ನವದೆಹಲಿ: ಮಾರುತಿ ಸುಜುಕಿ ಇಂಡಿಯಾದ ಆಲ್ಟೊ ಕಾರು 20ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. 20 ವರ್ಷಗಳ ಅವಧಿಯಲ್ಲಿ 40 ಲಕ್ಷಕ್ಕೂ ಅಧಿಕ ಆಲ್ಟೊ ಕಾರುಗಳು ಮಾರಾಟವಾಗಿವೆ. 2000ನೇ ಇಸವಿಯ ಸೆಪ್ಟೆಂಬರ್ನಲ್ಲಿ ಇದನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು.

ದೇಶದಲ್ಲಿ ಜನಪ್ರಿಯವಾಗಿರುವ ಈ ಸಣ್ಣ ಕಾರು ಹಲವು ಬಾರಿ ಬದಲಾವಣೆಗೆ ಮತ್ತು ಮೇಲ್ದರ್ಜೆಗೆ ಒಳಗಾಗಿದೆ. ಈ ಮೂಲಕ ಗ್ರಾಹಕರ ಅಗತ್ಯಗಳನ್ನು ಈಡೇರಿಸುವ, ಕಾಲಕ್ಕೆ ತಕ್ಕ ವಾಹನವಾಗಿ ಮುಂದುವರಿದಿದೆ ಎಂದು ಕಂಪನಿಯ ಪ್ರಕಟಣೆ ಹೇಳಿದೆ.

‘ಭಾರತದಲ್ಲಿ ಅತಿ ಹೆಚ್ಚು ಮಾರಾಟ ಕಂಡಿರುವ ಕಾರುಗಳ ಸಾಲಿನಲ್ಲಿ ಸತತ 16ನೇ ವರ್ಷವೂ ಮೊದಲ ಸ್ಥಾನ ಅಲಂಕರಿಸಿದೆ’ ಎಂದು ಕಂಪನಿಯ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಶಶಾಂಕ್ ಶ್ರೀವಾಸ್ತವ ಹೇಳಿದ್ದಾರೆ.

ಮೊದಲ ಬಾರಿಗೆ ಕಾರು ಖರೀದಿಸುವವರು ಆಲ್ಟೊವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. 2019–20ರಲ್ಲಿ ಕಾರು ಖರೀದಿಸಲು ಬಯಸಿದವರ ಪೈಕಿ ಶೇಕಡ 76ರಷ್ಟು ಗ್ರಾಹಕರು ಆಲ್ಟೊ ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

40ಕ್ಕೂ ಅಧಿಕ ದೇಶಗಳಿಗೆ ಆಲ್ಟೊ ರಫ್ತು ಮಾಡಲಾಗುತ್ತಿದೆ.

ಮಾರಾಟದ ಮೈಲಿಗಲ್ಲು

2000;ಮಾರುಕಟ್ಟೆಗೆ ಬಿಡುಗಡೆ

2008;10 ಲಕ್ಷ

2012;20 ಲಕ್ಷ

2016;30 ಲಕ್ಷ

2020;40 ಲಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.