ಬುಧವಾರ, ಜೂನ್ 29, 2022
24 °C

ಜೀಪ್‌ ಇಂಡಿಯಾ ಕಂಪನಿಯ ಜೀಪ್ ಮೆರಿಡಿಯನ್‌ ಮಾರುಕಟ್ಟೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೀಪ್‌ ಇಂಡಿಯಾ ಕಂಪನಿಯು ದೇಶದ ಮಾರುಕಟ್ಟೆಗೆ ಗುರುವಾರ ಹೊಸ ಎಸ್‌ಯುವಿ ‘ಜೀಪ್‌ ಮೆರಿಡಿಯನ್‌’ ಬಿಡುಗಡೆ ಮಾಡಿದೆ. ಇದರ ಪರಿಚಯಾತ್ಮಕ ಬೆಲೆ ₹ 29.90 ಲಕ್ಷ (ಎಕ್ಸ್ ಷೋರೂಂ).

ಈ ಎಸ್‌ಯುವಿ ಅನ್ನು ವಿಶೇಷವಾಗಿ ಭಾರತದ ಮಾರುಕಟ್ಟೆಗೆ ವಿನ್ಯಾಸಗೊಳಿಸಲಾಗಿದೆ. 7 ಆಸನಗಳ ಈ ಎಸ್‌ಯುವಿ 2.0 ಟರ್ಬೊಚಾರ್ಜ್ಡ್‌ ಡೀಸೆಲ್‌ ಎಂಜಿನ್‌ ಹೊಂದಿದ್ದು, 9 ಸ್ಪೀಡ್‌ ಆಟೊಮೆಟಿಕ್‌ ಮತ್ತು 6 ಸ್ಪೀಡ್‌ ಮ್ಯಾನುಯಲ್‌ ಟ್ರಾನ್ಸ್‌ಮಿಷನ್‌ ಆಯ್ಕೆಗಳನ್ನು ಒಳಗೊಂಡಿದೆ ಎಂದು ಕಂಪನಿ ತಿಳಿಸಿದೆ.

ಭಾರತದ ಗ್ರಾಹಕರಿಗೆ ಹೊಸ ಸಾಹಸವನ್ನು ಕೈಗೊಳ್ಳಲು ಅನುಕೂಲ ಆಗುವಂತೆ ಜೀಪ್‌ ಮೆರಿಡಿಯನ್‌ ಅನ್ನು ರೂಪಿಸಲಾಗಿದೆ ಎಂದು ಜೀಪ್‌ ಬ್ರ್ಯಾಂಡ್‌ ಇಂಡಿಯಾದ ಮುಖ್ಯಸ್ಥ ನಿಪುನ್‌ ಜೆ. ಮಹಾಜನ್‌ ಹೇಳಿದರು.

ಜೀಪ್‌ ಇಂಡಿಯಾದ ಜಾಲತಾಣದಲ್ಲಿ ಹಾಗೂ ವಿತರಣಾ ಕೇಂದ್ರಗಳಲ್ಲಿ ₹ 50 ಸಾವಿರ ಡೌನ್‌ಪೇಮೆಂಟ್‌ ನೀಡಿ ಬುಕಿಂಗ್ ಮಾಡಬಹುದು. ಜೂನ್‌ನಲ್ಲಿ ವಿತರಣೆ ಆರಂಭ ಆಗಲಿದೆ ಎಂದು ಕಂಪನಿ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು