ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗತ್ತಿನ ಮೊದಲ ಹಾರುವ ಕಾರು ಅನಾವರಣ: ಹೇಗಿದೆ ಗೊತ್ತಾ?

Published 29 ಸೆಪ್ಟೆಂಬರ್ 2023, 13:10 IST
Last Updated 29 ಸೆಪ್ಟೆಂಬರ್ 2023, 13:10 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಡೆಟ್ರಾಯಿಟ್‌ ಆಟೊ ಶೋದಲ್ಲಿ ಅಲೆಫ್ ಏರೋನಾಟಿಕ್ಸ್ ಸಂಸ್ಥೆ ತಯಾರಿಸಿದ ಜಗತ್ತಿನ ಮೊದಲ ಹಾರುವ ಕಾರನ್ನು ಅನಾವರಣಗೊಳಿಸಲಾಗಿದೆ. ಈ ಕಾರು ಈ ವರ್ಷದ ಜೂನ್‌ನಲ್ಲಿ  ಕಾನೂನು ಅನುಮೋದನೆಯನ್ನೂ ಪಡೆದಿದೆ.

ಈ ಹಾರುವ ಕಾರಿನಲ್ಲಿ ಇಬ್ಬರು ಕುಳಿತುಕೊಳ್ಳಬಹುದು. ಇದರ ಬೆಲೆ $299,999 ಅಂದರೆ ಸರಿಸುಮಾರು ₹2.46 ಕೋಟಿ ಆಗಿದೆ. ಸಂಪೂರ್ಣ ಎಲೆಕ್ಟ್ರಿಕ್‌ ಕಾರ್‌ ಇದಾಗಿದೆ. ಕಾರು ಆಗಸದಲ್ಲಿ ಚಲಿಸುವಾಗ ಚಾಲಕ ಸ್ಥಿರವಾಗಿರುವಂತೆ ಕಾರಿನ ಕ್ಯಾಬಿನ್ ಅನ್ನು ವಿನ್ಯಾಸಗೊಳಿಸಲಾಗಿದೆ. ಒಂದು ಬಾರಿ ಸಂಪೂರ್ಣ ಚಾರ್ಜ್‌ ಆದರೆ ಆಗಸದಲ್ಲಿ 177 ಕಿ.ಮೀ., ರಸ್ತೆ ಮೇಲೆ 322 ಕಿ.ಮೀ ದೂರ ಚಲಿಸಬಲ್ಲದು. ವಿಶೇಷವೆಂದರೆ ಈ ಕಾರಿನಲ್ಲಿ ಕುಳಿತಿರುವವರು 180 ಡಿಗ್ರಿಯಷ್ಟು ಸುತ್ತಲಿನ ಪ್ರದೇಶವನ್ನು ನೋಡಬಹುದಾಗಿದೆ.

ಕಾರ್‌ ಕಂಪನಿಯ ಸಂಸ್ಥಾಪಕ ಮತ್ತು  ಸಿಇಒ  ಜಿಮ್‌ ಡುಖೋವ್ನಿ ಈ ಬಗ್ಗೆ, ‘ಈಗ ಅನಾವರಣಗೊಳಿಸಿರುವ ಕಾರು ಗ್ರಾಹಕರಿಗೆ ಮಾರಾಟ ಮಾಡುವ ಅಂತಿಮ ಆವೃತ್ತಿಯಲ್ಲ. ಗ್ರಾಹಕರಿಗೆ ದೊರಕುವ ಸಮಯವೂ ಹತ್ತಿರವಿದೆ. ಈ ಕಾರನ್ನು ಆಗಸದಲ್ಲಿ ಹೇಗೆ ಡ್ರೈವ್‌ ಮಾಡಬಹುದು ಎನ್ನುವುದನ್ನು ತೋರಿಸಿಕೊಡುತ್ತೇನೆ’ ಎಂದಿದ್ದಾರೆ.

ಈ ವರ್ಷ ಜೂನ್‌ನಲ್ಲಿ ಫೆಡರಲ್ ಏವಿಯೇಷನ್ ​​​​ಅಡ್ಮಿನಿಸ್ಟ್ರೇಷನ್‌ನಿಂದ ವಿಶೇಷ ಏರ್‌ವರ್ತಿನೆಸ್ ಪ್ರಮಾಣೀಕರಣವನ್ನು ಈ ಕಾರು ಪಡೆದುಕೊಂಡಿದೆ. ಈ ಅನುಮೋದನೆಯಿಂದಾಗಿ, ಅಲೆಫ್ ಏರೋನಾಟಿಕ್ಸ್ ಸಂಸ್ಥೆಯು ರಸ್ತೆ ಮತ್ತು ಗಾಳಿಯಲ್ಲಿ ಹಾರುವ ಕಾರನ್ನು ಪರೀಕ್ಷಿಸಲು ಸಾಧ್ಯವಾಗುತ್ತದೆ.

ಅಲೆಫ್ ಏರೋನಾಟಿಕ್ಸ್ ಸಂಸ್ಥೆಯು 2022ರಲ್ಲಿಯೇ ಕಾರು ಖರೀದಿಗೆ ನೋಂದಣಿ ಆರಂಭಿಸಿದ್ದು, ಈಗಾಗಲೇ 500 ಬುಕಿಂಗ್‌ ಆಗಿದೆ ಎಂದು ವರದಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT