ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌಂದರ್ಯ: ಅಂದ ಹೆಚ್ಚಿಸುವ ಆರೆಂಜ್ ಫೇಶಿಯಲ್‌

Last Updated 27 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಹೆಣ್ಣುಮಕ್ಕಳಿಗೆ ತಮ್ಮ ಸೌಂದರ್ಯದ ಬಗ್ಗೆ ಅಪಾರ ಕಾಳಜಿ. ಮುಖದ ಅಂದ ಹೆಚ್ಚಿಸಿಕೊಳ್ಳುವ ಮಾರ್ಗವನ್ನು ಹುಡುಕುತ್ತಲೇ ಇರುತ್ತಾರೆ. ಅದರಲ್ಲೂ ಮೊಡವೆ, ಕಪ್ಪುಕಲೆಗಳಿಲ್ಲದ ಸುಂದರ ಮುಖ ಯಾರಿಗೆ ಇಷ್ಟವಿಲ್ಲ ಹೇಳಿ. ಬೇಸಿಗೆ, ಮಳೆಗಾಲ ಹಾಗೂ ಚಳಿಗಾಲ ಯಾವುದೇ ಋತುಮಾನವಿರಲಿ ತಮ್ಮ ಮುಖದ ತ್ವಚೆ ಸದಾ ಕಾಂತಿಯಿಂದ ಕೂಡಿರಬೇಕು ಎಂದು ಬಯಸುತ್ತಾರೆ. ಆ ಕಾರಣಕ್ಕೆ ಬ್ಯೂಟಿಪಾರ್ಲರ್‌ಗೆ ತೆರಳಿ ಫೇಶಿಯಲ್‌ನ ಮೊರೆ ಹೋಗುತ್ತಾರೆ. ಋತುಮಾನಕ್ಕೆ ತಕ್ಕಂತೆ ತ್ವಚೆಗೆ ಹೊಂದುವಂತಹ ಹಲವು ಬಗೆಯ ಫೇಶಿಯಲ್‌ಗಳಿವೆ. ‘ಮಳೆಗಾಲ ಹಾಗೂ ಚಳಿಗಾಲಕ್ಕೆ ‘ಆರೆಂಜ್ ಫೇಶಿಯಲ್’ ಸೂಕ್ತ’ ಎನ್ನುತ್ತಾರೆ ಬೆಂಗಳೂರಿನ ಸ್ಕೈಲೈನ್ ಬ್ಯೂಟಿಪಾರ್ಲರ್‌ನ ನಾಗವೇಣಿ .

ಆರೆಂಜ್ ಫೇಶಿಯಲ್‌
ಕಿತ್ತಳೆ ಹಣ್ಣಿನಲ್ಲಿ ಸಿಟ್ರಸ್ ಅಂಶ ಅಧಿಕವಿದೆ. ಇದರಲ್ಲಿ ವಿಟಮಿನ್ ಹಾಗೂ ಖನಿಜಾಂಶ ಹೇರಳವಾಗಿದೆ. ಈ ಹೆಣ್ಣಿನ ಸೇವನೆ ಆರೋಗ್ಯದೊಂದಿಗೆ ಚರ್ಮದ ಅಂದ ಹೆಚ್ಚಲು ಸಹಕಾರಿ. ಕಿತ್ತಳೆ ಸಿಪ್ಪೆ ಕೂಡ ಅಂದ ಹೆಚ್ಚಿಸುವ ಗುಣವನ್ನು ಹೊಂದಿದೆ. ಕಿತ್ತಳೆ ಹಣ್ಣಿನಲ್ಲಿರುವ ವಿವಿಧ ಅಂಶಗಳು ಚರ್ಮಕ್ಕೆ ಹಲವು ರೀತಿಯಲ್ಲಿ ಉಪಯುಕ್ತವಾಗಿವೆ. ಮುಖದ ಅಂದ ಕೆಡಿಸುವ ಸಾಮಾನ್ಯ ಸಮಸ್ಯೆಗಳಿಗೂ ಕಿತ್ತಳೆಯಲ್ಲಿ ಮದ್ದಿದೆ.

ಆರೆಂಜ್‌ ಫೇಸ್‌ಮಾಸ್ಕ್‌ನ ಉಪಯೋಗ
* ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಅಂಶ ಅಧಿಕವಿದೆ. ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಅಂಶ ಮುಖದ ಚರ್ಮದಲ್ಲಿರುವ ರ‍್ಯಾಡಿಕಲ್‌ಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಅಲ್ಲದೇ ಚರ್ಮವನ್ನು ಆರೋಗ್ಯವಾಗಿಟ್ಟು ಕಾಂತಿ ಹೆಚ್ಚುವಂತೆ ಮಾಡುತ್ತದೆ.
*ಆರೆಂಜ್‌ನಲ್ಲಿ ಸಿಟ್ರಸ್‌ ಅಂಶ ಅಧಿಕವಿದ್ದು ಇದು ಮೊಡವೆ ಹಾಗೂ ಕಪ್ಪುಕಲೆಗಳನ್ನು ನಿವಾರಿಸುತ್ತದೆ.
*ಇದು ಬ್ಲೀಚಿಂಗ್ ಅಂಶ ಹೊಂದಿದ್ದು ಚರ್ಮದ ಹೊಳಪನ್ನು ಹೆಚ್ಚಿಸುತ್ತದೆ.
* ಚರ್ಮವು ಕಳೆಗುಂದಿದ್ದರೆ ಆರೆಂಜ್ ಫೇಶಿಯಲ್ ಮಾಡಿಸಿಕೊಳ್ಳುವುದರಿಂದ ಒಣಚರ್ಮ ನಿವಾರಣೆಯಾಗಿ ಕಾಂತಿ ಹೆಚ್ಚುತ್ತದೆ.
* ಚರ್ಮವನ್ನು ಆಳದಿಂದ ಮಾಯಿಶ್ಚರೈಸ್‌ ಮಾಡುತ್ತದೆ.
* ಆರೆಂಜ್ ಫೇಶಿಯಲ್‌ ಅನ್ನು ನಿಯಮಿತವಾಗಿ ಮಾಡಿಕೊಳ್ಳುವುದರಿಂದ ಚರ್ಮದ ಸುಕ್ಕು ಹಾಗೂ ಕಲೆಗಳ ನಿವಾರಣೆಯಾಗುತ್ತದೆ. ಅಲ್ಲದೇ ಚರ್ಮದಲ್ಲಿ ವಯಸ್ಸಾದ ಲಕ್ಷಣಗಳು ಕಾಣಿಸದಂತೆ ಮಾಡುತ್ತದೆ.
* ಚರ್ಮದಲ್ಲಿರುವ ಎಣ್ಣೆ ಅಂಶವನ್ನು ತೊಡೆದು ಹಾಕಲು ಇದು ಸಹಕಾರಿ.
*ನಿಯಮಿತವಾಗಿ ಫೇಶಿಯಲ್ ಮಾಡಿಕೊಳ್ಳುವುದರಿಂದ ಚರ್ಮದ ಆರೋಗ್ಯವು ವೃದ್ಧಿಯಾಗುತ್ತದೆ. ಮುಖದ ರಂಧ್ರವನ್ನು ನಿವಾರಿಸಿ ಚರ್ಮವು ಮೃದುವಾಗಿ ಹೊಳೆಯುವಂತೆ ಮಾಡುತ್ತದೆ.

ಮನೆಯಲ್ಲೇ ತಯಾರಿಸಿ ಬಳಸಿ
ಕಿತ್ತಳೆಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ನಂತರ ಅದನ್ನು ಪುಡಿ ಮಾಡಿ ಅದನ್ನು ಮುಖಕ್ಕೆ ಹಚ್ಚಬಹುದು. ಅದರೊಂದಿಗೆ ಮುಲ್ತಾನಿಮಿಟ್ಟಿ, ಗುಲಾಬಿಜಲ, ಲೋಳೆಸರ, ವಿಟಮಿನ್‌ ಇ ಹಾಗೂ ಹಾಲನ್ನು ಸೇರಿಸಿ ಮಿಶ್ರಣ ಮಾಡಿ ಹಚ್ಚಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT