ಗುರುವಾರ , ನವೆಂಬರ್ 21, 2019
22 °C

ಟಿವಿಎಸ್ ಎಕ್ಸ್‌ಎಲ್ 100 ಕಂಫರ್ಟ್ ಬಿಡುಗಡೆ

Published:
Updated:
Prajavani

ಹುಬ್ಬಳ್ಳಿ: ದ್ವಿಚಕ್ರ ವಾಹನ ತಯಾರಿಕಾ ಕಂಪನಿ ಟಿವಿಎಸ್‌ನ ನೂತನ ಎಕ್ಸ್‌ಎಲ್‌100 ಕಂಫರ್ಟ್‌ ದ್ವಿಚಕ್ರ ವಾಹನವನ್ನು ಕಂಪನಿಯ ಯುಟಿಲಿಟಿ ಪ್ರಾಡಕ್ಟ್ ವಿಭಾಗದ ಉಪ ಪ್ರಧಾನ ವ್ಯವಸ್ಥಾಪಕ ಎನ್‌.ಆರ್‌. ವಿಘ್ನೇಶ್  ಹುಬ್ಬಳ್ಳಿಯಲ್ಲಿ ಸೋಮವಾರ ಬಿಡುಗಡೆ ಮಾಡಿದರು.

ಬಳಿಕ ಮಾತನಾಡಿ, ‘ನೂತನ ದ್ವಿಚಕ್ರ ವಾಹನವು ಐ ಟಚ್ ಸ್ಟಾರ್ಟ್, ಮೊಬೈಲ್ ಚಾರ್ಜಿಂಗ್, ಸಿಂಕ್ ಬ್ರೇಕಿಂಗ್ ತಂತ್ರಜ್ಞಾನ, ಉದ್ದವಾದ ಸೀಟು, ಕುಶನ್ ಬ್ಯಾಕ್ ರೆಸ್ಟ್‌ನೊಂದಿಗೆ ಕ್ರೋಮ್ ಲೆಗ್ ಗಾರ್ಡ್ ಮತ್ತು ಕ್ರೋಮ್ ಸೈಲೆನ್ಸರ್ ಗಾರ್ಡ್ ವೈಶಿಷ್ಟ್ಯಗಳನ್ನು ಹೊಂದಿದೆ’ ಎಂದರು.

‘99.7 ಸಿ.ಸಿ 4 ಸ್ಟ್ರೋಕ್ ಇಂಜಿನ್ ಸಾಮರ್ಥ್ಯ ಹೊಂದಿರುವ ವಾಹನವು ಒಂದು ಲೀಟರ್ ಪೆಟ್ರೋಲ್‌ಗೆ 60 ಕಿಲೋಮೀಟರ್ ಮೈಲೇಜ್ ನೀಡಲಿದೆ. ಕೂಲ್ ಮಿಂಟ್ ಬ್ಲ್ಯೂ, ಲಸ್ಟರ್ ಗೋಲ್ಡ್ ಹಾಗೂ ಸ್ಪಾರ್ಕಿಂಗ್ ಸಿಲ್ವರ್ ಬಣ್ಣಗಳಲ್ಲಿ ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಇದರ ಎಕ್ಸ್‌ಶೋರೂಂ ಬೆಲೆ ಕರ್ನಾಟಕದಲ್ಲಿ ₹41,619 ಆಗಿದೆ’ ಎಂದು ತಿಳಿಸಿದರು.

‘ದೇಶದಲ್ಲಿ ಮೊಪೆಡ್ ವಾಹನಗಳನ್ನು ತಯಾರಿಸುವ ಏಕೈಕ ಕಂಪನಿಯಾಗಿರುವ ಟಿವಿಎಸ್‌ ಒಟ್ಟು 1.25 ಕೋಟಿ ಗ್ರಾಹಕರನ್ನು ಹೊಂದಿದೆ. ಪ್ರಸ್ತುತ ಎಕ್ಸ್‌ಎಲ್ 100  ಐದು ಮಾದರಿಗಳಲ್ಲಿ ಲಭ್ಯವಿದೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)