ಸೋಮವಾರ, ಡಿಸೆಂಬರ್ 6, 2021
23 °C

ದ್ವಿಚಕ್ರ ವಾಹನ ಮಾರಾಟ ಶೇ 4ರಷ್ಟು ಇಳಿಕೆ ಸಾಧ್ಯತೆ: ಐಸಿಆರ್‌ಎ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬೆಲೆ ಏರಿಕೆ ಮತ್ತು ಪೆಟ್ರೋಲ್‌ ದರ ಹೆಚ್ಚಿನ ಮಟ್ಟದಲ್ಲಿ ಇರುವ ಕಾರಣಗಳಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ದ್ವಿಚಕ್ರ ವಾಹನಗಳ ಮಾರಾಟ ಪ್ರಮಾಣವು ಶೇಕಡ 1ರಿಂದ ಶೇ 4ರಷ್ಟು ಇಳಿಕೆಯಾಗುವ ನಿರೀಕ್ಷೆ ಇದೆ ಎಂದು ದೇಶಿ ರೇಟಿಂಗ್ಸ್‌ ಸಂಸ್ಥೆ ಐಸಿಆರ್‌ಎ ಹೇಳಿದೆ.

ಹಬ್ಬದ ಋತುವಿನಲ್ಲಿ ಮಾರಾಟ ಕಡಿಮೆ ಆಗಿರುವುದು ಸಹ ಒಟ್ಟಾರೆಯಾಗಿ ದ್ವಿಚಕ್ರ ವಾಹನ ಮಾರಾಟದ ಮೇಲೆ ಪರಿಣಾಮ ಉಂಟುಮಾಡಲಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ದ್ವಿಚಕ್ರ ವಾಹನಗಳ ಮಾರುಕಟ್ಟೆಯಲ್ಲಿ ಅತಿಹೆಚ್ಚಿನ ಪಾಲು ಹೊಂದಿರುವ 75 ಸಿಸಿಯಿಂದ 110 ಸಿಸಿವರೆಗಿನ ವಾಹನಗಳ ಮಾರಾಟವು ಈ ವರ್ಷ ಮಂದಗತಿಯಲ್ಲಿ ಇದೆ. ಕೋವಿಡ್‌ನ ಎರಡನೇ ಅಲೆಯ ಪರಿಣಾಮವಾಗಿ ಕಡಿಮೆ ಆದಾಯ ಇರುವ ಜನ ಹೆಚ್ಚಿನ ಮೊತ್ತದ ಖರೀದಿಗಳಿಂದ ಹಿಂದೆ ಸರಿಯುವಂತೆ ಆಗಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ರೋಹನ್‌ ಕಣ್ವರ್ ಗುಪ್ತಾ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು