ಇಲ್ಲಿವೆ ಒಂದಿಷ್ಟು ಎಳನೀರಿನ ಬ್ಯೂಟಿಟಿಪ್ಸ್
*ಮುಂಜಾನೆ ಎದ್ದಾಗ ನೀರಿನಿಂದ ಮುಖ ತೊಳೆದ ಬಳಿಕ ತಾಜಾ ಎಳನೀರನ್ನು ಮುಖಕ್ಕೆ ಚಿಮುಕಿಸಿಕೊಳ್ಳಿ. ಅದನ್ನು ಒರೆಸದೇ ಹಾಗೆ ಆರಲು ಬಿಡಿ. ಇದರಿಂದ ಇಡೀ ದಿನ ಚರ್ಮ ತಾಜಾತನದಿಂದ ಕೂಡಿರುತ್ತದೆ.

*ಎಳನೀರನ್ನು ಕೈಬೆರಳಲ್ಲಿ ಅದ್ದಿ ಕೂದಲ ಬುಡಕ್ಕೆ ಮಸಾಜ್ ಮಾಡಿದರೆ, ಗಂಟುಗಂಟಾಗಿರುವ ಕೂದಲು ಬಿಡಿಸಿಕೊಳ್ಳುತ್ತದೆ. ಅಷ್ಟೇ ಅಲ್ಲ, ಎಳನೀರು ಕೂದಲಿನ ತೇವಾಂಶವನ್ನೂ ಕಾಪಾಡುತ್ತದೆ.

*ಅರಿಶಿನ ಪುಡಿ ಮತ್ತು ಶ್ರೀಗಂಧದ ಪುಡಿಯನ್ನು ಸಮಪ್ರಮಾಣದಲ್ಲಿ ಬೆರೆಸಿ, ಎಳನೀರಿನಲ್ಲಿ ಕಲಸಿ, ಮುಖಕ್ಕೆ ಹಚ್ಚಿಕೊಂಡು, ಹದಿನೈದು ನಿಮಿಷದ ಬಳಿಕ ತೊಳೆದುಕೊಂಡಲ್ಲಿ ಚರ್ಮ ಹೊಳಪಾಗುತ್ತದೆ.

* ಬಿಸಿಲಿನ ಝಳದಿಂದ ಚರ್ಮದ ಬಣ್ಣ ಕಪ್ಪಾಗುವುದನ್ನು ತಡೆಯಲು ಎಳನೀರು, ಮುಲ್ತಾನಿಮಿಟ್ಟಿ ಪೇಸ್ಟ್ ಹಚ್ಚಬೇಕು.

*ಎಳನೀರು ಮತ್ತು ಸೌತೆಕಾಯಿ ರಸವನ್ನು ಸಮ ಪ್ರಮಾಣದಲ್ಲಿ ಬೆರೆಸಿ ನಿತ್ಯವೂ ಹಚ್ಚುತ್ತಾ ಬಂದರೆ, ಚರ್ಮದ ಬಣ್ಣ ತಿಳಿಯಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.