ಬೆಂಗಳೂರು: ಟೊಯೊಟಾ ಕಿರ್ಲೋಸ್ಕರ್ ಮೋಟರ್ (ಟಿಕೆಎಂ) ಕಂಪನಿಯು ತನ್ನ ಪ್ರೀಮಿಯಂ ಹ್ಯಾಚ್ಬ್ಯಾಕ್ ಕಾರು ‘ಗ್ಲಾನ್ಸಾ’ದ ಹೊಸ ಆವೃತ್ತಿಯನ್ನು ಮಂಗಳವಾರ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಕಾರಿನ ಎಕ್ಸ್ಷೋರೂಂ ಬೆಲೆಯು ₹ 6.39 ಲಕ್ಷದಿಂದ ಆರಂಭ ಆಗುತ್ತದೆ.

ಹೆಚ್ಚಿನ ಇಂಧನ ದಕ್ಷತೆ ಒದಗಿಸುವ ಕೆ–ಸರಣಿಯ 1.2 ಲೀಟರ್ ಸಾಮರ್ಥ್ಯದ ಎಂಜಿನ್ ಇದರಲ್ಲಿ ಇದೆ. ಈ ಎಂಜಿನ್ ಪ್ರತಿ ಲೀಟರ್ ಪೆಟ್ರೋಲ್ಗೆ 22 ಕಿಲೋ ಮೀಟರ್ ದಕ್ಷತೆಯನ್ನು ನೀಡಬಲ್ಲದು. ಈ ಕಾರು ಆಟೊಮ್ಯಾಟಿಕ್ ಹಾಗೂ ಮ್ಯಾನುವಲ್ ಟ್ರಾನ್ಸ್ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ ಎಂದು ಕಂಪನಿ ಹೇಳಿದೆ.

ಆರು ಏರ್ಬ್ಯಾಗ್ಗಳು, ಆ್ಯಂಟಿಲಾಕ್ ಬ್ರೇಕಿಂಗ್ ವ್ಯವಸ್ಥೆ (ಎಬಿಎಸ್), ಇಬಿಡಿ ಇದೆ. ಕಾರಿನಲ್ಲಿ 45ಕ್ಕೂ ಹೆಚ್ಚಿನ ಫೀಚರ್ಗಳು ಇವೆ. ಕೆಂಪು, ಬೂದು, ಸಿಲ್ವರ್, ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಲಭ್ಯವಿರಲಿದೆ. ಐದು ವರ್ಷಗಳವರೆಗೆ ಅಥವಾ 2.20 ಲಕ್ಷ ಕಿಲೋ ಮೀಟರ್ಗಳವರೆಗೆ ವಾರಂಟಿ ಸೌಲಭ್ಯ ಪಡೆದುಕೊಳ್ಳುವ ಅವಕಾಶ ಇದೆ.

₹ 11 ಸಾವಿರ ಪಾವತಿಸಿ ಕಾರು ಬುಕ್ ಮಾಡಬಹುದು.www.toyotabharat.com ವೆಬ್ಸೈಟ್ ಮೂಲಕ ಆನ್ಲೈನ್ ಬುಕಿಂಗ್ ಅವಕಾಶವೂ ಇದೆ. ಆನ್ಲೈನ್ ಮೂಲಕವೇ ವಾಹನ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಕಾರಿನ ವಿತರಣೆಯನ್ನು ಈ ತಿಂಗಳ ಕೊನೆಯಲ್ಲಿ ಆರಂಭಿಸಲಾಗುತ್ತದೆ ಎಂದು ಕಂಪನಿ ಹೇಳಿದೆ.

‘ಗ್ಲಾನ್ಸಾ ಕಾರು ಹಲವು ಗ್ರಾಹಕರ ಹೃದಯ ಗೆದ್ದಿದೆ. ಹೊಸ ಗ್ಲಾನ್ಸಾಕ್ಕೆ ಕೂಡ ಒಳ್ಳೆಯ ಸ್ಪಂದನ ದೊರೆತಿದ್ದು, ಗ್ರಾಹಕರು ದೊಡ್ಡ ಸಂಖ್ಯೆಯಲ್ಲಿ ಕಾರು ಬುಕ್ ಮಾಡಿದ್ದಾರೆ’ ಎಂದು ಟಿಕೆಎಂ ಕಂಪನಿಯ ಮಾರಾಟ ಮತ್ತು ಗ್ರಾಹಕ ಸೇವೆಗಳ ಕಾರ್ಯನಿರ್ವಾಹಕ ಉಪಾಧ್ಯಕ್ಷ ತದಾಶಿ ಅಸಾಜುಮಾ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.