗೆ ಇಳಿಸಲು ಅಂತಿಮ ಸಿದ್ಧತೆಯಲ್ಲಿ ತೊಡಗಿವೆ.

ಮಾರುತಿಯ ಬಲೆನೊ ಕಾರನ್ನು ಟೊಯೋಟ ಜತೆ ಹಂಚಿಕೊಂಡಿದ್ದರಿಂದಾಗಿ ಈಗ ಇದು ಗ್ಲಾನ್ಸಾ ಆಗಿ ಭಾರತದಲ್ಲಿ ಪರಿಚಯಗೊಳ್ಳುತ್ತಿದೆ.ಬಲೆನೊಗೂ ಗ್ಲಾನ್ಸಾಗೂ ಹೆಚ್ಚಿನ ವ್ಯತ್ಯಾಸವೇನೂ ಇಲ್ಲ.ಮುಂಭಾಗದ ಗ್ರಿಲ್‌,ಹೆಡ್‌ಲೈಟ್‌,ಮುಂಭಾಗದ ಬಂಪರ್‌ನಲ್ಲಿ ಒಂದಷ್ಟು ಬದಲಾವಣೆ ಕಾಣಬಹುದು.ಆ ಮೂಲಕ ಬಲೆನೊ ಮತ್ತು ಗ್ಲಾನ್ಸಾಅಣ್ತಮ್ಮರಂತೆಕಾಣುತ್ತವೆ.

ಎರಡೂ ಕಾರುಗಳಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲದಿದ್ದರೂ,ಮಾಲೀಕತ್ವ ಬೇರೆ, ಬೇರೆ ಆಗಿರುವುದರಿಂದ ಸಿಗುವ ಸೌಲಭ್ಯ ಭಿನ್ನವಾಗಿರಲೂ ಸಾಕು.ಈ ಎರಡೂ ಕಾರುಗಳಲ್ಲಿನ ಒಂದಷ್ಟು ವ್ಯತ್ಯಾಸಗಳನ್ನು ಪಟ್ಟಿ ಮಾಡಿದರೆ ಸಿಗುವುದು ಕೆಲವು ಮಾತ್ರ.

ಬಣ್ಣಗಳಲ್ಲಿ ಭಿನ್ನ
ಹಿಂಬದಿಯಿಂದ ಟೊಯೋಟ ಲಾಂಛನ ಮತ್ತು ಗ್ಲಾನ್ಸಾ ಹೆಸರು ಹೊರತುಪಡಿಸಿದರೆ ಬಲೆನೊ ನೋಡಿದಂತೆಯೇ ಆಗಲಿದೆ.ಒಳಾಂಗಣದಲ್ಲಿ ಸ್ಟಿಯರಿಂಗ್ ವೀಲ್‌ನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.ಬಣ್ಣಗಳಲ್ಲಿ ಗ್ಲಾನ್ಸಾ,ಬಲೆನೊಗಿಂತ ಬಿನ್ನ ಬಣ್ಣಗಳಲ್ಲಿ ಕಾಣಿಸಿಕೊಳ್ಳುತ್ತಿದೆ.

ಆದರೆ, ಇನ್ಫೊಟೇನ್‌ಮೆಂಟ್‌ ವಿಭಾಗದಲ್ಲಿ ಆಂಡ್ರಾಯ್ಡ್‌ ಆಟೊ ಮತ್ತು ಆ್ಯಪಲ್ ಕಾರ್‌ಪ್ಲೇ,ಕ್ಲೈಮೇಟ್ ಕಂಟ್ರೋಲ್‌ ಹವಾನಿಯಂತ್ರಿತ ಸಾಧನೆ,ಎಂಐಡಿ ಬಣ್ಣದ ಪರದೆ ಹಾಗೂ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳು ಗ್ಲಾನ್ಸಾದಲ್ಲಿ ನೋಡಬಹುದು.

ಟಾಪ್ ಎಂಡ್‌ ‘ವಿ’ ಮಾದರಿಯಲ್ಲಿ ಟಚ್‌ಸ್ಕ್ರೀನ್‌ ಮಾಹಿತಿ ಪರದೆ,ಸ್ವಯಂಚಾಲಿತ ಹವಾ ನಿಯಂತ್ರಿತ ಸಾಧನ,ಪ್ರೊಜೆಕ್ಟರ್‌ ಹೆಡ್‌ಲ್ಯಾಂಪ್‌,ಎಲ್‌ಇಡಿ ಡೇಲೈಟ್‌ ರನ್ನಿಂಗ್ ಲ್ಯಾಂಪ್‌ಗಳಿವೆ.

ಎಂಜಿನ್‌ ಆಯ್ಕೆ
ಇನ್ನು ಎಂಜಿನ್‌ ವಿಭಾಗದಲ್ಲಿ ಬಲೆನೊ ಎರಡು ಮಾದರಿಯ ಬಿಎಸ್‌–4ಪೆಟ್ರೋಲ್ ಎಂಜಿನ್‌ಗಳನ್ನು ಹೊಂದಿದೆ. 1.2ಲೀಟರ್ ಕೆ ಶ್ರೇಣಿಯ ಮೋಟರ್‌ ಹಾಗೂ ಮತ್ತೊಂದು1.2 ಲೀಟರ್ ಡುಯಲ್ ಜೆಟ್‌ ಮೋಟರ್‌.ಇದು90ಪಿಎಸ್‌ ಶಕ್ತಿ ಉತ್ಪಾದಿಸಬಲ್ಲದು. ಮತ್ತು113ಎನ್‌ಎಂ ಟಾರ್ಕ್‌ ಉತ್ಪಾದಿಸಬಲ್ಲದು.ಜತೆಗೆ ಇಂಧನ ಕ್ಷಮತೆಗೆ ಎಸ್‌ಎಚ್‌ವಿಎಸ್‌ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ.

ಬಲೆನೊ ಕಾರಿನಲ್ಲಿ ‘ಜಿಟಾ’ ಮತ್ತು ‘ಆಲ್ಪಾ’ ಮಾದರಿಯಂತೆಯೇ ಟೊಯೋಟದಲ್ಲಿ ಜಿ ಮತ್ತು ವಿ ಎಂಬಎರಡು ಮಾದರಿಯನ್ನು ಪರಿಚಯಿಸಲಾಗುತ್ತಿದೆ. ಸಿವಿಟಿ ಆಟೊಮೆಟಿಕ್ ಗೇರ್‌ಬಾಕ್ಸ್‌ ಅನ್ನು ಡ್ಯುಯಲ್‌ ಜೆಟ್‌ ಎಂಜಿನ್‌ಗೆ ಅಳವಡಿಸಲಾಗಿದೆ.ಈ ಹಂತದಲ್ಲಿ ಬಲೆನೊಗೆ ಹೋಲಿಸಿದಲ್ಲಿ ಗ್ಲಾನ್ಸಾ ಭಿನ್ನ ಎಂದೆನಿಸಲಿದೆ.ಇದನ್ನು ಹೊರತುಪಡಿಸಿದರೆ5ಸ್ಪೀಡ್‌ ಮ್ಯಾನುಯಲ್ ಟ್ರಾನ್ಸ್‌ಮಿಷನ್‌ ಗೇರ್‌ಬಾಕ್ಸ್‌ ಮಾದರಿಯೂ ಇದೆ.

ಬಲೆನೊದಲ್ಲಿ2ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಮಾದರಿ ಇವೆ.ಆದರೆ ಟೊಯೋಟ, ಪೆಟ್ರೋಲ್ ಮಾದರಿಯ ಎಂಜಿನ್‌ ಮಾತ್ರ ಪರಿಚಯಿಸುತ್ತಿದೆ. 1.2 ಲೀಟರ್‌ ಎಂಜಿನ್‌,ವಿವಿಟಿ ಯೂನಿಟ್‌ ಒಳಗೊಂಡಿರುವ ಗ್ಲಾನ್ಸಾ82ಅಶ್ವಶಕ್ತಿಯೊಂದಿಗೆ114ಎನ್‌ಎಂ ಉತ್ಪಾದಿಸಬಲ್ಲದು.

ಬಲೆನೊ ಜಿಟಾ ಮತ್ತು ಆಲ್ಫಾ ಮಾದರಿಯ ಕಾರಿನ ಬೆಲೆ ಷೋರೂಂನಲ್ಲಿ ₹6.98ಲಕ್ಷ ಮತ್ತು ₹7.58ಇದೆ.ಆದರೆ ಟೊಯೋಟ ಇದೇ ಬೆಲೆಯಲ್ಲೇ ಕಾರನ್ನು ಮಾರಾಟ ಮಾಡಲಿದೆಯೇ ಎಂಬುದಕ್ಕೆ ಜೂನ್6ರವರೆಗೆ ಕಾಯಬೇಕು.

ಒಟ್ಟು ಐದು ಬಣ್ಣಗಳಲ್ಲಿ ಲಭ್ಯವಿರುವ ಗ್ಲಾನ್ಸಾ, ಎರಡು ಕಾರು ತಯಾರಿಕಾ ಕಂಪನಿಗಳ ಒಪ್ಪಂದದ ಮೊದಲ ಉತ್ಪನ್ನವಾಗಿದೆ.ಇದಾದ ನಂತರ ಒಪ್ಪಂದದ ಅನ್ವಯ ಸಿಯಾಜ್ ಮತ್ತು ವಿಟೆರಾ ಬ್ರೀಜಾ ಕೂಡಾ ಟೊಯೋಟ ಬ್ಯಾನರ್ ಅಡಿಯಲ್ಲಿ ಮಾರುಕಟ್ಟೆ ಪ್ರವೇಶಿಸಲಿದೆ.ಹಾಗೆಯೇ ಟೊಯೋಟ ಕೊರೊಲಾ ಆಲ್ಟಿಸ್‌ ಮಾರುತಿ ಬ್ಯಾನರ್‌ನೊಂದಿಗೆ ಪರಿಚಯಗೊಳ್ಳಲಿದೆ.

ಬಲೆನೊಗೆ2ವರ್ಷ ಅಥವಾ40 ಸಾವಿರ ಕಿ.ಮೀ.ವಾರಂಟಿಯನ್ನು ಮಾರುತಿ ಸುಜುಕಿ ನೀಡುತ್ತಿದೆ. ಟೊಯೋಟ ತನ್ನ ಗ್ಲಾನ್ಸಾಗೆ3ವರ್ಷ ಅಥವಾ1ಲಕ್ಷ ಕಿ.ಮೀ.ಗೆ ವಾರಂಟಿ ನೀಡಿ ಗ್ರಾಹಕರನ್ನು ಸೆಳೆಯುವ ಸಾಧ್ಯತೆ ಇದೆ.

ಭಾರತದ ಕಾರು ಮಾರುಕಟ್ಟೆ ವಿಸ್ತರಿಸುತ್ತಲೇ ಇದೆ. ಹೊಸ ಹೊಸ ಕಂಪನಿಗಳು,ಹೊಸ ಕಾರುಗಳು ಇಲ್ಲಿ ಕಾಲಿಡುತ್ತಿವೆ.ಇಂತಹ ಸಂದರ್ಭದಲ್ಲಿ ಒಪ್ಪಂದದ ಮೂಲಕ ಮತ್ತೊಂದು ಕಂಪನಿಯ ಕಾರುಗಳನ್ನು ತಮ್ಮ ಘಟಕಗಳಲ್ಲಿ ತಯಾರಿಸುವ ಹೊಸ ಮಾರುಕಟ್ಟೆ ಪದ್ಧತಿ ಮೂಲಕ ಹೊಸ ಸ್ಪರ್ಧೆಗೆ ಜಪಾನ್ ಮೂಲದ ಕಾರು ಕಂಪನಿಗಳು ಸಜ್ಜಾಗಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT