ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗುಂಗುರಿನ ಉಂಗುರದೊಳು..

Published 8 ಜೂನ್ 2024, 0:44 IST
Last Updated 8 ಜೂನ್ 2024, 0:44 IST
ಅಕ್ಷರ ಗಾತ್ರ
ಗುಂಗುರು ಕೂದಲಿನ ಚೆಲುವೆಯ ಉಂಗುರದಲೆಯೊಳು ಮನ ಕಳೆದುಹೋಗುವುದು ಸಹಜ. ಆದರೆ ಈ ಅಲೆಅಲೆಯಾದ ಕೇಶರಾಶಿಯ ರಕ್ಷಣೆ ಅಷ್ಟು ಸುಲಭವಲ್ಲ. ಪ್ರತಿದಿನದ ಕಾಳಜಿ ಇಲ್ಲದಿದ್ದರೆ ಗುಂಗುರು ಕೂದಲು ಕುರುಚಲು ಪೊದೆಯಂತೆ ಆಗುತ್ತವೆ. ಆಮೇಲೆ ಸಿಕ್ಕು ಬಿಡಿಸುವುದು, ತಲೆ ಬಾಚುವುದು ಕಷ್ಟವಾಗುತ್ತದೆ.
  • ಗುಂಗುರು ಕೂದಲಿನ ಸಂರಕ್ಷಣೆಗೆ ನಿಯಮಿತವಾಗಿ ತಲೆ ತೊಳೆದುಕೊಳ್ಳಬೇಕು. ಗುಂಗುರು ಕೂದಲನ್ನು ತೊಳೆಯಲು, ಸಾಮಾನ್ಯಕ್ಕಿಂತ ಹೆಚ್ಚು ಸಮಯ ಬೇಕಾಗುತ್ತದೆ.

  • ಮೃದು ಎನಿಸುವ ಶಾಂಪು ಬಳಸಿ. ತಲೆ ತೊಳೆದುಕೊಳ್ಳುವ ಅರ್ಧ ಗಂಟೆ ಮುಂಚೆ ಉಗುರು ಬಿಸಿ ಎಣ್ಣೆಯ ಮಸಾಜು ಮಾಡಿಕೊಳ್ಳಿ.

  • ನಿಮ್ಮ ಟವಲ್‌ ಆಯ್ಕೆ ಆದಷ್ಟೂ ಹತ್ತಿಯದ್ದಾಗಿರಲಿ. ಟರ್ಕಿಯಂಥ ಟವಲ್‌ ಬಳಸಿದರೆ ಕೆಲವೊಮ್ಮೆ ಕೂದಲು ಸಿಕ್ಕಾಗುವ ಸಾಧ್ಯತೆ ಇರುತ್ತದೆ.

  • ಕೂದಲನ್ನು ಒಣಗಿಸಲು ಹೇರ್‌ ಡ್ರೈಯರ್‌ ಬಳಸಬೇಡಿ. ಅದು ಕೂದಲನ್ನು ಇನ್ನಷ್ಟು ಶುಷ್ಕಗೊಳಿಸುತ್ತದೆ. 

  • ಮಲಗುವ ಮುನ್ನ ಸದಾ ನಿಮ್ಮ ಕೂದಲನ್ನು ಬಾಚಿಕೊಂಡು, ಸ್ಯಾಟಿನ್‌ ಅಥವಾ ತೆಳುವಾದ ಬಟ್ಟೆಯೊಂದನ್ನು ತಲೆಗೆ ಕಟ್ಟಿಕೊಂಡು ಮಲಗಿ

  • ಇದೂ ಸಹ ಕೂದಲಿನ ಸಂರಕ್ಷಣೆಗೆ ಅತ್ಯಗತ್ಯವಾಗಿದೆ. ತಲೆ ತೊಳೆದುಕೊಳ್ಳುವಾಗ ಅಕ್ಕಿ ತೊಳೆಯಲು ಬಳಸಿದ ನೀರನ್ನು ಕಂಡೀಷನರ್‌ ರೀತಿಯಂತೆ ಬಳಸಬಹುದಾಗಿದೆ.

  • ಕೂದಲ ಹೊಳಪಿಗೆ ಮತ್ತು ನುಣುಪಿಗೆ ಮೊಟ್ಟೆಯ ಬಿಳಿಭಾಗವನ್ನು ವಾರಕ್ಕೆ ಒಮ್ಮೆಯಾದರೂ ಲೇಪಿಸಿ ತಲೆ ತೊಳೆದುಕೊಳ್ಳಿ.

  • ಕೂದಲು ಅತಿಯಾಗಿ ಶುಷ್ಕವಾಗದಂತೆ ನೋಡಿಕೊಳ್ಳಲು ಅಕ್ಕಿಹಿಟ್ಟು, ಮೊಸರಿನ ಲೇಪನವನ್ನು ಬಳಸಬಹುದು.

  • ಆಕರ್ಷಕ ಗುಂಗರು ಕೂದಲು ಪಡೆಯಲು ಈ ಉಪಾಯಗಳು ಸಾಕಷ್ಟು ಸಹಾಯ ಮಾಡುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT