ನವದೆಹಲಿ:  ಏಪ್ರಿಲ್ 1ರಿಂದ ಭಾರತದಲ್ಲಿ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಹೊಸ ಪರಿಮಾಣಜಾರಿಯಾಗುತ್ತಿದ್ದು,ರಾಯಲ್ ಎನ್ಫೀಲ್ಡ್ ಬಿಎಸ್–6 ಗುಣಮಟ್ಟ ಹೊಂದಿರುವ ಕ್ಲಾಸಿಕ್ ಮಾದರಿಯ ಬೈಕ್ ಬಿಡುಗಡೆ ಮಾಡಿದೆ.

ಹೊಸ 'ಕ್ಲಾಸಿಕ್ 350' ಬೈಕ್ಗೆ ₹ 1.65 ಲಕ್ಷ (ಎಕ್ಸ್ ಷೋರೂಂ) ಬೆಲೆ ನಿಗದಿಯಾಗಿದೆ. ಎಂಜಿನ್ನಲ್ಲಿ ಅಳವಡಿಸಲಾದ ಎಲೆಕ್ಟ್ರಾನಿಕ್ ಪ್ಯೂಯಲ್ ಇಂಜೆಕ್ಷನ್ ಸಿಸ್ಟಮ್ (ಇಎಫ್ಐ) ತಂತ್ರಜ್ಞಾನವು ಬೈಕ್ನ ಸಾಮರ್ಥ್ಯ ಮತ್ತು ಕಾರ್ಯಕ್ಷಮತೆ ಹೆಚ್ಚಿಸುತ್ತದೆ. ಸ್ಟೆಲ್ತ್ ಬ್ಲ್ಯಾಕ್ ಮತ್ತು ಗನ್ ಮೆಟಲ್ ಗ್ರೇ ಬಣ್ಣಗಳ ಬೈಕ್ಗಳು ಅಲಾಯ್ ವೀಲ್ಸ್ ಹಾಗೂ ಟ್ಯೂಬ್ಲೆಸ್ ಟೈರ್ಸ್ ಒಳಗೊಂಡಿರುತ್ತದೆ.

ಕ್ಲಾಸಿಕ್ ಬ್ಲ್ಯಾಕ್, ಕ್ರೋಮ್ ಬ್ಲ್ಯಾಕ್ ಸೇರಿದಂತೆ ಇತರೆ ಬಣ್ಣಗಳಲ್ಲಿ ಕ್ಲಾಸಿಕ್ 350 ಲಭ್ಯವಿದ್ದು, ಎಲ್ಲ ಮಾದರಿಯ ಬೈಕ್ಗಳಿಗೆ ರಾಯಲ್ ಎನ್ಫೀಲ್ಡ್ 3 ವರ್ಷಗಳ ವಾರಂಟಿ ಹಾಗೂ 3 ವರ್ಷಗಳ ವರೆಗೆ ರೋಡ್ಸೈಡ್ ಅಸಿಸ್ಟನ್ಸ್ ನೀಡುತ್ತಿದೆ.

ಎಬಿಎಸ್ ಹೊಂದಿರುವ ಬಿಎಸ್4 ಮಾದರಿಯ ಕ್ಲಾಸಿಕ್ 350 ಬೈಕ್ಗಿಂತ ಬಿಎಸ್6 ಬೈಕ್ ಬೆಲೆ ಸುಮಾರು ₹ 11,000 ಹೆಚ್ಚಳವಾಗಿದೆ. ಕ್ಲಾಸಿಕ್ 350 ಬೈಕ್ 346 ಸಿಸಿ ಸಿಂಗಲ್ ಸಿಲಿಂಡರ್, 4 ಸ್ಟ್ರೋಕ್, ಟ್ವಿನ್ಸ್ಪಾರ್ಕ್, ಏರ್–ಕೂಲ್ಡ್ ಎಂಜಿನ್ ಹೊಂದಿದೆ. 19.8 ಬಿಎಚ್ಪಿ ಮತ್ತು 28 ನ್ಯೂಟರ್ ಮಿಟರ್ ಟಾರ್ಕ್ ಶಕ್ತಿ ಹೊಮ್ಮಿಸುವ ಸಾಮರ್ಥ್ಯ, 5–ಸ್ಪೀಡ್ ಗೇರ್ಬಾಕ್ಸ್ ಹೊಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.