ಬೆಂಗಳೂರು: ಕಾರುಗಳ ತಯಾರಿಕೆಯಲ್ಲಿನ ದೇಶದ ಮುಂಚೂಣಿ ಕಂಪನಿಯಾಗಿರುವ ಮಾರುತಿ ಸುಜುಕಿ ಇಂಡಿಯಾ ಬರುವ ದಿನಗಳಲ್ಲಿ ತನ್ನ ಉತ್ಪನ್ನಗಳ ಬೆಲೆ ಏರಿಸಲು ನಿರ್ಧರಿಸಿದೆ.
ಹಣದುಬ್ಬರ, ಸರ್ಕಾರದ ನೀತಿಗಳು ಹಾಗೂ ಉತ್ಪಾದನಾ ವೆಚ್ಚಳದ ಹಿನ್ನೆಲೆಯಲ್ಲಿ ಕಾರುಗಳ ಬೆಲೆ ಏರಿಸುವುದು ಅನಿವಾರ್ಯ. ಏಪ್ರೀಲ್‌ನಿಂದ ಬೆಲೆ ಏರಿಕೆ ಅನ್ವಯ ಆಗಲಿದೆ ಎಂದು ಮಾರುತಿ ಸುಜುಕಿ ಇಂಡಿಯಾ ಗುರುವಾರ ತಿಳಿಸಿದೆ.
ಉತ್ಪಾದನಾ ವೆಚ್ಚದ ಹೆಚ್ಚಳದಿಂದ ಕಂಪನಿಗೆ ಹೊರೆಯಾಗುವುದನ್ನು ಸದ್ಯದ ಬೆಲೆ ಏರಿಕೆಯಿಂದ ಕೊಂಚಮಟ್ಟಿಗೆ ತಗ್ಗಿಸಬಹುದು ಎಂದು ಮಾರುತಿ ಸುಜುಕಿ ತಿಳಿಸಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.