ಸೋಮವಾರ, ಮಾರ್ಚ್ 1, 2021
20 °C

10 ಕೋಟಿಯ ಮೈಲಿಗಲ್ಲು ದಾಟಿದ ಹೀರೊ ಮೊಟೊಕಾರ್ಪ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ದ್ವಿಚಕ್ರ ವಾಹನಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಹೀರೊ ಮೊಟೊಕಾರ್ಪ್‌ ಕಂಪನಿಯು ಆರಂಭವಾದಾಗಿನಿಂದ ಇಲ್ಲಿಯವರೆಗೆ ಒಟ್ಟಾರೆ 10 ಕೋಟಿಗೂ ಅಧಿಕ ವಾಹನಗಳನ್ನು ತಯಾರಿಸಿದ ಮೈಲಿಗಲ್ಲು ಸೃಷ್ಟಿಸಿದೆ.

ಮುಂದಿನ ಐದು ವರ್ಷಗಳವರೆಗೆ ಪ್ರತಿ ವರ್ಷ 10ಕ್ಕಿಂತಲೂ ಅಧಿಕ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದಾಗಿಯೂ ಕಂಪನಿ ಘೋಷಿಸಿದೆ.

ಹರಿದ್ವಾರದಲ್ಲಿ ಇರುವ ತಯಾರಿಕಾ ಘಟಕದಿಂದ ಎಕ್ಸ್‌ಟ್ರೀಮ್‌ 160ಆರ್‌ ಮಾದರಿಯನ್ನು ಬಿಡುಗಡೆ ಮಾಡುವ ಮೂಲಕ 10 ಕೋಟಿ ದ್ವಿಚಕ್ರ ವಾಹನಗಳನ್ನು ತಯಾರಿಸಿದ ಸಾಧನೆ ಮಾಡಿದೆ. ಕಂಪನಿಯು ಅಸ್ತಿತ್ವಕ್ಕೆ ಬಂದಿದ್ದು, 1984 ಜನವರಿ 19ರಂದು.

‘10 ಕೋಟಿ ವಾಹನಗಳ ತಯಾರಿಕೆಯ ಮೈಲಿಗಲ್ಲು ನಮ್ಮ ಕನಸಿನ ಫಲವಾಗಿದೆ’ ಎಂದು ಹೀರೊ ಮೊಟೊಕಾರ್ಪ್‌ನ ಅಧ್ಯಕ್ಷ ಪವನ್‌ ಮುಂಜಾಲ್‌ ಅವರು ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಂಪನಿಯು ಭಾರತದಾಚೆಗೆ, ಏಷ್ಯಾ, ಆಫ್ರಿಕಾ, ಮಧ್ಯಪ್ರಾಚ್ಯ ಹಾಗೂ ದಕ್ಷಿಣ ಮತ್ತು ಕೇಂದ್ರ ಅಮೆರಿಕದ 40ಕ್ಕೂ ಅಧಿಕ ದೇಶಗಳಲ್ಲಿಯೂ ತನ್ನ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಒಟ್ಟಾರೆ ಎಂಟು ತಯಾರಿಕಾ ಘಟಕಗಳನ್ನು ಹೊಂದಿದ್ದು, ಅದರಲ್ಲಿ ಆರು ಭಾರತದಲ್ಲಿ, ಒಂದು ಕೊಲಂಬಿಯಾ, ಒಂದು ಬಾಂಗ್ಲಾದೇಶದಲ್ಲಿ ಇದೆ.

ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ಹೊಸ ಮತ್ತು ಪರ್ಯಾಯ ಸಾರಿಗೆ ವ್ಯವಸ್ಥೆಗಳಿಗಾಗಿ ಹೂಡಿಕೆಯನ್ನು ಮುಂದುವರಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.