ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಂಡಾ ಸಿಟಿ ಇ–ಎಚ್‌ಇವಿ ಬಿಡುಗಡೆ: ಬೆಲೆ ₹ 19.49 ಲಕ್ಷ

Last Updated 4 ಮೇ 2022, 14:08 IST
ಅಕ್ಷರ ಗಾತ್ರ

ನವದೆಹಲಿ: ಹೋಂಡಾ ಕಾರ್ಸ್‌ ಇಂಡಿಯಾ ಕಂಪನಿಯು ಬುಧವಾರ ಹೋಂಡಾ ಸಿಟಿ ಇ–ಎಚ್‌ಇವಿ ಬಿಡುಗಡೆ ಮಾಡುವ ಮೂಲಕ ಹೈಬ್ರಿಡ್‌ ಎಲೆಕ್ಟ್ರಿಕ್‌ ವಾಹನ ವಿಭಾಗವನ್ನು ಪ್ರವೇಶಿಸಿದೆ. ದೆಹಲಿಯಲ್ಲಿ ಇದರ ಎಕ್ಸ್‌ ಷೋರೂಂ ಬೆಲೆ ₹ 19.49 ಲಕ್ಷ.

ಈ ಕಾರು ಸೆಲ್ಫ್‌ ಚಾರ್ಜಿಂಗ್‌ ಎರಡು ಮೋಟರ್‌ಗಳ ಹೈಬ್ರಿಡ್‌ ಸಿಸ್ಟಂ ಹೊಂದಿದೆ. 1.5 ಲೀಟರ್ ಪೆಟ್ರೋಲ್‌ ಎಂಜಿನ್‌ ಇದ್ದು, ಪ್ರತಿ ಲೀಟರಿಗೆ 26.5 ಕಿಲೋ ಮೀಟರ್ ಇಂಧನ ದಕ್ಷತೆ ನೀಡಲಿದೆ ಎಂದು ಕಂಪನಿಯು ತಿಳಿಸಿದೆ.

ಇ.ವಿ. ಡ್ರೈವ್‌ ಮೋಡ್‌, ಹೈಬ್ರಿಡ್‌ ಡ್ರೈವ್‌ ಮೋಡ್‌ ಮತ್ತು ಎಂಜಿನ್‌ ಡ್ರೈವ್‌ ಮೋಡ್‌... ಹೀಗೆ ಮೂರು ರೀತಿಯ ಡ್ರೈವಿಂಗ್‌ ಆಯ್ಕೆಗಳಲ್ಲಿ ಇದು ಲಭ್ಯವಿದೆ. ರಾಜಸ್ಥಾನದ ತಪುಕರಾ ಘಟಕದಲ್ಲಿ ಇದನ್ನು ತಯಾರಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.

‘ಸಿಟಿ ಇ–ಎಚ್‌ಇವಿ ಮೂಲಕ ಭಾರತದಲ್ಲಿ ನಮ್ಮ ವಿದ್ಯುತ್ ಚಾಲಿತ ವಾಹನ ಪ್ರಯಾಣ ಆರಂಭಿಸಿದ್ದೇವೆ. ಈ ಮೂಲಕ ಅತ್ಯುತ್ತಮ ಮತ್ತು ಅರ್ಥಪೂರ್ಣ ತಂತ್ರಜ್ಞಾನಗಳನ್ನು ದೇಶದಲ್ಲಿ ತರುವ ಬದ್ಧತೆಯನ್ನು ಮತ್ತೊಮ್ಮೆ ದೃಢಪಡಿಸಲಾಗಿದೆ ಎಂದು ಹೋಂಡಾ ಕಾರ್ಸ್‌ ಇಂಡಿಯಾದ ಅಧ್ಯಕ್ಷ ತಕುಯಾ ಸುಮುರಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT