ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲೆಕ್ಟ್ರಿಕ್‌ ಕಾರುಗಳ ಘಟಕ ಸ್ಥಾಪನೆ: ಟೆಸ್ಲಾಗಾಗಿಯೇ ಹೊಸ ನೀತಿ ರೂಪಿಸಲ್ಲ– ಗೋಯಲ್

ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಸ್ಪಷ್ಟಪಡಿಸಿದ್ದಾರೆ.
Published 10 ಮಾರ್ಚ್ 2024, 16:16 IST
Last Updated 10 ಮಾರ್ಚ್ 2024, 16:16 IST
ಅಕ್ಷರ ಗಾತ್ರ

ನವದೆಹಲಿ: ಭಾರತದಲ್ಲಿ ಎಲೆಕ್ಟ್ರಿಕ್‌ ಕಾರುಗಳ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಅಮೆರಿಕದ ಟೆಸ್ಲಾ ಕಂಪನಿಗೆ ಸರ್ಕಾರವು ಪ್ರತ್ಯೇಕ ನೀತಿ ರೂಪಿಸುವುದಿಲ್ಲ. ಈಗಾಗಲೇ, ಜಾರಿಗೊಳಿಸಿರುವ ನೀತಿಯೇ ಟೆಸ್ಲಾಗೂ ಅನ್ವಯವಾಗಲಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್‌ ಸ್ಪಷ್ಟಪಡಿಸಿದ್ದಾರೆ.

ವಿಶ್ವದಲ್ಲಿ ಭಾರತದ ಆರ್ಥಿಕತೆಯು ವೇಗವಾಗಿ ಬೆಳೆಯುತ್ತಿದೆ. ಇದಕ್ಕೆ ಅನುಗುಣವಾಗಿ ಎಲೆಕ್ಟ್ರಿಕ್‌ ಕಾರುಗಳ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನು ಮತ್ತು ಸುಂಕದ ನೀತಿಗಳನ್ನು ರೂಪಿಸಲಾಗಿದೆ. ಇವುಗಳು ಜಾಗತಿಕ ಮಟ್ಟದಲ್ಲಿ ಎಲೆಕ್ಟ್ರಿಕ್‌ ಕಾರು ತಯಾರಿಸುವ ಕಂಪನಿಗಳನ್ನು ಆಕರ್ಷಿಸುತ್ತವೆ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. 

‘ಪ್ರತಿ ಕಂಪನಿಯು ಬೇಡಿಕೆ ಸಲ್ಲಿಸುವುದು ಸಹಜ. ಆದರೆ, ಅವುಗಳ ಹಿತಾಸಕ್ತಿಗೆ ಅನುಗುಣವಾಗಿ ಸರ್ಕಾರವು ನೀತಿ ರೂಪಿಸಲು ಆಗುವುದಿಲ್ಲ. ಕಂಪನಿಗಳ ಅಗತ್ಯತೆಯನ್ನು ಪರಿಶೀಲಿಸಿದ ಬಳಿಕ ಸರ್ಕಾರವು ಮುಂದಿನ ನಿರ್ಣಯ ಕೈಗೊಳ್ಳಲಿದೆ’ ಎಂದು ಸ್ಪಷ್ಟಪಡಿಸಿದ್ದಾರೆ.  

ಭಾರತದಲ್ಲಿ ತನ್ನ ಘಟಕ ಸ್ಥಾಪನೆಗೆ ಸಂಬಂಧಿಸಿದಂತೆ ಉದ್ಯಮಿ ಇಲಾನ್‌ ಮಸ್ಕ್‌ ಒಡೆತನದ ಟೆಸ್ಲಾ ಕಂಪನಿಯು ಕಸ್ಟಮ್ಸ್‌ ಸುಂಕ ಕಡಿತಗೊಳಿಸುವಂತೆ ಷರತ್ತು ವಿಧಿಸಿದೆ. ₹33 ಲಕ್ಷಕ್ಕಿಂತ (40 ಸಾವಿರ ಡಾಲರ್‌) ಕಡಿಮೆ ಮೌಲ್ಯದ ಕಾರುಗಳ ಮೇಲಿನ ಕಸ್ಟಮ್‌ ಸುಂಕದಲ್ಲಿ ಶೇ 70ರಷ್ಟು ರಿಯಾಯಿತಿ ನೀಡುವಂತೆ ಕೇಂದ್ರಕ್ಕೆ ಕೋರಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT