ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವಚೆಯ ಅಂದಕ್ಕೆ ಡರ್ಮಾ ರೋಲರ್‌

Last Updated 24 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ಹೆಣ್ಣುಮಕ್ಕಳಿಗೆ ತಮ್ಮ ಸೌಂದರ್ಯದ ಮೇಲೆ ಅಪರಿಮಿತ ಕಾಳಜಿ. ತಮ್ಮ ತ್ವಚೆಯ ಅಂದವನ್ನು ಕಾಪಾಡಿಕೊಳ್ಳುವ ಸಲುವಾಗಿ ಅವರು ಹಲವು ಮಾರ್ಗಗಳನ್ನು ಅನುಸರಿಸುತ್ತಾರೆ. ಚರ್ಮದ ಕಾಂತಿ ಹೆಚ್ಚಿಸಿಕೊಳ್ಳುವ ಸಲುವಾಗಿ ಗೂಗಲ್‌, ಯೂಟ್ಯೂಬ್‌ ಮೊರೆ ಹೋಗಿ ಅಲ್ಲಿ ನೀಡುವ ವಿಧಾನವನ್ನು ಅನುಸರಿಸುತ್ತಾರೆ. ಇದರೊಂದಿಗೆ ಇತ್ತೀಚೆಗೆ ಹೆಣ್ಣುಮಕ್ಕಳ ಅಂದವನ್ನು ಹೆಚ್ಚಿಸುವ ಸಲುವಾಗಿ ಕೆಲವು ಉಪಕರಣಗಳೂ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈ ಸಾಧನಗಳನ್ನು ಸರಿಯಾದ ಕ್ರಮದಲ್ಲಿ ಅನುಸರಿಸುವ ಮೂಲಕ ತ್ವಚೆ ಸದಾ ಕಾಂತಿಯುತವಾಗಿ ಹೊಳೆಯುವಂತೆ ಮಾಡಿಕೊಳ್ಳಬಹುದು. ಅಂತಹ ಉಪಕರಣಗಳಲ್ಲಿ ಡರ್ಮಾ ರೋಲರ್‌ ಕೂಡ ಒಂದು.

ಡರ್ಮಾ ರೋಲರ್‌ ಎಂದರೇನು?

ಸೌಂದರ್ಯವರ್ಧಕ ಸಾಧನಗಳಿಗೆ ಆನ್‌ಲೈನ್‌ ತಡಕಾಡುವಾಗ ಡರ್ಮಾ ರೋಲರ್ ಅನ್ನು ಕೂಡ ನೋಡಿರಬಹುದು. ಹಾಗಾದ್ರೆ ಡರ್ಮಾ ರೋಲರ್ ಎಂದರೇನು, ಇದರ ಬಳಕೆ ಹೇಗೆ ಎಂಬ ಬಗ್ಗೆ ನಿಮ್ಮಲ್ಲಿ ಪ್ರಶ್ನೆ ಮೂಡಿರಬಹುದು. ಡರ್ಮಾ ರೋಲರ್ ಎಂದರೆ ಕೈಯಲ್ಲಿ ಹಿಡಿದುಕೊಳ್ಳಬಹುದಾದ ಒಂದು ಚಿಕ್ಕ ಸಾಧನ. ಇದು ರೋಲರ್‌ ಅನ್ನು ಹೊಂದಿದ್ದು ರೋಲರ್‌ನಲ್ಲಿ ಸಣ್ಣ ಸಣ್ಣ ಮುಳ್ಳುಗಳಿರುತ್ತವೆ. ಈ ಸಾಧನದಿಂದ ಹಲವು ಉಪಯೋಗಗಳಿವೆ. ಅದರಲ್ಲಿ ಪ್ರಮುಖವಾದುದು ಪಿಗ್ಮಂಟೇಷನ್ ಸಮಸ್ಯೆ ನಿವಾರಣೆ. ಇದರ ಬಳಕೆಯಿಂದ ಪಿಗ್ಮಂಟೇಷನ್ ನಿವಾರಣೆಯಾಗುವುದಲ್ಲದೇ ಮುಖದ ತ್ವಚೆಯ ಕಾಂತಿಯೂ ಹೆಚ್ಚುತ್ತದೆ.

ಹಲವರು ಡರ್ಮಾ ರೋಲರ್‌ ಸಹಾಯದಿಂದ ಚರ್ಮದಲ್ಲಿ ಮೂಡುವ ನೆರಿಗೆಗಳು, ಮೊಡವೆ ಕಲೆಗಳು ಹಾಗೂ ಹೈಪರ್‌ ಪಿಗ್ಮೆಂಟೇಶನ್‌ ನಿವಾರಣೆಗೆ ಬಳಸುತ್ತಾರೆ. ಆದರೆ ಅವರು ನಿರೀಕ್ಷಿಸಿದ ರೀತಿಯಲ್ಲಿ ಫಲಿತಾಂಶ ಸಿಗದೇ ಇರಬಹುದು. ಅವರು ರೋಲರ್‌ ಅನ್ನು ಸರಿಯಾದ ಕ್ರಮದಲ್ಲಿ ಬಳಸದೇ ಇರುವುದು ಇದಕ್ಕೆ ಕಾರಣವಿರಬಹುದು. ರೋಲರ್‌ ಬಳಕೆಯಿಂದ ಉತ್ತಮ ಫಲಿತಾಂಶ ನಿರೀಕ್ಷಿಸಲು ಅದನ್ನು ಸರಿಯಾಗಿ ಬಳಸುವ ಕ್ರಮವನ್ನು ತಿಳಿದುಕೊಂಡಿರಬೇಕು.

ಬಳಕೆ ಹಾಗೂ ಉಪಯೋಗ

l ಡರ್ಮಾ ರೋಲರ್‌ ತೆಗೆದುಕೊಂಡು ಕೆನ್ನೆ, ತುಟಿ, ಗಲ್ಲ, ಹಣೆ ಹಾಗೂ ಕುತ್ತಿಗೆಯ ಮೇಲೆ ಉದ್ದಕ್ಕೆ, ಅಡ್ಡವಾಗಿ ನಿಧಾನಕ್ಕೆ ಸುತ್ತುವರಿಸಬೇಕು. ಇದನ್ನು ರಭಸವಾಗಿ ಮಾಡಬಾರದು.

l ಈ ರೋಲರ್‌ ಬಳಕೆಯನ್ನು ನಿಯಮಿತವಾಗಿ ಮಾಡುವುದರಿಂದ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು.

l ಮುಖಕ್ಕೆ ರಾಸಾಯನಿಕ ಅಂಶ ರಹಿತ ಕ್ರೀಮ್‌ ಹಚ್ಚಿಕೊಂಡು ನಂತರ ರೋಲರ್ ಸಹಾಯದಿಂದ ರೋಲ್ ಮಾಡುವುದರಿಂದ ಒಣಚರ್ಮ ನಿವಾರಣೆಯಾಗುತ್ತದೆ. ಇದರಿಂದ ಚರ್ಮದಲ್ಲಿನ ಕಲ್ಮಶಗಳು ಸ್ವಚ್ಛವಾಗುತ್ತವೆ.

l ಇದನ್ನು ಮುಖದ ಚರ್ಮದಲ್ಲಿ ಬಳಸುವುದರಿಂದ ರಕ್ತ ಸಂಚಾರವು ಸುಗಮವಾಗಿ ಕಾಂತಿ ಹೆಚ್ಚುತ್ತದೆ.

ಕೂದಲಿನ ಅಂದಕ್ಕೂ ಡರ್ಮಾ ರೋಲರ್‌ಗಳನ್ನು ಕೂದಲಿಗೂ ಬಳಸಬಹುದು. ಇದನ್ನು ನೆತ್ತಿಯ ಮೇಲೆ ಇಟ್ಟು ತಿರುಗಿಸುವುದರಿಂದ ಕೂದಲಿನ ಕಿರುಚೀಲಗಳಿವೆ ಎಣ್ಣೆಯ ಅಂಶ ನೇರವಾಗಿ ತಾಗಲು ಸಹಾಯವಾಗುತ್ತದೆ. ಜೊತೆಗೆ ಸೂರ್ಯನ ಬೆಳಕು, ಜಲಸಂಚಯನ ಹಾಗೂ ಪೋಷಕಾಂಶಗಳು ಸುಲಭವಾಗಿ ಬೇರನ್ನು ತಲುಪಲು ಸಹಾಯ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT