ಭಾರತದಲ್ಲಿ ಜನವರಿಯಿಂದ ಡುಕಾಟಿ ಬೈಕ್‌ಗಳ ಬೆಲೆ ಹೆಚ್ಚಳ

ಮುಂಬೈ: ಇಟಲಿ ಮೂಲದ ಸೂಪರ್‌ಬೈಕ್‌ಗಳ ತಯಾರಿಕಾ ಕಂಪನಿ ಡುಕಾಟಿ ಭಾರತದಲ್ಲಿ ತನ್ನ ಎಲ್ಲ ಮಾದರಿಯ ಬೈಕ್‌ಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿದೆ.
ಮುಂಬರುವ ಜನವರಿ 1ರಿಂದ ಭಾರತದಲ್ಲಿ ಡುಕಾಟಿ ಎಲ್ಲ ಮಾದರಿಯ ಬೈಕ್‌ಗಳ ಬೆಲೆ ಏರಲಿದೆ ಎಂದು ಕಂಪನಿಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಆದರೆ, ಶೇ ಎಷ್ಟು ಪ್ರಮಾಣದಲ್ಲಿ ಬೆಲೆ ಏರಲಿದೆ ಎಂದು ಕಂಪನಿ ತಿಳಿಸಿಲ್ಲ. ಎಕ್ಸ್ ಶೋರೂಂ ಬೆಲೆಗಳ ಏರಿಕೆ ಎಲ್ಲ ಮಾದರಿಗಳಿಗೆ ಅನ್ವಯಿಸಲಿದೆ ಎಂದು ಹೇಳಿಕೆ ತಿಳಿಸಿದೆ. ಉತ್ಪಾದನಾ ವೆಚ್ಚ ಏರಿಕೆಯಿಂದ ಈ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ತಿಳಿಸಿದೆ.
ಮುಂಬೈ, ನವದೆಹಲಿ, ಬೆಂಗಳೂರು, ಪುಣೆ, ಹೈದರಾಬಾದ್, ಕೋಲ್ಕತ್ತ, ಚೆನ್ನೈ, ಕೊಚ್ಚಿಯಲ್ಲಿ ಡುಕಾಟಿ ತನ್ನ ಶೋರೂಂಗಳನ್ನು ಹೊಂದಿದೆ.
ಅಲ್ಲದೇ ತನ್ನ ಮುಂಬರುವ ಎಲ್ಲ ಹೊಸ ಬೈಕ್‌ಗಳನ್ನು ಭಾರತದಲ್ಲಿ ಮಾರಾಟ ಮಾಡಲಾಗುವುದು ಎಂದು ಡುಕಾಟಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.