ಚಾರ್ಜಿಂಗ್ ಹಬ್ಗಳಿಗಾಗಿ ಕೈಜೋಡಿಸಿದ ಹೀರೊ ಎಲೆಕ್ಟ್ರಿಕ್, ಎಲೆಕ್ಟ್ರಿಕ್ ಪೇ
ನವದೆಹಲಿ: ಎಲೆಕ್ಟ್ರಿಕ್ ವಾಹನಗಳಿಗೆವ್ಯಾಪಕವಾಗಿ ಚಾರ್ಜಿಂಗ್ ಹಬ್ಗಳನ್ನು ನಿರ್ಮಾಣ ಮಾಡುವುದಕ್ಕಾಗಿ ಎಲೆಕ್ಟ್ರಿಕ್ ಪೇ ಕಂಪನಿಯೊಂದಿಗೆ ಹೀರೊ ಎಲೆಕ್ಟ್ರಿಕ್ ಒಪ್ಪಂದ ಮಾಡಿಕೊಂಡಿದೆ.
ಹೀರೊ ಎಲೆಕ್ಟ್ರಿಕ್ ಮಂಗಳವಾರ ಈ ವಿಷಯ ತಿಳಿಸಿದೆ.
ಎಲೆಕ್ಟ್ರಿಕ್ ಪೇ ಜೊತೆಗೂಡಿ ಭಾರತದಾದ್ಯಂತ ಈ ವರ್ಷಾಂತ್ಯದೊಳಗೆ ಸುಮಾರು 1 ಲಕ್ಷ ಚಾರ್ಜಿಂಗ್ ಪಾಯಿಂಟ್ಗಳನ್ನು ಸ್ಥಾಪಿಸುವುದಾಗಿ ಹೀರೋ ತಿಳಿಸಿದೆ.
‘ಈ ಸಹಭಾಗಿತ್ವವು ಎಲೆಕ್ಟ್ರಿಕ್ ವಾಹನಗಳ ಬಳಕೆದಾರರಿಗೆ ತಡೆರಹಿತ ಹಾಗೂ ಹೊಸ ಚಾಲನಾ ಅನುಭವ ನೀಡುವ ಸೇವೆಯನ್ನು ಗ್ರಾಹಕರಿಗೆ ನೀಡಲಿದೆ. ಎಲೆಕ್ಟ್ರಿಕ್ ಪೇ ಜೊತೆಗೂಡಿ ಭಾರತದಾದ್ಯಂತ ವ್ಯಾಪಕವಾಗಿ ಇವಿ ಚಾರ್ಜಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು’ ಎಂದು ಹೀರೊ ಎಲೆಕ್ಟ್ರಿಕ್ ಸಿಇಒ ಸೋಹಿಂದರ್ ಗಿಲ್ ಹೇಳಿದ್ದಾರೆ.
‘ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ನಮ್ಮ ಬದ್ಧತೆಯೂ ಚಾರ್ಜಿಂಗ್ ಸೌಕರ್ಯಗಳನ್ನು ಹೆಚ್ಚಿಸಬೇಕೆಂದು ತೀರ್ಮಾನಿಸಿದೆ. ಎಲೆಕ್ಟ್ರಿಕ್ ಪೇ ಸಹಭಾಗಿತ್ವ ಇದನ್ನು ಸಾಕಾರಗೊಳಿಸುತ್ತದೆ ಎಂಬುದು ನಮ್ಮ ಆಶಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.
2026ಕ್ಕೆ ಸುಮಾರು 40 ಲಕ್ಷ ಇವಿ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಈ ಯೋಜನೆಗಳು ಹಮ್ಮಿಕೊಂಡಿವೆ.
‘ಎಲೆಕ್ಟ್ರಿಕ್ ವಾಹನಗಳ ಓಡಾಟ ಸುಗಮವಾಗಿರಲಿ ಎಂಬ ಆಶಯದೊಂದಿಗೆ ಈ ಪ್ರಕ್ರಿಯೆಯನ್ನು ಮೊದಲ ದಿನದಿಂದಲೇ ಮಾಡುತ್ತಿದ್ದೇವೆ’ ಎಂದು ಎಲೆಕ್ಟ್ರಿಕ್ ಪೇ ಸಹ ಸಂಸ್ಥಾಪಕ ಅವಿನಾಶ್ ಶರ್ಮಾ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.