ಬುಧವಾರ, ಏಪ್ರಿಲ್ 1, 2020
19 °C

ದೇಶಿ ವಾಹನ ಉದ್ಯಮಕ್ಕೆ ವೈರಸ್‌ ಅಡ್ಡಗಾಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂದಗತಿಯ ಆರ್ಥಿಕ ಬೆಳವಣಿಗೆ, ನಗದು ಬಿಕ್ಕಟ್ಟಿನಿಂದಾಗಿ ಮಾರಾಟದಲ್ಲಿ ಕುಸಿತ ಎದುರಿಸುತ್ತಿರುವ ವಾಹನ ಉದ್ಯಮಕ್ಕೆ ಇದೀಗ ಚೀನಾದ ವೈರಸ್‌ ‘ಕೋವಿಡ್‌–19’ ದೊಡ್ಡ ಪ್ರಮಾಣದಲ್ಲಿ ಹೊಡೆತ ನೀಡಲಿದೆ.

ವೈರಸ್‌ನಿಂದಾಗಿ ಭಾರತದ ವಾಹನ ಉದ್ಯಮವು ಈ ವರ್ಷ ಅತಿ ಹೆಚ್ಚಿನ ಸಮಸ್ಯೆ ಎದುರಿಸಲಿದೆ. ವಾಹನ ತಯಾರಿಕೆ ಶೇ 8.3ರಷ್ಟು ಕುಸಿತ ಕಾಣಲಿದೆ ಎಂದು ಫಿಚ್‌ ಹೇಳಿದೆ.

ವಾಹನ ತಯಾರಿಕೆಗೆ ಅಗತ್ಯವಾದ ಬಹುತೇಕ ಬಿಡಿಭಾಗಗಳು ಚೀನಾದಿಂದಲೇ ಪೂರೈಕೆಯಾಗಬೇಕು. ಆದರೆ, ವೈರಸ್‌ ಸೋಂಕು ಹರಡುವುದನ್ನು ತಡೆಯಲು ಅಲ್ಲಿನ ಕಾರ್ಖಾನೆಗಳು ತಾತ್ಕಾಲಿಕವಾಗಿ ಬಾಗಿಲು ಮುಚ್ಚಿವೆ. ಇದರಿಂದಾಗಿ ಭಾರತದ ಕಂಪನಿಗಳ ತಯಾರಿಕೆಯ ವೇಗಕ್ಕೆ ಕಡಿವಾಣ ಬೀಳುವ ಅಥವಾ ತಯಾರಿಕೆಯನ್ನೇ ನಿಲ್ಲಿಸಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆ ಎಂದು ವಿಶ್ಲೇಷಿಸಿದೆ.

ಭಾರತದಲ್ಲಿ ಹೊಸ ವಾಹಗಳಿಗೆ ಬೇಡಿಕೆ ದುರ್ಬಲವಾಗಿದೆ. ಹೀಗಾಗಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತಯಾರಿಕೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ ಎಂದೂ ಹೇಳಿದೆ.

10–30%: ಚೀನಾವು ಭಾರತಕ್ಕೆ ಪೂರೈಸುತ್ತಿರುವ ಬಿಡಿ ಭಾಗಗಳ ಪ್ರಮಾಣ

8.3%: 2020ಕ್ಕೆ ತಯಾರಿಕೆಯಲ್ಲಿ ಆಗಲಿರುವ ಇಳಿಕೆ 

13.2%: 2019ರಲ್ಲಿ  ತಯಾರಿಕೆಯಲ್ಲಿ ಆಗಿರುವ ಇಳಿಕೆ 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು