ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಣ್ಣದ ಗರಿ ಆಭರಣ

Last Updated 27 ಆಗಸ್ಟ್ 2018, 10:58 IST
ಅಕ್ಷರ ಗಾತ್ರ

ಫ್ಯಾಷನ್‌ ಲೋಕವೆಂಬುದು ಬದಲಾವಣೆಗಳಿಂದ ಕೂಡಿರುವಂಥದ್ದು. ದಿನ ನಿತ್ಯ ಒಂದಿಲ್ಲೊಂದು ಫ್ಯಾಷನ್ ಅಪ್‌ಡೇಟ್‌ ಆಗುತ್ತಲೇ ಇರುತ್ತದೆ. ಕ್ರಿಯಾಶೀಲತೆಯನ್ನು ಹೊಂದಿರುವ ಫ್ಯಾಷನ್‌ಪ್ರಿಯರು ತಮಗೆ ದೊರೆಯುವ ಎಲ್ಲಾ ವಸ್ತುಗಳನ್ನೂ ಕೂಡ ಫ್ಯಾಷನ್ ಲೋಕದಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಈ ಸಾಲಿಗೆ ಒಂದು ಹೊಸ ಸೇರ್ಪಡೆ ಹಕ್ಕಿಗಳ ಗರಿ.

ಹಕ್ಕಿಗಳ ಗರಿಗಳನ್ನೂ ಬಳಸಿಕೊಂಡು ಟ್ರೆಂಡಿ ಆಭರಣಗಳನ್ನು ತಯಾರಿಸಲು ಮತ್ತು ಇತರೆ ಆಸ್ಸೆಸ್ಸರಿಗಳನ್ನು ತಯಾರಿಸಲು ಮುಂದಾಗಿದ್ದಾರೆ. ನೈಸರ್ಗಿಕವಾಗಿ ದೊರೆಯುವ ಗರಿಗಳಂತೆ ಈಗ ಕೃತಕ ಗರಿಗಳನ್ನೂ ತಯಾರಿಸಿ ಅವುಗಳಿಂದಲೂ ಆಭರಣಗಳನ್ನು ಮಾಡಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಟೆರಕೋಟಾ, ಕ್ವಿಲ್ಲಿಂಗ್, ಮೆಟಲ್ ಹೀಗೆ ನಾನಾ ರೀತಿಯ ಕಿವಿಯಾಭರಣಗಳ ಮಧ್ಯೆ ಈದೀಗ ‘ಫೆದರ್ ಕಿವಿಯಾಭರಣ’ಗಳು ಟ್ರೆಂಡಿಯಾಗಿವೆ. ಕೃತಕ ಗರಿಗಳಿಂದ ತಯಾರಿಸಲಾದ ಈ ಕಿವಿಯಾಭರಣಗಳು ಎಲ್ಲಾ ಬಣ್ಣಗಳಲ್ಲಿ, ವಿವಿಧ ಆಕಾರದಲ್ಲಿ ದೊರೆಯುವದರಿಂದ ಇವುಗಳನ್ನು ಉಡುಪಿಗೆ ಮ್ಯಾಚ್ ಮಾಡಿ ಧರಿಸಬಹುದಾಗಿದೆ. ಈ ತರಹದ ಕಿವಿಯಾಭರಣಗಳನ್ನು ಧರಿಸಿ ನಿಮ್ಮ ಲುಕ್‌ ಅನ್ನೇ ಬದಲಾಯಿಸಿಕೊಳ್ಳಬಹುದು.



ಈ ತರಹದ ಕಿವಿಯಾಭರಣಗಳು ಸಾಂಪ್ರದಾಯಿಕ, ಆಧುನಿಕ ಉಡುಪಿಗಳಿಗೂ ಸೈ ಎನಿಸಿವೆ. ಗರಿಗಳಿಂದ ತಯಾರಿಸಲಾದ ಟ್ರೈಬಲ್ ಮಾದರಿಯ ನೆಕ್ಲೇಸ್‌ಗಳು ಆಧುನಿಕ ಉಡುಪುಗಳೊಂದಿಗೆ ಮ್ಯಾಚ್ಆಗುತ್ತವೆ. ವಿವಿಧ ಬಣ್ಣಗಳ ಮತ್ತು ಮಾದರಿಗಳ ಗರಿಗಳನ್ನು ಮತ್ತು ಬೀಡ್‌ಗಳನ್ನು ಬಳಸಿಕೊಂಡು ಈ ಬಗೆಯ ನೆಕ್ಲೇಸ್‌ಗಳನ್ನು ತಯಾರಿಸಲಾಗುತ್ತಿದೆ. ಇನ್ನು ಗರಿಗಳ ಕೇಶಾಭರಣಗಳೂ ಕೂಡ ಸದ್ಯದ ಟ್ರೆಂಡಿ ಆಭರಣಗಳ ಸಾಲಿಗೆ ಸೇರಿದೆ.

ಸಿಂಗಲ್ ಲೇಯರ್, ಮಲ್ಟಿ ಲೇಯರ್‌ನ ಗರಿಗಳನ್ನು ಲಾಂಗ್‌ ಚೈನ್‌ಗಳ ತುದಿಗಳಿಗೆ ಸಣ್ಣ ಸಣ್ಣ ಬೀಡ್‌ಗಳಿಂದ ಅಲಂಕರಿಸಿ ಸುಂದರವಾದ ಕೇಶಾಭರಣಗಳನ್ನು ತಯಾರಿಬಹುದಾಗಿದೆ. ಮಾಡರ್ನ್‌ ಉಡುಪುಗಳನ್ನು ಧರಿಸಿದಾಗ ತಲೆಯ ಒಂದು ಬದಿಗೆ ಈ ಬಗೆಯ ಕೇಶಾಭರಣವನ್ನು ಹಾಕಿಕೊಳ್ಳುವುದರ ಮೂಲಕ ಸ್ಟೈಲಿಷ್‌ ಮತ್ತು ಟ್ರೆಂಡಿ ಲುಕ್‌ ಅನ್ನು ಪಡೆದುಕೊಳ್ಳಬಹುದು.

ಹಾಗೇ ಲಾಂಗ್‌ ಚೈನ್‌ಗಳ ತುದಿಗಳಲ್ಲಿ ಮಲ್ಟಿ ಕಲರ್ಡ್‌ಅಥವಾ ಸಿಂಗಲ್ ಕಲರ್ ಫೆದರ್‌ಗಳನ್ನು ಹಾಕುವುದರ ಮೂಲಕ ತಯಾರಿಸಲಾಗುವ ಈ ಮಾಡರ್ನ್‌ ಮಾದರಿಯ ಚೇನುಗಳನ್ನು ಜೀನ್ಸ್ ಟಾಪ್, ಸ್ಕರ್ಟ್‌, ಲಾಂಗ್ ಸ್ಕರ್ಟ್‌ ಹೀಗೆ ಆಧುನಿಕ ಉಡುಪುಗಳೊಂದಿಗೆ ಮ್ಯಾಚ್ ಮಾಡಿ ಧರಿಸಬಹುದಾಗಿದೆ. ಆದ್ದರಿಂದ ಈ ಸರಗಳು ಯುವತಿಯರ, ಕಾಲೇಜು ಹುಡುಗಿಯರ ಹಾಟ್ ಫೇವರೆಟ್ ಎನಿಸಿವೆ.

ಈ ಗರಿಗಳನ್ನು ಬಳಸಿಕೊಂಡು ವಿಭಿನ್ನ ರೀತಿಯ ಬ್ರೇಸ್‌ಲೆಟ್‌ಗಳನ್ನು ಕೂಡ ತಯಾರಿಸಲಾಗುತ್ತಿದೆ. ನೋಡಲು ಸುಂದರವಾಗಿರುವ ಈ ಬ್ರೇಸ್‌ಲೆಟ್‌ಗಳಲ್ಲಿ ಸಾಕಷ್ಟು ವಿವಿಧ ವಿನ್ಯಾಸದ ಬೀಡ್‌ಗಳನ್ನು ಬಳಸಿ ಅವಕ್ಕೆ ಇನ್ನಷ್ಟು ಸ್ಟೈಲಿಷ್‌ ಲುಕ್‌ ಅನ್ನು ನೀಡುತ್ತಿವೆ.



ಬರೀ ಆಭರಣ ತಯಾರಿಕೆಗೆ ಮಾತ್ರವಲ್ಲ, ಮೊಬೈಲ್ ಪೌಚುಗಳಲ್ಲಿ, ಬ್ಯಾಗುಗಳಲ್ಲಿ ಬಳಸುವ ಕೀ ಬಂಚ್‌ಗಳಲ್ಲಿ, ಬ್ಯಾಗುಗಳ ತುದಿಗಳಲ್ಲಿ, ಬ್ಯಾಗುಗಳ ಹ್ಯಾಂಡಲ್‌ಗಳಲ್ಲಿ, ಪರ್ಸ್‌ಗಳನ್ನು ಅಲಂಕರಿಸಲು, ಕಾಲಿಗೆ ಧರಿಸುವ ಶೂಸ್‌ಗಳಲ್ಲಿಯೂ ಗರಿಗಳನ್ನು ಬಳಸುವುದರ ಮೂಲಕ ಫ್ಯಾಷನ್‌ ಒಂದು ಟ್ರೆಂಡ್‌ನ್ನೇ ಸೃಷ್ಟಿಸಿದ್ದಾರೆ. ಇಷ್ಟೇ ಅಲ್ಲದೆ ಮನೆಯಲ್ಲಿ ಬಳಸುವ ಸುಂದರವಾದ ವಾಲ್‌ ಹ್ಯಾಂಗಿಂಗ್‌ಗಳು, ವೆರೈಟಿ ಮಿರರ್‌ಗಳ ಡೆಕೊರೇಟಿವ್ ಪೀಸ್‌ಗಳಿಗೂ ಈ ಫೆದರ್‌ಗಳನ್ನು ಬಳಸಲಾಗುತ್ತಿದೆ.

ಸುಧಾ –‍ 23 ಆಗಸ್ಟ್ 2018

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT