ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಜಾಗ್ವಾರ್‌ ಲ್ಯಾಂಡ್‌ ರೋವರ್ 3S ರೀಟೇಲರ್ ಘಟಕ

Last Updated 21 ಆಗಸ್ಟ್ 2020, 8:10 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿ ವೇಗವಾಗಿ ಬೆಳೆಯುತ್ತಿರುವ ಪ್ರದೇಶದಲ್ಲಿ ಜಾಗ್ವಾರ್‌ ಲ್ಯಾಂಡ್‌ ರೋವರ್ ಇಂಡಿಯಾ, ಮಾರ್ಕ್‍ಲ್ಯಾಂಡ್ ಅವರಿಂದ ತನ್ನ ಹೊಸ 3S ರೀಟೇಲರ್ ಘಟಕವನ್ನು ಆರಂಭಿಸಿದೆ.

ನಗರದ ಪ್ರತಿಷ್ಠಿತ ಸ್ಥಳಗಳಲ್ಲಿ ಒಂದಾದ ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿ ಇರುವ ಈ ಹೊಸ 3S ರೀಟೇಲರ್ ಘಟಕ, 4160 ಚ.ಮೀ. ವಿಸ್ತೀರ್ಣವಿದ್ದು, ಶೋರೂಂ, ಮಾರಾಟ ಹಾಗೂ ಮಾರಾಟ ನಂತರ ಸೇವೆ ಒದಗಿಸುವ ರೀತಿಯಲ್ಲಿ ವಿನ್ಯಾಸಗೊಂಡಿದೆ.

ಜಾಗ್ವಾರ್‌ ಲ್ಯಾಂಡ್‌ ರೋವರ್ ಅನುಮೋದಿತ ಪೂರ್ವದಲ್ಲಿ ಹೊಂದಿದ ಕಾರ್‌ಗಳ ಭಾಗವನ್ನೂ ಹೊಂದಿರುವ ಈ ಘಟಕ, ತನ್ನ ನಿಷ್ಠಾವಂತ ಗ್ರಾಹಕರಿಗೆ ಜಾಗ್ವಾರ್‌ ಲ್ಯಾಂಡ್‌ ರೋವರ್ ಬ್ರ್ಯಾಂಡ್‍ಗಳ ಉಪಸಾಧನಗಳನ್ನು ಹಾಗೂ ಸರಕುಗಳನ್ನು ಸಹ ಪ್ರದರ್ಶಿಸುತ್ತದೆ. ಸಂಪೂರ್ಣವಾಗಿ ಸುಸಜ್ಜಿತವಾದ ಕಾರ್ಯಾಗಾರವು ಅತ್ಯಾಧುನಿಕ ಟೂಲ್ಸ್ ಹಾಗೂ ಸಲಕರಣೆಗಳಿಂದ ಕೂಡಿದೆ.

'2019 ರಲ್ಲಿ ನಗರದ ಹೃದಯ ಭಾಗವಾದ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ ಬುಟೀಕ್ ಶೋರೂಂ ಆರಂಭಿಸಿದ ನಂತರ, ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿ ಆರಂಭವಾಗುತ್ತಿರುವ ಅತ್ಯಾಧುನಿಕ ಸಂಯೋಜಿತ 3S ಘಟಕ ಇದಾಗಿದೆ. ಇದು ಬೆಂಗಳೂರು ನಗರ ಪ್ರದೇಶದಲ್ಲಿ ಜೆಆರ್‌ಎಲ್‌ನ ಅಸ್ತಿತ್ವವನ್ನು ಮತ್ತಷ್ಟು ಬಲಪಡಿಸುತ್ತದೆ. ನಮ್ಮ ಗ್ರಾಹಕರು ವಿಶ್ವದರ್ಜೆ ಮಟ್ಟದ ಮಾರಾಟ, ಸರ್ವಿಸ್ ಮತ್ತು ಬಿಡಿಭಾಗಗಳನ್ನು ಒಂದೇ ಸೂರಿನಡಿ ಪಡೆಯಲು ಸಾಧ್ಯವಾಗುವಂತೆ ಮಾಡುತ್ತದೆ' ಎಂದು ಜಾಗ್ವಾರ್‌ ಲ್ಯಾಂಡ್‌ ರೋವರ್ ಇಂಡಿಯಾದ (JLRIL) ಅಧ್ಯಕ್ಷ ಹಾಗೂ ನಿರ್ವಾಹಕ ನಿರ್ದೇಶಕ ರೋಹಿತ್ ಸೂರಿ ಹೇಳಿದ್ದಾರೆ.

* ಹೊಸ ವಿಮಾನ ನಿಲ್ದಾಣ ರಸ್ತೆಯಲ್ಲಿ ಜಾಗ್ವಾರ್‌ ಲ್ಯಾಂಡ್‌ ರೋವರ್ ಹೊಸ ಅತ್ಯಾಧುನಿಕ 3S (ಮಾರಾಟ, ಸರ್ವಿಸ್ ಮತ್ತು ಬಿಡಿಭಾಗ) ರೀಟೇಲರ್ ಘಟಕವನ್ನು ಅನಾವರಣಗೊಳಿಸಿದೆ.

* 4160 ಚ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡ ಘಟಕದಲ್ಲಿ ಜಗುವಾರ್ ಮತ್ತು ಲ್ಯಾಂಡ್ ರೋವರ್ ನ ಉತ್ಪನ್ನ ಪೋರ್ಟ್‍ಫೋಲಿಯೋದಿಂದ ವ್ಯಾಪಕ ಶ್ರೇಣಿಯ ಉತ್ಪನ್ನಗಳನ್ನು ಪ್ರದರ್ಶಿಸುವ ಶೋರೂಂ, ಮತ್ತು 19 ಸರ್ವಿಸ್ ಬೇಗಳಿರುವ ಸಂಪೂರ್ಣ ಸುಸಜ್ಜಿತ ಸರ್ವಿಸ್ ಕಾರ್ಯಾಗಾರಗಳಿವೆ.

* ಜಾಗ್ವಾರ್‌ ಲ್ಯಾಂಡ್‌ ರೋವರ್ ಇಂಡಿಯಾದ ವಿತರಣೆ ಕಾರ್ಯಜಾಲವು ಭಾರತದ 24 ಪ್ರಮುಖ ನಗರಗಳಲ್ಲಿ 27 ಮಳಿಗೆಗಳಲ್ಲಿ ಹರಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT