ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಿಸ್ಟರ್ ಟೀನ್, ಮಿಸ್ ಟೀನ್: ಮಂಜು ಭಾರ್ಗವಿ, ಯಶು ಬಲ್ಲಾಳ್‌ಗೆ ಪ್ರಶಸ್ತಿ

Last Updated 5 ಅಕ್ಟೋಬರ್ 2022, 13:25 IST
ಅಕ್ಷರ ಗಾತ್ರ

ಬೆಂಗಳೂರು:ಮಿಸ್ಟರ್ ಟೀನ್ ಹಾಗೂ ಮಿಸ್ ಟೀನ್ ವಿಭಾಗದಲ್ಲಿ ಮಂಜು ಭಾರ್ಗವಿ, ಯಶು ಬಲ್ಲಾಳ್ ಗೆದ್ದರು.

ಇತ್ತೀಚೆಗೆ ನಡೆದ ಮಿಸೆಸ್ ಇಂಡಿಯಾ ಐಕಾನ್ ಫ್ಯಾಷನ್ ಶೋ ನಲ್ಲಿ ಸ್ಪರ್ಧಿಗಳು ಮಿಂಚಿದರು. ಸುಷ್ಮಿತಾಗೆ ಮಿಸೆಸ್ ಇಂಡಿಯಾ ಐಕಾನ್ ಪ್ರಶಸ್ತಿ ಸಿಕ್ಕಿದೆ. 2022 ರ ಪ್ರಶಸ್ತಿ ಸುಷ್ಮಿತಾ ಅವರ ಮುಡಿ ಸೇರಿದೆ.

ಮದುವೆಯಾದವರ ವಿಭಾಗದಲ್ಲಿ ಮಿಸ್ಟರ್ ಹಾಗೂ ಮಿಸೆಸ್ ವಿಭಾಗದ ಸ್ಪರ್ಧೆಗಳು ನಡೆದವು. ಮಿಸ್ಟರ್ ವಿಭಾಗದಲ್ಲಿ ಅರುಣ್ ಡಿ ಶೆಟ್ ಪ್ರಶಸ್ತಿ ಗೆದ್ದರು.ಬೆಲ್ಲ ಸಿಯವೋ ರೆಸಾರ್ಟ್ ನಲ್ಲಿ ನಡೆದ ಸೌಂದರ್ಯ ಸ್ಪರ್ದೆಯಲ್ಲಿ ಲಿಟಲ್ ಪ್ರಿನ್ಸೆಸ್, ಪ್ರಿನ್ಸೆಸ್, ಟೀನ್ ವಿಭಾಗದಲ್ಲೂ ಸ್ಪರ್ಧಿಗಳು ರಾಂಪ್ ಮೇಲೆ ಹೆಜ್ಜೆ ಹಾಕಿದರು.

ಲಿಟಲ್ ಪ್ರಿನ್ಸೆಸ್ ವಿಭಾಗದಲ್ಲಿ ಗಣಿಶ್ಕ್, ವಿಂದ್ಯಾ ವಿಕಾಸಿನಿ ಪ್ರಶಸ್ತಿ ಗೆದ್ದರು. ಕಿಡ್ಸ್ ನ ಇನ್ನೊಂದು ವಿಭಾಗದ ಲಿಟಲ್ ಪ್ರಿನ್ಸೆಸ್ ವಿಭಾಗದಲ್ಲಿ ಗುರುಪ್ರೀತ್ ಬಡ್ಡಿ, ವೈಷ್ಣವಿ ಸಂತೋಷ್ ಗೆದ್ದರು.

ಮಿಸ್ಟರ್ ಹಾಗೂ ಮಿಸ್ ವಿಭಾಗದಲ್ಲಿ ವಿಲ್ಸನ್ ಜ್ಯಾಕ್, ಜಾಗೃತಿ ಪ್ರಶಸ್ತಿ ಗೆದ್ದರು.ಬಣ್ಣ ಬಣ್ಣದ ವೇದಿಕೆ, ಅದಕ್ಕೆ ತಕ್ಕ ಸಂಗೀತ, ಸ್ಪರ್ಧಿಗಳು ಲಯವಾಗಿ ವೇದಿಕೆ ಮೇಲೆ ಹೆಜ್ಜೆ ಹಾಕಿದರು.

ರಶ್ಮಿ ಹೆಗ್ಡೆ, ಶವ್ಯ ರಿಷಿಕಾ, ಗೀಶನ್, ಸೀಮಾ ನಾಯ್ಡು ಸ್ಪರ್ದೆಯಲ್ಲಿ ತೀರ್ಪುಗಾರರು ಆಗಿ ಭಾಗವಹಿಸಿದ್ದರು. ಸಂಸ್ಥಾಪಕ ಸಿಇಓ ಯಶ್, ಸಿಇಓ ರಾಕಿ ಕೂಡ ಕಾರ್ಯಕ್ರಮದಲ್ಲಿ ಇದ್ದರು.

ಫ್ಯಾಷನ್, ಸಿನೆಮಾ, ನೃತ್ಯ, ಸಾಮಾಜಿಕ ಸೇವೆ ಸೇರಿದಂತೆ ಹತ್ತು ಹಲವು ವಿಭಾಗದಲ್ಲಿ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT