ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹೀಂದ್ರಾ ಎಕ್ಸ್‌ಯುವಿ700: ಡೆಲಿವರಿಗೆ ಬೇಕು 18 ತಿಂಗಳು!

Last Updated 20 ಡಿಸೆಂಬರ್ 2021, 6:28 IST
ಅಕ್ಷರ ಗಾತ್ರ

ಬೆಂಗಳೂರು: ಮಹೀಂದ್ರಾ ಆ್ಯಂಡ್ಮಹೀಂದ್ರಾ ಕಳೆದ ಆಗಸ್ಟ್‌ನಲ್ಲಿ ಪರಿಚಯಿಸಿದ್ದ ಎಕ್ಸ್‌ಯುವಿ700 ಕೆಲವೊಂದು ಆವೃತ್ತಿ ಬುಕ್ ಮಾಡಿದರೆ, ಡೆಲಿವರಿ ಪಡೆಯಲು 18 ತಿಂಗಳು ಕಾಯಬೇಕಿದೆ.

ಹೆಚ್ಚಿನ ಬುಕಿಂಗ್ ಮತ್ತು ಸೆಮಿಕಂಡಕ್ಟರ್ ಪೂರೈಕೆ ಕೊರತೆಯಿಂದಾಗಿ ಹೊಸ ಕಾರು ತಯಾರಿಕೆ ತಡವಾಗುತ್ತಿದೆ.

ಅಕ್ಟೋಬರ್ 7ರಂದು ಎಕ್ಸ್‌ಯುವಿ700 ಕಾರು ಬುಕಿಂಗ್‌ಗೆ ತೆರೆದುಕೊಂಡಿತ್ತು. ಮೊದಲ ದಿನ, ಆರಂಭದ ಒಂದು ಗಂಟೆಯಲ್ಲೇ 25,000 ಕಾರು ಬುಕಿಂಗ್ ಆಗಿ ದಾಖಲೆ ಸೃಷ್ಟಿಯಾಗಿತ್ತು.

ಚಿಪ್ ಮತ್ತು ವಿವಿಧ ಬಿಡಿಭಾಗಗಳ ಪೂರೈಕೆ ವ್ಯತ್ಯಯದಿಂದಾಗಿ ಹೊಸ ಕಾರು ಡೆಲಿವರಿ ತಡವಾಗುತ್ತಿದೆ ಎಂದು ‘ಝೀ‘ ವರದಿ ಮಾಡಿದೆ.

ಪೆಟ್ರೋಲ್ ಮತ್ತು ಡೀಸೆಲ್ ಆವೃತ್ತಿಯಲ್ಲಿ ಹೊಸ ಎಕ್ಸ್‌ಯುವಿ700 ಲಭ್ಯವಿದ್ದು, ₹12.49 ಲಕ್ಷ (ಎಕ್ಸ್ ಶೋರೂಮ್ ದರ) ದಿಂದ ಆರಂಭವಾಗಿ ₹22.99 ಲಕ್ಷದವರೆಗೆ ಇದೆ.

ಆರಂಭಿಕ ಆವೃತ್ತಿ ಬುಕ್ ಮಾಡಿದರೂ ಕನಿಷ್ಠ ಕಾಯುವಿಕೆ ಅವಧಿ 6 ತಿಂಗಳು ಇದ್ದು, ಟಾಪ್ ಎಂಡ್ ಕೆಲವೊಂದು ಆವೃತ್ತಿಗೆ 18 ತಿಂಗಳು ಕಾಯಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT