ಗುರುವಾರ , ಫೆಬ್ರವರಿ 27, 2020
19 °C

ಬಜಾಜ್‌–ಟ್ರಿಂಫ್‌ ಒಪ್ಪಂದ: 2022ಕ್ಕೆ ಹೊಸ ಬೈಕ್‌, ಬೆಲೆ ₹2 ಲಕ್ಷಕ್ಕಿಂತ ಕಡಿಮೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಬಜಾಜ್‌–ಟ್ರಿಂಫ್‌ ಕಂಪನಿಗಳ ಒಪ್ಪಂದ

ಪುಣೆ: ದೇಶದ ಬಜಾಜ್‌ ಆಟೊ ಮತ್ತು ಬ್ರಿಟಿಷ್‌ ಮೋಟಾರ್‌ಸೈಕಲ್‌ ಬ್ರ್ಯಾಂಡ್‌ ಟ್ರಿಂಫ್‌ ಜಾಗತಿಕ ಮಟ್ಟದ ಒಪ್ಪಂದಕ್ಕೆ ಶುಕ್ರವಾರ ಅಧಿಕೃತ ಚಾಲನೆ ದೊರೆತಿದೆ. ಎರಡೂ ಕಂಪನಿ ಜತೆಯಾಗಿ ಮಧ್ಯಮ ಸಾಮರ್ಥ್ಯದ ಹೊಸ ಶ್ರೇಣಿಯ ಬೈಕ್‌ಗಳ ತಯಾರಿಕೆ ನಡೆಸಲಿವೆ

ತಯಾರಾಗಲಿರುವ ಬೈಕ್‌ನ ಬೆಲೆ ₹2 ಲಕ್ಷಕ್ಕೂ ಕಡಿಮೆ ಇರಲಿದೆ. 2017ರ ಆಗಸ್ಟ್‌ನಲ್ಲಿ ಬಜಾಜ್‌ ಮತ್ತು ಟ್ರಿಂಫ್‌ ನಡುವೆ ಒಪ್ಪಂದ ನಡೆದಿದ್ದು, 2022ಕ್ಕೆ ಹೊಸ ಬೈಕ್‌ ಅನಾವರಣಗೊಳ್ಳಲಿದೆ. ಪುಣೆಯ ಚಾಕಣ್‌ನಲ್ಲಿರುವ ಬಜಾಜ್‌ ಆಟೊ ತಯಾರಿಕಾ ಘಟಕದಲ್ಲಿ ಬೈಕ್‌ ತಯಾರಿ ನಡೆಯಲಿದೆ. 

ಈ ಒಪ್ಪಂದದಲ್ಲಿ 200ಸಿಸಿ–500ಸಿಸಿ ಸಾಮರ್ಥ್ಯದ ವಿವಿಧ ಮಾದರಿಯ ಬೈಕ್‌ಗಳನ್ನು ಹೊರತರಲು ಉದ್ದೇಶಿಸಲಾಗಿದೆ. ತಯಾರಾಗಲಿರುವ ಬೈಕ್‌ಗಳು 'ಟ್ರಿಂಫ್‌' ಬ್ರ್ಯಾಂಡ್‌ ಅಡಿಯಲ್ಲಿಯೇ ಮಾರಾಟಗೊಳ್ಳಲಿವೆ. ಬಜಾಜ್‌ ಬೈಕ್‌ಗಳಿಗೆ ಬೇಡಿಕೆ ಇರುವ ಹೊರ ರಾಷ್ಟ್ರಗಳಿಗೂ ಹೊಸ ಬೈಕ್‌ಗಳು ರಫ್ತಾಗಲಿವೆ. ಮತ್ತೊಂದು ಬ್ರ್ಯಾಂಡ್‌ನೊಂದಿಗೆ ಟ್ರಿಂಫ್‌ ಒಪ್ಪಂದ ಮಾಡಿಕೊಂಡಿರುವುದು ಇದೇ ಮೊದಲು.

ಜಾಗತಿಕ ಮಟ್ಟದಲ್ಲಿ ಟ್ರಿಂಫ್‌ ಬ್ರ್ಯಾಂಡ್‌ಗೆ ಉತ್ತಮ ಸ್ಪಂದನೆ ಇದೆ. ತಯಾರಿಯಾಗುತ್ತಿರುವ ಹೊಸ ಬೈಕ್‌ ಭಾರತ ಮತ್ತು ಇತರೆ ಮಾರುಕಟ್ಟೆಗಳಲ್ಲಿ ಗಮನ ಸೆಳೆಯುವ ವಿಶ್ವಾಸವಿದೆ ಎಂದು ಬಜಾಜ್‌ ಆಟೊದ ವ್ಯವಸ್ಥಾಪಕ ನಿರ್ದೇಶಕ ರಾಜೀವ್‌ ಬಜಾಜ್‌ ಹೇಳಿದ್ದಾರೆ.

ಟ್ರಿಂಫ್‌ ಬೈಕ್‌ಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಹಾಗೂ ಹೊರ ದೇಶಗಳಲ್ಲಿ ವಿತರಣೆ ಮಾಡುವ ಪ್ರಮುಖ ಪಾಲುದಾರಿಕೆಯನ್ನು ಬಜಾಜ್‌ ಹೊಂದಿರಲಿದೆ. ಈ ಮೂಲಕ ಬಜಾಟ್‌ ಕಾರ್ಯವ್ಯಾಪ್ತಿ ವಿಸ್ತರಿಸಿಕೊಳ್ಳಲಿದೆ. ಪ್ರಸ್ತುತ ಟ್ರಿಂಫ್‌ ವಾರ್ಷಿಕ 60,000 ಬೈಕ್‌ಗಳನ್ನು ತಯಾರಿಸುತ್ತಿದೆ ಹಾಗೂ ಜಗತ್ತಿನಾದ್ಯಂತ 650 ಡೀಲರ್‌ಶಿಫ್‌ಗಳನ್ನು ಹೊಂದಿದೆ. ಭಾರತದಲ್ಲಿ ವರ್ಷಕ್ಕೆ 1,000 ಬೈಕ್‌ಗಳನ್ನು ಮಾರಾಟ ಮಾಡುತ್ತಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು