ಮುಂಬೈ: ಟಾಟಾ ಮೋಟರ್ಸ್ ಪ್ಯಾಸೆಂಜರ್ ವೆಹಿಕಲ್ಸ್ ಕಂಪನಿಯು ಸಿಯಾರಾ ಎಸ್ಯವಿ ವಾಹನವನ್ನು ಹೊಸ ಅವತಾರದಲ್ಲಿ ಶನಿವಾರ ಅನಾವರಣ ಮಾಡಿದೆ.

ಈ ವಾಹನವು ಮಧ್ಯಮ ಗಾತ್ರದ ಎಸ್ಯವಿಗಳಾದ ಹುಂಡೈ ಕ್ರೇಟಾ, ಮಾರುತಿ ಸುಜುಕಿ ಕಂಪನಿಯ ಗ್ರ್ಯಾಂಡ್ ವಿಟಾರಾ ಮತ್ತು ಹೋಂಡಾ ಕಂಪನಿಯ ಎಲಿವೇಟ್ಗೆ ಪೈಪೋಟಿ ನೀಡುವ ನಿರೀಕ್ಷೆ ಇದೆ.

ಈ ವಾಹನವನ್ನು ನವೆಂಬರ್ 25ರಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ.

ಅನಾವರಣ ಕಾರ್ಯಕ್ರಮದಲ್ಲಿ ಮಾತನಾಡಿದ ಟಾಟಾ ಮೋಟರ್ಸ್ನ ಜಾಗತಿಕ ವಿನ್ಯಾಸ ವಿಭಾಗದ ಮುಖ್ಯಸ್ಥ ಹಾಗೂ ಉಪಾಧ್ಯಕ್ಷ ಮಾರ್ಟಿನ್ ಉಲಾರಿಕ್, ‘ಸಿಯಾರಾ ಎಂಬುದು ಒಂದು ಹೆಸರು ಅಥವಾ ಒಂದು ವಾಹನಕ್ಕಿಂತ ಹೆಚ್ಚಿನದು. ಇದು ಭಾರತೀಯರ ಮಹತ್ವಾಕಾಂಕ್ಷೆ ಹಾಗೂ ಸಾಮರ್ಥ್ಯದ ಒಂದು ಜೀವಂತ ಸಂಕೇತ’ ಎಂದು ಹೇಳಿದ್ದಾರೆ.

ಟಾಟಾ ಸಿಯಾರಾ ವಾಹನವನ್ನು ಮೊದಲು 1991ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಇದು 2003ರವರೆಗೆ ಮಾರುಕಟ್ಟೆಯಲ್ಲಿ ಲಭ್ಯವಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.