ಹೆಣ್ಣುಮಕ್ಕಳು ಕೈಗೆ ಬಳೆ ತೊಡುವುದು ಸಂಪ್ರದಾಯ. ಆದರೆ ಈಗಿನ ಫ್ಯಾಷನ್ ಯುಗದಲ್ಲಿ ಬಳೆಗಳಿಗೆ ಪರ್ಯಾಯವಾಗಿ ಬ್ರೇಸ್ಲೆಟ್ಸ್ ಅಥವಾ ಬ್ರ್ಯಾಂಡ್ಗಳು ಟ್ರೆಂಡ್ನಲ್ಲಿವೆ.

ಕಾಲೇಜು ಹುಡುಗಿಯರಿಂದ ಹಿಡಿದು ಕಚೇರಿಗೆ ಹೋಗುವ ಮಹಿಳೆಯರವರೆಗೂ ಬ್ರೇಸ್ಲೆಟ್ಸ್ಗಳಿಗೆ ಮರುಳಾಗದಿರುವವರು ಯಾರಿಲ್ಲ. ಅಂಗಡಿಯ ಮುಂದೆ ನಿಂತಾಗಲೆಲ್ಲ ತರಹೇವಾರಿ ಬ್ರೇಸ್ಲೆಟ್ಸ್ ನೋಡಿ ಒಂದಾದರೂ ಕೊಳ್ಳುವ ಮನಸ್ಸಾಗುವುದು ನಿಶ್ಚಿತ. ಬೆಳ್ಳಿ, ಚಿನ್ನದ ಬ್ರೇಸ್ಲೆಟ್ಸ್ ದುಬಾರಿಯಾಗಬಹುದು. ಅವುಗಳನ್ನು ಒಮ್ಮೆ ಕೊಂಡರೂ ಎಲ್ಲಾ ಉಡುಪಿಗೆ ಹೊಂದಾಣಿಕೆಯಾಗದಿರಬಹುದು. ಹೀಗಾಗಿ ಟ್ರೆಂಡ್ಗೆ ತಕ್ಕಹಾಗೆ ಕೈಗೆ ಆಭರಣ ಧರಿಸಬಹುದು. ಹಾಗಾದರೆ ಯಾವೆಲ್ಲಾ ವಿಧದ ಬ್ರೇಸ್ಲೆಟ್ಸ್ ಕೊಳ್ಳಬಹುದು ಎನ್ನುವುದಕ್ಕೆ ಇಲ್ಲಿವೆ ಟ್ರೆಂಡಿ ಐಡಿಯಾ.

ಉಲ್ಲನ್ ಬ್ರೇಸ್ಲೆಟ್ಸ್:
ಕಡಿಮೆ ದರದಲ್ಲಿ ವಿವಿಧ ಬಣ್ಣಗಳಲ್ಲಿ ಉಲ್ಲನ್ ಬ್ರೇಸ್ಲೆಟ್ಸ್ಗಳು ದೊರೆಯುತ್ತವೆ. ಧರಿಸಲೂ ಹಗುರವಾಗಿರುವ ಇವು ಟ್ರೆಂಡಿಯಾಗಿಯೂ ಕಾಣಿಸುತ್ತವೆ. ಮಣಿಗಳ ಅಥವಾ ಮುತ್ತು ಪೋಣಿಸಿರುವ ಉಲ್ಲನ್ ಬ್ರೇಸ್ಲೆಟ್ಸ್ಗಳನ್ನು ವಿವಿಧ ವಿನ್ಯಾಸಗಳಲ್ಲಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು.

ಮಣಿಗಳ ಬ್ರೇಸ್ಲೆಟ್ಸ್:
ಬಣ್ಣ ಬಣ್ಣದ ಮಣಿಗಳು ಅಥವಾ ಬಣ್ಣದ ಪುಟ್ಟ ಪುಟ್ಟ ಕಲ್ಲುಗಳಿಂದ ತಯಾರು ಮಾಡಿರುವ ಬ್ರೇಸ್ಲೆಟ್ಸ್ಗಳು ಕೈಗಳ ಅಂದವನ್ನು ಹೆಚ್ಚಿಸುತ್ತವೆ. ಪೋಣಿಸಿದ ಮಣಿಗಳ ನಡುವೆ ಚಿಕ್ಕ ಗೆಜ್ಜೆ ಇದ್ದರೆ ಇನ್ನೂ ಆಕರ್ಷಕ.

ಲೆದರ್ ಬ್ರೇಸ್ಲೆಟ್ಸ್:
ಜಡೆಯಂತೆ ಹೆಣೆದಿರುವ, ಒಂದಕ್ಕೊಂದು ಬೆಸೆದಿರುವಂತೆ ಸುತ್ತಿರುವ ಲೆದರ್ ಬ್ರೇಸ್ಲೆಟ್ಸ್ಗಳು ಟ್ರೆಂಡಿಯಾಗಿ ಕಾಣಿಸುತ್ತವೆ. ಜೀನ್ಸ್, ಸಿಂಗಲ್ ಪೀಸ್ ಡ್ರೆಸ್ಗಳಿಗೆ ಉತ್ತಮ ಕಾಂಬಿನೇಷನ್ ಆಗಿರುತ್ತದೆ. ಧರಿಸಲೂ ಹಗುರವಾಗಿರುವುದರಿಂದ ಆರಾಮದಾಯಕ ಎನಿಸುತ್ತದೆ.

ಬಟ್ಟೆಯ ಬ್ರೇಸ್ಲೆಟ್ಸ್:
ಹತ್ತಿ, ರೇಷ್ಮೆ ಅಥವಾ ಮೃದು ಬಟ್ಟೆಗಳಿಂದ ತಯಾರಿಸಿದ ಬ್ರೇಸ್ಲೆಟ್ಸ್ಗಳು ಎಲ್ಲಾ ರೀತಿಯ ಉಡುಪುಗಳಿಗೆ ಒಪ್ಪುವಂತಿರುತ್ತದೆ. ಬಟ್ಟೆಯ ಬ್ರೇಸ್ಲೆಟ್ಸ್ಗಳನ್ನು ವಿವಿಧ ರೀತಿಯಲ್ಲಿ ವಿನ್ಯಾಸ ಮಾಡಿಕೊಳ್ಳಬಹುದು. ಬಳೆಗಳಿಗೆ ನೇಯಬಹುದು, ಬಟ್ಟೆಯ ಮೇಲೆ ಕಸೂತಿ ಮಾಡಿ ಎಲಾಸ್ಟಿಕ್ ಎಳೆಗಳಿಗೆ ಸುತ್ತಿಕೊಳ್ಳಬಹುದು. ಇವು ಕೈಗಳಿಗೆ ಅಂದವಾಗಿಯೂ ಕಾಣುತ್ತವೆ.

ರಬ್ಬರ್ಬ್ರೇಸ್ಲೆಟ್ಸ್:

ಈಗೀಗ ರಬ್ಬರ್ ಬ್ರೇಸ್ಲೆಟ್ಸ್ಗಳನ್ನು ಹೆಚ್ಚು ಕಾಣಬಹುದು. ಫಿಟ್ನೆಸ್, ಕ್ರೀಡಾ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರು ರಬ್ಬರ್ ಬ್ರೇಸ್ಲೆಟ್ಸ್ ಬಳಸುತ್ತಾರೆ. ಇವುಗಳಿಗೆ ನೀರು ತಾಗಿದರೂ ಹಾಳಾಗುವುದಿಲ್ಲ. ದೀರ್ಘ ಬಾಳಿಕೆಗೆ ಇವು ಉತ್ತಮ ಆಯ್ಕೆ. ಕೆಲವು ಕಾರ್ಯಕ್ರಮಗಳಲ್ಲಿ ಗುರುತಿಸುವಿಕೆಯ ಭಾಗವಾಗಿ ರಬ್ಬರ್ ಬ್ರೇಸ್ಲೆಟ್ಸ್ಗಳನ್ನು ನೀಡುವ ರೂಢಿಯೂ ಇದೆ.

ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಬ್ರೇಸ್ಲೆಟ್ಸ್ಗಳೂ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಥೇಟ್ ವಾಚಿನಂತೆಯೇ ಕಾಣುವ ಬ್ರೇಸ್ಲೆಟ್ಸ್ಗಳು ದೈಹಿಕ ಚಟುವಟಿಕೆ, ಆರೋಗ್ಯವನ್ನು ಟ್ರ್ಯಾಕ್ ಮಾಡಲು ನೆರವಾಗುತ್ತವೆ. ಮಣಿಕಟ್ಟಿನ ಮೇಲೆ ಪುಟ್ಟ ಬ್ಯಾಂಡ್ನಂತೆ ಕಾಣುವ ಇವು ಟ್ರೆಂಡಿಯಾಗಿ ಕಾಣಿಸುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.