ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್‌ನ್ಯೂ ಹೋಂಡಾ ಪ್ರಿ-ಲಾಂಚ್ ಬುಕ್ಕಿಂಗ್: ಏನಿದೆ ವೈಶಿಷ್ಟ್ಯ?

ಅಕ್ಷರ ಗಾತ್ರ

ನವದೆಹಲಿ:ದೇಶದ ಪ್ರಮುಖ ವಾಹನ ತಯಾರಿಕಾ ಕಂಪೆನಿ ಹೀರೊ ಕಾರ್ಸ್‌ ಇಂಡಿಯಾ ಲಿಮಿಟೆಡ್‌ (ಎಚ್‌ಸಿಐಎಲ್‌) ತನ್ನ ನೂತನ ಕಾರು ಮಾರಾಟಕ್ಕಾಗಿ ಪ್ರಿ–ಲಾಂಚ್ಬುಕಿಂಗ್‌ ಆರಂಭಿಸಿದೆ.

ಸಾಕಷ್ಟು ನಿರೀಕ್ಷೆ ಹುಟ್ಟಿಸಿರುವ ‘ಆಲ್‌ ನ್ಯೂ 5ನೇ ಜನರೇಶನ್‌ ಹೋಂಡಾ ಸಿಟಿ’ ಕಾರನ್ನು ಜುಲೈ ತಿಂಗಳಲ್ಲಿ ರಸ್ತೆಗಿಳಿಸುವ ಯೋಜನೆಯಲ್ಲಿದೆ. ಗ್ರಾಹಕರು ಹೋಂಡಾದ ಅಧಿಕೃತ ವೆಬ್‌ಸೈಟ್‌ನಲ್ಲಿ ‘ಹೋಂಡಾ ಫ್ರಂ ಹೋಮ್‌’ ಪ್ಲಾಟ್‌ಫಾರ್ಮ್‌ ಮೂಲಕ ಕಾರು ಬುಕ್‌‌ ಮಾಡಬಹುದಾಗಿದೆ.

ಆಲ್ ನ್ಯೂ 5ನೇ ಜನರೇಶನ್ ಹೋಂಡಾ ಸಿಟಿ ಬಗ್ಗೆ
* ಆಲ್ ನ್ಯೂ ಸಿಟಿ ಕಾರನ್ನು ಉದ್ದ ಮತ್ತು ಅಗಲವಾಗಿ ವಿನ್ಯಾಸ ಮಾಡಲಾಗಿದೆ. ಸಾಕಷ್ಟು ಸ್ಥಳಾವಕಾಶ ಹೊಂದಿದ್ದು, ಆರಾಮದಾಯಕ ಕ್ಯಾಬಿನ್ ಇದೆ.

* ಇಂಟೆಲಿಜೆಂಟ್ ವೇರಿಯಬಲ್ ವಾಲ್ವ್ ಟೈಮಿಂಗ್ ಮತ್ತು ಲಿಫ್ಟ್ ಎಲೆಕ್ಟ್ರಾನಿಕ್ ಕಂಟ್ರೋಲ್ ಸಾಮರ್ಥ್ಯ ಹೊಂದಿರುವ ಅತ್ಯುತ್ತಮ ಇಂಧನ ದಕ್ಷತೆ ಒದಗಿಸುವ ಕಾರು ಇದಾಗಿದ್ದು, ಬಿಎಸ್‌–6 ವಾಹನವಾಗಿದೆ.

* ಅಲೆಕ್ಸಾ ರಿಮೋಟ್‌ ಸಿಸ್ಟಂ ಹೊಂದಿರುವ ದೇಶದ ಮೊದಲ ಕಾರು ಇದು. ಟೆಲಿಮ್ಯಾಟಿಕ್‌ ಕಂಟ್ರೋಲ್‌ ಯೂನಿಟ್‌‌ (ಟಿಸಿಯು) ಅನ್ನೂ ಅಳವಡಿಸಲಾಗಿದೆ.

* ಅತ್ಯುತ್ತಮ ಸುರಕ್ಷತಾ ಸಂರಚನೆ ಹೊಂದಿರುವ ಈ ಕಾರು ASEAN N-CAPನಿಂದ 5 ಸ್ಟಾರ್‌ ರೇಟಿಂಗ್‌ ಗಿಟ್ಟಿಸಿದೆ.

* ಫುಲ್‌ ಎಲ್‌ಇಡಿ ಹೆಡ್‌ಲ್ಯಾಂಪ್‌ಗಳನ್ನು ಹೊಂದಿದ ದೇಶದ ಮೊದಲ ಕಾರು ಎಂಬ ಹೆಗ್ಗಳಿಗೆ ಇದರದ್ದು. ಜೊತೆಗೆ ಎಲ್‌ಇಡಿ ಟೇಲ್‌ ಲ್ಯಾಂಪ್‌ಗಳನ್ನು ಜೆಡ್‌ (Z) ಆಕಾರದಲ್ಲಿ ಅಳವಡಿಸಲಾಗಿದೆ.

* 17.7 ಸೆಂ.ಮೀ ಫುಲ್‌ ಎಚ್‌ಡಿ ಜಿ–ಮೀಟರ್‌ ಡಿಸ್ಪ್ಲೇ, ಹಿಂದಿನಿಂದ ಬರುವ ವಾಹನಗಳನ್ನು ನೋಡಿಕೊಳ್ಳಲು ಲೇನ್‌ವಾಚ್‌ ಕ್ಯಾಮೆರಾ, ವಾಹನ ಸ್ಥಿರತೆಗೆ ನೆರವಾಗುವ (ವಿಎಸ್‌ಎ), ಚುರುಕು ಬುದ್ಧಿಮತ್ತೆಯ (ಎಎಚ್‌ಎ) ವೈಶಿಷ್ಟ್ಯಗಳನ್ನು ಈ ಕಾರು ಹೊಂದಿದೆ.

* 20.3 ಸೆಂ.ಮೀ‌ ಸುಧಾರಿತ ಟಚ್‌ಸ್ಕ್ರೀನ್‌ ಡಿಸ್‌ಪ್ಲೇ, ಸ್ಮಾರ್ಟ್‌ಫೋನ್‌ ಸಂಪರ್ಕ ಸೌಲಭ್ಯ, ಆ್ಯಪಲ್‌ ಕಾರ್‌ಪ್ಲೇ, ವೆಬ್‌ಲಿಂಕ್‌, ವನ್‌ ಟಚ್‌ ಎಲೆಕ್ಟ್ರಿಕ್‌ ಸನ್‌ರೂಫ್‌ ಅಳವಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT