ಶುಕ್ರವಾರ, ಸೆಪ್ಟೆಂಬರ್ 17, 2021
26 °C

ಜನವರಿಯಿಂದ ಬೆಲೆ ಏರಿಕೆ: ನಿಸಾನ್‌

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ತನ್ನೆಲ್ಲ ಕಾರು ಮಾದರಿಗಳ ಬೆಲೆಯನ್ನು ಜನವರಿಯಿಂದ ಜಾರಿಗೆ ಬರುವಂತೆ ಶೇಕಡ 5ರವರೆಗೆ ಹೆಚ್ಚಿಸುವುದಾಗಿ ನಿಸಾನ್‌ ಇಂಡಿಯಾ ಕಂಪನಿ ಬುಧವಾರ ತಿಳಿಸಿದೆ. ತಯಾರಿಕಾ ವೆಚ್ಚ ಹೆಚ್ಚಾಗುತ್ತಿರುವ ಕಾರಣ ಈ ನಿರ್ಧಾರಕ್ಕೆ ಬಂದಿರುವುದಾಗಿ ಅದು ಪ್ರಕಟಣೆಯಲ್ಲಿ ತಿಳಿಸಿದೆ.

‘ಸವಾಲಿನಿಂದ ಕೂಡಿರುವ ಸದ್ಯದ ಮಾರುಕಟ್ಟೆ ಪರಿಸ್ಥಿತಿಯಲ್ಲಿ, ವೆಚ್ಚ ಹೆಚ್ಚಾಗುತ್ತಿರುವುದರಿಂದ ನಿಸಾನ್‌ ಮತ್ತು ಡಾಟ್ಸನ್‌ ಮಾದರಿಗಳ ಬೆಲೆ ಏರಿಕೆ ಮಾಡಲಾಗುತ್ತಿದೆ’ ಎಂದು ಕಂಪನಿಯ ಭಾರತದ ವ್ಯವಸ್ಥಾಪ‍ಕ ನಿರ್ದೇಶಕ ರಾಕೇಶ್‌ ಶ್ರೀವಾಸ್ತವ ತಿಳಿಸಿದ್ದಾರೆ.

ಡಾಟ್ಸನ್‌ ಮತ್ತು ನಿಸಾನ್‌ ಬ್ರ್ಯಾಂಡ್‌ ಅಡಿಯಲ್ಲಿ ₹ 2.89 ಲಕ್ಷ ದಿಂದ ₹ 14.15 ಲಕ್ಷದವರೆಗಿನ ವಾಹನಗಳನ್ನು ಕಂಪನಿ ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು