ಬುಧವಾರ, ಆಗಸ್ಟ್ 17, 2022
28 °C

ಚಳಿಗೂ, ಅಂದಕ್ಕೂ ಟ್ರೆಂಡಿ ಶೂ

ಮನಸ್ವಿ Updated:

ಅಕ್ಷರ ಗಾತ್ರ : | |

Prajavani

ಚಳಿಗಾಲ ಎಂದಾಕ್ಷಣ ಜಾಕೆಟ್‌, ಓವರ್‌ಕೋಟ್‌, ಉಲ್ಲನ್ ಟೋಪಿ ಇವುಗಳೇ ಹೆಚ್ಚು ನೆನಪಾಗುತ್ತವೆ. ಚಳಿಗಾಲದಲ್ಲಿ ಅಡಿಯಿಂದ ಮುಡಿಯವರೆಗೆ ಬೆಚ್ಚಗೆ ಇರಬೇಕು ಎನ್ನಿಸುವುದು ಸಹಜ. ಚಳಿಗಾಲದ ಫ್ಯಾಷನ್ ಮಾರುಕಟ್ಟೆಯಲ್ಲಿ ಜಾಕೆಟ್‌, ಓವರ್‌ಕೋಟ್‌ ಅಷ್ಟೇ ಅಲ್ಲ, ಬಗೆಬಗೆಯ ಶೂಗಳಿಗೂ ಹೆಚ್ಚು ಆದ್ಯತೆ ಇದೆ. ಅದರಲ್ಲೂ ಪುರುಷರಿಗೆ ಹೊಂದುವಂತಹ ವಿವಿಧ ಬಗೆಯ ಶೂಗಳು ಫ್ಯಾಷನ್ ಮಾರುಕಟ್ಟೆಯನ್ನು ಅಲಂಕರಿಸಿರುತ್ತವೆ. ಈ ಫ್ಯಾಷನ್‌ ಶೂಗಳು ಫಾರ್ಮಲ್‌, ಜೀನ್ಸ್ ಎಲ್ಲದರೊಂದಿಗೂ ಹೊಂದಿಕೊಳ್ಳುತ್ತವೆ. ಋತುಮಾನಕ್ಕೆ ತಕ್ಕಂತೆ ಬದಲಾಗುವ ಫ್ಯಾಷನ್‌ ಮಾರುಕಟ್ಟೆಯಲ್ಲಿ ಪುರುಷರ ಬಗೆ ಬಗೆಯ ಟ್ರೆಂಡಿ ಶೂಗಳು ರಾತ್ರಿ, ಹಗಲು ಎರಡೂ ವೇಳೆ ಧರಿಸಲು ಸೂಕ್ತ ಎನ್ನಿಸಿಕೊಳ್ಳುತ್ತವೆ.

ಲೆದರ್ ಲೇಸ್ ಅಪ್‌ ಬೂಟ್ಸ್‌: ಲೇಸ್‌ ಅಪ್‌ ಬೂಟ್‌ಗಳು ಎಲ್ಲಾ ಕಾಲಕ್ಕೂ ಹೊಂದುವಂತಹವು. ಸ್ಕಿನ್ ಫಿಟ್ ಪ್ಯಾಂಟ್‌ನೊಂದಿಗೆ ಈ ಶೂ ಹೆಚ್ಚು ಹೊಂದುತ್ತದೆ. ಟೀ ಶರ್ಟ್ ಧರಿಸಿ ಅದೇ ಬಣ್ಣದ ಲೇಸ್ ಅಪ್‌ ಬೂಟ್ ಧರಿಸಿದರೆ ಭಿನ್ನ ನೋಟ ಸಿಗುತ್ತದೆ.

ಹೈ ಟಾಪ್ ಸ್ನೀಕರ್ಸ್‌: ಸ್ನೀಕರ್ಸ್ ಇಂದಿನ ಯುವತಲೆಮಾರಿನ ಮಂದಿ ಹೆಚ್ಚು ಇಷ್ಟಪಡುವ ಶೂ. ಟ್ರೆಂಡಿ ಹಾಗೂ ಸ್ಟೈಲಿಶ್ ನೋಟ ಸಿಗುವಂತೆ ಮಾಡುವ ಸ್ನೀಕರ್ಸ್‌ಗಳು ಬೇರೆ ಬೇರೆ ಬಣ್ಣ ಹಾಗೂ ವಿನ್ಯಾಸಗಳಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿವೆ. ಚಳಿಗಾಲದಲ್ಲಿ ಹೈ ಟಾಪ್ ಸ್ನೀಕರ್ಸ್ ಹೆಚ್ಚು ಸೂಕ್ತ. ಇದು ಧರಿಸಲು ಆರಾಮದಾಯಕ. ಜೊತೆಗೆ ಕಾಲಿನ ಅಂದವನ್ನೂ ಹೆಚ್ಚಿಸುತ್ತವೆ. ನಿಮ್ಮ ಆದ್ಯತೆಗೆ ತಕ್ಕಂತೆ ಇದನ್ನು ಧರಿಸಬಹುದು. ಮಿಕ್ಸ್ ಅಂಡ್ ಮ್ಯಾಚ್‌ ಪ್ರಿಂಟ್ ಇರುವ ದಿರಿಸಿನ ಜೊತೆ ಧರಿಸಲು ಇದು ಹೆಚ್ಚು ಸೂಕ್ತ. ಇದರಲ್ಲಿ ಲೆದರ್ ಶೂಗಳು ಲಭ್ಯವಿವೆ.

ಚೆಲ್ಸಿಯಾ ಬೂಟ್ಸ್‌: ಚೆಲ್ಸಿಯಾ ಬೂಟ್ಸ್ ಬೇರೆಲ್ಲಾ ಶೂಗಳಿಗೆ ಹೋಲಿಸಿದರೆ ಧರಿಸಲು ತುಂಬಾ ಇಷ್ಟವಾಗುತ್ತದೆ, ಅಲ್ಲದೇ ಅದು ಮೃದುವಾಗಿರುವ ಕಾರಣ ಧರಿಸಲು ಹೆಚ್ಚು ಸೂಕ್ತ ಎನ್ನಿಸಿಕೊಳ್ಳುತ್ತವೆ. ಇದು ಸಾಮಾನ್ಯ ದಿನಗಳಲ್ಲೂ ಧರಿಸಲು ಸೂಕ್ತವಾಗಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು