ಸನ್ರೂಫ್ನ ಹೊಸ ‘ಜಾಝ್’

ಪ್ರೀಮಿಯಂ ಕಾರ್ ತಯಾರಿಕಾ ಕಂಪನಿ ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್ಸಿಐಎಲ್), ಸನ್ ರೂಫ್ ಸೌಲಭ್ಯದ ತನ್ನ ಪ್ರೀಮಿಯಂ ಹ್ಯಾಚ್ಬ್ಯಾಕ್ನ ಹೊಸ ಹೋಂಡಾ ಜಾಝ್ ಪರಿಚಯಿಸಿದೆ. ಸುಧಾರಿತ ತಂತ್ರಜ್ಞಾನ, ವೈವಿಧ್ಯಮಯ ಮನರಂಜನೆಯ ಇನ್ಫೊಟೇನ್ಮೆಂಟ್, ಸಂಪೂರ್ಣ ಸುರಕ್ಷತಾ ಸೌಲಭ್ಯಗಳನ್ನು ಒಳಗೊಂಡ ಪರಿಪೂರ್ಣ ಜಾಝ್ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.
ಸುಧಾರಿತ ಎಲ್ಇಡಿ ಪ್ಯಾಕೇಜ್, ಹೊಸ ಎಲ್ಇಡಿ ಫಾಗ್ ಲ್ಯಾಂಪ್, ರಿಯರ್ ಎಲ್ಇಡಿ ವಿಂಗ್ ಲೈಟ್, ಮುಂಭಾಗ ಮತ್ತು ಹಿಂಭಾಗದ ಬಂಪರ್ ಮತ್ತಿತರ ಪರಿಷ್ಕರಣೆಗಳನ್ನೂ ಇದು ಒಳಗೊಂಡಿದೆ. ವಿ, ವಿಎಕ್ಸ್ ಮತ್ತು ಜೆಡ್ಎಕ್ಸ್ ಮಾದರಿಗಳನ್ನು ಪರಿಚಯಿಸಲಾಗಿದೆ. ಹೊಸ ವಾಹನ ಮತ್ತು ಸುಧಾರಿತ ಆವೃತ್ತಿ ಸೇರಿದಂತೆ ಕಂಪನಿಯು ಎರಡು ತಿಂಗಳಲ್ಲಿ ನಾಲ್ಕು ಕಾರ್ಗಳನ್ನು ಪರಿಚಯಿಸಿದೆ. ದೆಹಲಿ ಎಕ್ಷ್ಷೋರೂಂ ಬೆಲೆ ₹ 7.5 ಲಕ್ಷದಿಂದ ಆರಂಭವಾಗಲಿದೆ.
‘ಹ್ಯಾಚ್ಬಾಕ್ ಪ್ರೀಮಿಯಂ ವಲಯದಲ್ಲಿ ಸನ್ ರೂಫ್ ಸೌಲಭ್ಯ ಹೊಂದಿದ ಏಕೈಕ ಕಾರ್ ಇದಾಗಿದೆ. ಈ ಕಾರ್ಗಳ ಬಗ್ಗೆ ಗ್ರಾಹಕರಲ್ಲಿ ಇತ್ತೀಚೆಗೆ ಹೆಚ್ಚಿನ ಒಲವು ಕಂಡುಬರುತ್ತಿದೆ. ಸನ್ರೂಫ್ನಿಂದ ಶುದ್ಧಗಾಳಿಯ ವಿಶೇಷ ಅನುಭವ ಪಡೆಯಬಹುದು. ಬೆಂಗಳೂರಿನಲ್ಲಿ ಇರುವಂತಹ ಆಹ್ಲಾದಕರ ವಾತಾವರಣದಲ್ಲಿ ಈ ಸೌಲಭ್ಯವು ಗ್ರಾಹಕರಿಗೆ ಹಗಲು ಮತ್ತು ರಾತ್ರಿ ವೇಳೆ ವಿಶೇಷ ಅನುಭವ ನೀಡಲಿದೆ. ಹೊಸ ಜಾಝ್ನ ಬಾಹ್ಯ ನೋಟವೂ ಬದಲಾಗಿದೆ. ಗ್ರಾಹಕರಿಗೆ ಹಬ್ಬದ ವಿಶೇಷ ಕೊಡುಗೆಗಳನ್ನು ನೀಡಲಾಗುವುದು’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ನಿರ್ದೇಶಕ ರಾಜೇಶ್ ಗೋಯಲ್ ಹೇಳುತ್ತಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.