ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿವಿಎಸ್ ಸ್ಕೂಟಿಗೆ ಬೆಳ್ಳಿಹಬ್ಬದ ಸಂಭ್ರಮ

Last Updated 16 ಏಪ್ರಿಲ್ 2019, 19:45 IST
ಅಕ್ಷರ ಗಾತ್ರ

ಟಿವಿಎಸ್ ಮೋಟರ್ ಕಂಪನಿಯು ತನ್ನ ಮುಂಚೂಣಿ ಬ್ರ್ಯಾಂಡ್‌ ಆಗಿರುವ ಟಿವಿಎಸ್ ಸ್ಕೂಟಿಯ 25ನೇ ವರ್ಷದ ಸಂಭ್ರಮದಲ್ಲಿದೆ. ಇದರ ನೆನಪಿಗಾಗಿರಿವೈವಿಂಗ್ ರೆಡ್ ಮತ್ತು ಗ್ಲಿಟರಿಂಗ್ ಗೋಲ್ಡ್ ಎನ್ನುವ ಎರಡು ಹೊಸ ಬಣ್ಣಗಳ ಸ್ಕೂಟಿ ಪೆಪ್ ಪ್ಲಸ್‍ ಬಿಡುಗಡೆ ಮಾಡಿದೆ.

ಟಿವಿಎಸ್ ಸ್ಕೂಟಿಯು ದೇಶಿ ವಾಹನ ಕ್ಷೇತ್ರದ ಹೆಸರಾಂತ ಬ್ರ್ಯಾಂಡ್‌ ಆಗಿದೆ. 25 ವರ್ಷಗಳಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗುತ್ತ ಬಂದಿದೆ.

ರಸ್ತೆಗಳಲ್ಲಿ ಕಾಣಸಿಗುವ ಬಹುತೇಕ ಮಹಿಳಾ ಸವಾರರು, ವಾಹನ ಚಲಾಯಿಸುವ ತಮ್ಮ ಮೊದಲ ಖುಷಿಯನ್ನು ಟಿವಿಎಸ್ ಸ್ಕೂಟಿ ಜೊತೆಗೆ ಹೊಂದಿದ್ದಾರೆ. ಟಿವಿಎಸ್ ಸ್ಕೂಟಿ ಚಾಲನೆಯ ಖುಷಿಯನ್ನು ಇನ್ನಷ್ಟು ವಿಸ್ತರಿಸಲು ವುಮೆನ್ ಆನ್ ವ್ಹೀಲ್ಸ್ ಹೆಸರಿನಲ್ಲಿ ಮಹಿಳೆಯರಿಗಾಗಿ ವಾಹನ ಚಾಲನೆ ತರಬೇತಿ ಸಂಸ್ಥೆ ಆರಂಭಿಸಲಾಗಿತ್ತು. ಕಳೆದ ಹಲವು ವರ್ಷಗಳಲ್ಲಿ ಸ್ಕೂಟಿ ಅನೇಕ ಹೊಸ ಅನ್ವೇಷಣೆಗಳನ್ನು ಕಂಡಿದೆ. ಟಿವಿಎಸ್ ಜೆಸ್ಟ್ 110 ಮೂಲಕ ವಿಶ್ವದ ಅತಿ ಎತ್ತರದ ರಸ್ತೆ ಖರ್‍ದುಂಗ್ ಲಾನಲ್ಲಿ (ಇಂಡಿಯಾ ಬುಕ್‍ಆಫ್ ರೆಕಾರ್ಡ್ಸ್‌) ಸಂಚರಿಸಿದ ಮೊದಲ 110 ಸಿಸಿ ಸ್ಕೂಟರ್ ಆಗಿಯೂ ಹಿರಿಮೆ ಸಾಧಿಸಿದೆ.

ಟಿ.ವಿ.ಎಸ್ ಸ್ಕೂಟಿ ಎಂದಿಗೂ ಗ್ರಾಹಕ ಸ್ನೇಹಿಯಾಗಿದ್ದು, ನವಪೀಳಿಗೆಯ ಮಹಿಳೆಯರು ತಮ್ಮ ಪ್ರತಿ ಪ್ರಯಾಣವನ್ನು ಅನುಕೂಲಕರವಾಗಿ, ಆರಾಮದಾಯಕವಾಗಿ, ಕೈಗೆಟುಕುವ ದರದಲ್ಲಿ, ಸುರಕ್ಷಿತ ಮತ್ತು ಖುಷಿಯಿಂದ ಅನುಭವಿಸುವ ಸಂಭ್ರಮ ನೀಡುತ್ತ ಬಂದಿದೆ.

‘ಟಿವಿಎಸ್ ಸ್ಕೂಟಿ ಪೆಪ್+, ಕೈಗೆಟುಕುವ ದರದ ಸ್ಕೂಟರ್ ಎಂಬುದಕ್ಕಿಂತಲೂ ಹೆಚ್ಚಿನದಾಗಿದೆ. ಒಟ್ಟಾರೆ 45 ಲಕ್ಷ ಗ್ರಾಹಕರನ್ನು ಹೊಂದಿದೆ. 25 ವರ್ಷಗಳ ಅವಧಿಯಲ್ಲಿ ಕಂಪನಿಯು ನವಪೀಳಿಗೆಯ ಮಹಿಳೆಯರಿಗಾಗಿ ಈ ಕ್ಷಣದ ಪ್ರಯಾಣದ ಅಗತ್ಯವಾಗಿ ಗಮನ ಸೆಳೆಯುತ್ತಿದೆ. ಕೈಗೆಟುಕುವ ದರದ, ಆರಾಮದಾಯಕವಾದ ಸುರಕ್ಷಿತ ಚಾಲನೆಯ ಅನುಭವ ನೀಡುತ್ತಿದೆ. ಟಿವಿಎಸ್ ಸ್ಕೂಟಿ ಕುಟುಂಬಗಳಲ್ಲಿ ತನ್ನದೇ ಆದ ಸ್ಥಾನ ಗಳಿಸಿದ್ದು, ಸದಸ್ಯರೆಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

ಟಿ.ವಿ.ಎಸ್ ಸ್ಕೂಟಿ ಈಗ ಸಿಂಕ್ರನೈಸ್ಡ್ ಬ್ರೇಕಿಂಗ್ ಟೆಕ್ನಾಲಜಿಯೊಂದಿಗೆಬರಲಿದೆ. ನೂತನ ಸರಣಿಯ ಸ್ಕೂಟಿ ಪೆಪ್‌ ಪ್ಲಸ್‌ವಿಶೇಷವಾಗಿ 25ನೇ ವರ್ಷದ ಲಾಂಛನ,ಹೊಸಗ್ರಾಫಿಕ್ಸ್‌ ಜೊತೆಗೆ ಬರಲಿದೆ.

ಎರಡು ಬಣ್ಣಗಳಲ್ಲಿ: ಟಿ.ವಿಎಸ್ ಸ್ಕೂಟಿ ಪೆಪ್+ 87.8 ಸಿ.ಸಿ, ಏರ್ ಕೂಲ್ಡ್ ಸಿಂಗಲ್ ಸಿಲಿಂಡರ್‌ ಎಕೊಥ್ರಸ್ಟ್ ಎಂಜಿನ್ ಹೊಂದಿದ್ದು, 4.9 ಪಿಎಸ್ ಆಫ್ ಪವರ್ ಮತ್ತು 5.8 ಎನ್.ಎಂ ಟಾರ್ಕ್ ಇದೆ.

ಎಕೊಥ್ರಸ್ಟ್ ಎಂಜಿನ್ ದೀರ್ಘಾವಧಿಯ ಬಾಳಿಕೆ ಬರಲಿದೆ. ಆರಾಮದಾಯಕ ಚಾಲನೆಗೆ ಅನುಕೂಲವಾಗಿದೆ. ಟೆಲಿಸ್ಕೋಪಿಕ್ ಸಸ್ಪೆನ್ಷನ್ ಹೊಂದಿದೆ. ಟಿ.ವಿ.ಎಸ್ ಸ್ಕೂಟಿ ಪೆಪ್+ ಅತ್ಯುತ್ತಮ ಚಾಲನೆಯ ಭರವಸೆಯನ್ನು ನೀಡಲಿದೆ. ಟಿ.ವಿಎಸ್ ಸ್ಕೂಟಿ ಪೆಪ್+ ಈಗ ಮೊಬೈಲ್ ಚಾರ್ಜರ್ ಸಾಕೆಟ್, ಸೈಡ್ ಸ್ಟ್ಯಾಂಡ್ ಅಲಾರಾಂ, ಅಂಡರ್ ಸೀಟ್ ಸ್ಟೋರೇಜ್ ಹುಕ್ಸ್, ಡಿಆರ್‍ಎಲ್, ಮುಕ್ತ ಗ್ಲೋವ್ ಬಾಕ್ಸ್, ಮತ್ತು ಟಿವಿಎಸ್ ಹಕ್ಕುಸ್ವಾಮ್ಯ ಹೊಂದಿರುವ ಈಜಿ ಸ್ಟ್ಯಾಂಡ್ ಟೆಕ್ನಾಲಜಿ ಒಳಗೊಂಡಿದ್ದು, ಸೆಂಟರ್ ಸ್ಟ್ಯಾಂಡ್ ಹಾಕುವುದನ್ನು ಶೇ 30ರಷ್ಟು ಸುಲಭವಾಗಿಸಲಿದೆ.

ಟಿವಿಎಸ್ ಜೆಸ್ಟ್ 110 ಸಿಂಗಲ್ ಸಿಲಿಂಡರ್, ಫೋರ್ ಸ್ಟ್ರೋಕ್, ಏರ್ ಕೂಲ್ಡ್ 109.7ಸಿಸಿ ಸಿ.ವಿ.ಟಿ.ಐ (ಅಗಿಖಿI) ಎಂಜಿನ್ ಒಳಗೊಂಡಿದ್ದು, ಒಟ್ಟಾರೆಯಾಗಿ ನಿರ್ವಹಣೆಗೆ ಸುಲಭವಾಗಲಿದೆ. ಇದು ತನ್ನ ಹಿರಿಮೆಗೆ ಅನುಗುಣವಾಗಿ ಆಕರ್ಷಕ ವರ್ಣಗಳಿಂದ ಗಮನಸೆಳೆಯಲಿದೆ. ಆಕರ್ಷಕ ವಿನ್ಯಾಸವಿದ್ದು, ಆರಂಭದಲ್ಲಿ 11.1 ಸೆಕೆಂಡ್‍ಗಳ ಅವಧಿಯಲ್ಲಿ ಗಂಟೆಗೆ 0-60 ಕಿ.ಮೀ ಪಿಕ್ ಅಪ್ ಹೊಂದಿದೆ. ಟಿವಿಎಸ್ ಸ್ಕೂಟಿ ಪೆಪ್ + ಬೆಲೆ ₹ 42,605 (ಎಕ್ಸ್ ಷೋರೂಂ) ಆಗಿದ್ದು, ದೇಶದಾದ್ಯಂತ ಟಿ.ವಿ.ಎಸ್ ಮೋಟರ್ ಕಂಪನಿಯ ಎಲ್ಲ ವಿತರಕರಲ್ಲಿಯೂ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT