ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೊಯೊಟಾದಿಂದ ಹೊಸ ಇನ್ನೊವಾ ಕ್ರಿಸ್ಟಾ

Last Updated 24 ನವೆಂಬರ್ 2020, 19:30 IST
ಅಕ್ಷರ ಗಾತ್ರ

ಟೊಯೊಟಾ ಕಿರ್ಲೋಸ್ಕರ್ ಮೋಟರ್‌ (ಟಿಕೆಎಂ) ಕಂಪನಿಯು ದೇಶದ ಮಾರುಕಟ್ಟೆಗೆ ಹೊಸ ಇನ್ನೊವಾ ಕ್ರಿಸ್ಟಾ ಬಿಡುಗಡೆ ಮಾಡಿದೆ. ಕೇರಳ ಹೊರತುಪಡಿಸಿ ಎಕ್ಸ್‌ ಷೋರೂಂ ಬೆಲೆ ₹16.26 ಲಕ್ಷದಿಂದ ₹ 24.33 ಲಕ್ಷದವರೆಗಿದೆ ಎಂದು ಕಂಪನಿ ತಿಳಿಸಿದೆ.

ಹೊಸ ಎಂಪಿವಿಯು ಅತ್ಯಂತ ಸುರಕ್ಷಿತ ಮತ್ತು ಅತ್ಯುತ್ತಮ ವೈಶಿಷ್ಟ್ಯಗಳನ್ನು ಒಳಗೊಂಡಿದೆ. ಅಪ್‌ಗ್ರೇಡೆಡ್‌ ಇನ್ನೊವಾದಲ್ಲಿ ಹೊಸ ಮತ್ತು ದೊಡ್ಡದಾದ ಸ್ಮಾರ್ಟ್‌ ಪ್ಲೇಕಾಸ್ಟ್‌ ಟಚ್‌ಸ್ಕ್ರೀನ್‌ ಆಡಿಯೊ ಅಳವಡಿಸಲಾಗಿದೆ. ರಿಯಲ್‌ ಟೈಮ್‌ ವೆಹಿಕಲ್‌ ಟ್ರ್ಯಾಕಿಂಗ್‌, ಜಿಯೊಫೆನ್ಸಿಂಗ್‌, ಲಾಸ್ಟ್‌ ಪಾರ್ಕ್ಡ್ ಲೊಕೇಷನ್‌ ಹೀಗೆ ಇನ್ನೂ ಹಲವು ವಾಹನದೊಂದಿಗೆ ಸಂಪರ್ಕಿತ ಸೌಲಭ್ಯಗಳನ್ನು ಗ್ರಾಹಕರ ಆನಂದಿಸಬಹುದಾಗಿದೆ. ಹೊಸ ವೈಶಿಷ್ಟ್ಯಗಳು ಜಿಕೆಎಸ್‌, ವಿಎಕ್ಸ್‌ ಮತ್ತು ಜೆಡ್‌ಎಕ್ಸ್‌ ಗ್ರೇಡ್‌ನ ಪೆಟ್ರೋಲ್‌ ಮತ್ತು ಡೀಸೆಲ್‌ ಎಂಜಿನ್‌ ಮಾದರಿಗಳಲ್ಲಿ ಲಭ್ಯವಿದೆ ಎಂದು ಕಂಪನಿ ತಿಳಿಸಿದೆ.

‘15 ವರ್ಷಗಳ ಹಿಂದೆ ಭಾರತದಲ್ಲಿ ಪ್ರೀಮಿಯಂ ಎಂಪಿವಿ ರೂಪದಲ್ಲಿ ಇನ್ನೊವಾ ಪರಿಚಯಿಸುವ ಮೂಲಕ ಈ ವಿಭಾಗವನ್ನು ಮರುವ್ಯಾಖ್ಯಾನ ಮಾಡಲಾಯಿತು. ಆರಾಮದಾಯಕ, ಅನುಕೂಲಕರ ಮತ್ತು ಹೊಸ ನೋಟದೊಂದಿಗೆ ಟೊಯೋಟಾದ ಗುಣಮಟ್ಟ, ಬಾಳಿಕೆ ಹಾಗೂ ವಿಶ್ವಾಸಾರ್ಹತೆಯ ಯಶಸ್ಸು ಸಾಧಿಸಲು ಕಾರಣವಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಈ ಎಂಪಿವಿ ಅನ್ನು ಇನ್ನಷ್ಟು ಉತ್ತಮಗೊಳಿಸಲು ನಿರ್ಧರಿಸಿದೆವು. ಅದರಂತೆ ಸುಧಾರಿತ ತಂತ್ರಜ್ಞಾನ ಮತ್ತು ಗುಣಲಕ್ಷಣಗಳನ್ನು ಒಳಗೊಂಡ ಹೊಸ ಆವೃತ್ತಿ ಬಿಡುಗಡೆ ಮಾಡಿದ್ದೇವೆ. ಹೊಸ ಅವತಾರದ ಇನ್ನೊವಾ ಕ್ರಿಸ್ಟಾವನ್ನು ಗ್ರಾಹಕರು ಇಷ್ಟಪಡುವ ವಿಶ್ವಾಸವಿದೆ’ ಎಂದು ಕಂಪನಿಯ ಮಾರಾಟ ಮತ್ತು ಸೇವೆಗಳ ವಿಬಾಗದ ಹಿರಿಯ ಉಪಾಧ್ಯಕ್ಷ ನವೀನ್‌ ಸೋನಿ ತಿಳಿಸಿದ್ದಾರೆ.

ವೈಶಿಷ್ಟ್ಯಗಳು

*ಹೊಸ ಹೊರಾಂಗಣ ಬಣ್ಣ ಸ್ಪಾರ್ಕ್ಲಿಂಗ್‌ ಬ್ಲ್ಯಾಕ್‌ ಕ್ರಿಸ್ಟಲ್‌ ಶೈನ್

*ನ್ಯೂ ಡೈಮಂಡ್‌ ಕಟ್‌ ಅಲಾಯ್‌ ವೀಲ್‌ ಡಿಸೈನ್ಸ್‌

*ಪಾರ್ಕಿಂಗ್‌ ಸುರಕ್ಷತೆಗೆ ಎಂಐಡಿ ಡಿಸ್‌ಪ್ಲೇ, ಫ್ರಂಟ್‌ ಕ್ಲಿಯರೆನ್ಸ್‌ ಸೋನಾರ್‌

*ಸ್ಮಾರ್ಟ್‌ ಪ್ಲೇಕಾಸ್ಟ್‌ ಟಚ್‌ ಸ್ಕ್ರೀನ್‌ ಆಡಿಯೊ (ಆಂಡ್ರಾಯ್ಡ್‌ ಆಟೊ/
ಆ್ಯಪಲ್‌ ಕಾರ್‌ಪ್ಲೇ)

*ಎಕ್ಸ್‌ ಷೋರೂಂ ಬೆಲೆ ₹16.26 ಲಕ್ಷದಿಂದ ₹ 24.33 ಲಕ್ಷದವರೆಗೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT