ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ವಚೆಯ ಹೊಳಪಿಗೆ ಅಕ್ಕಿ ತೊಳೆದ ನೀರು

Last Updated 13 ಆಗಸ್ಟ್ 2021, 19:30 IST
ಅಕ್ಷರ ಗಾತ್ರ

ಕೊರಿಯನ್ನರು ಹಾಗೂ ಜಪಾನಿಗರಲ್ಲಿ ಸೌಂದರ್ಯ ಪ್ರಜ್ಞೆ ಕೊಂಚ ಹೆಚ್ಚೇ ಎಂದು ಹೇಳಬಹುದು. ಅವರ ಚರ್ಮದ ಹೊಳಪು ನೋಡಿದಾಗ ನಮ್ಮ ಚರ್ಮವು ಹೀಗೇ ಕಾಂತಿಯಿಂದ ಇರಬೇಕು ಎನ್ನಿಸುವುದು ಸಹಜ. ಹಾಗಾದ್ರೆ ಅವರ ಸೌಂದರ್ಯದ ಗುಟ್ಟೇನು ಎಂದರೆ ಅಕ್ಕಿ ತೊಳೆದ ನೀರು. ಅಕ್ಕಿ ತೊಳೆದ ಅಥವಾ ನೆನೆಸಿದ ನೀರಿನಲ್ಲಿ ಅಮಿನೊ ಆ್ಯಸಿಡ್‌, ವಿಟಮಿನ್‌ ಹಾಗೂ ಮಿನರಲ್ಸ್‌ ಅಧಿಕ ಪ್ರಮಾಣದಲ್ಲಿದೆ. ಇದು ಚರ್ಮದ ಸೌಂದರ್ಯ ಹೆಚ್ಚಿಸುವಲ್ಲಿ ಹಲವು ರೀತಿಯಲ್ಲಿ ಸಹಾಯ ಮಾಡುತ್ತದೆ.

ಚರ್ಮದ ಹೊಳಪಿಗೆ: ಅಕ್ಕಿ ತೊಳೆದ ನೀರಿನಲ್ಲಿ ಚರ್ಮಕ್ಕೆ ಹೊಳಪು ನೀಡುವ ಕಿಣ್ವಗಳಿವೆ. ಇದು ಮುಖದ ಮೇಲಿನ ಕಪ್ಪು ಕಲೆಗಳು ಹಾಗೂ ಇನ್ನಿತರ ಕಲ್ಮಶಗಳನ್ನು ಸ್ವಚ್ಛ ಮಾಡಿ ಹೊಳಪು ಹೆಚ್ಚಲು ನೆರವಾಗುತ್ತದೆ.

ಆ್ಯಂಟಿ ಏಜಿಂಗ್‌: ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶ ಅಧಿಕವಿದೆ. ಇದರಿಂದ ಚರ್ಮ ಸುಕ್ಕುಗಟ್ಟುವುದು, ನೆರಿಗೆ ಮೂಡುವುದು ಮುಂತಾದ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದು ಉತ್ತಮ ಆ್ಯಂಟಿ ಏಜಿಂಗ್‌.

ಚರ್ಮದ ಆರೋಗ್ಯಕ್ಕೆ: ಚರ್ಮದ ಹಲವು ಸಮಸ್ಯೆಗಳಿಗೆ ಅಕ್ಕಿ ತೊಳೆದ ಅಥವಾ ಬೇಯಿಸಿದ ನೀರು ನೈಸರ್ಗಿಕವಾಗಿ ಪರಿಹಾರ ನೀಡುತ್ತದೆ. ಮಾಲಿನ್ಯದಿಂದಾಗುವ ಸಮಸ್ಯೆಗಳಿಗೂ ಇದು ಪರಿಹಾರ ಒದಗಿಸುತ್ತದೆ.

ಸನ್‌ಬರ್ನ್‌, ಟ್ಯಾನ್‌ನಂತಹ ಸಮಸ್ಯೆಗಳಿಗೂ ಇದರಿಂದ ಪರಿಹಾರ ಕಂಡುಕೊಳ್ಳಬಹುದು.

ಇದು ಮುಖಕ್ಕೆ ಮಾಯಿಶ್ಚರೈಸರ್‌ನಂತೆ ಕೆಲಸ ಮಾಡುತ್ತದೆ.

ಅಕ್ಕಿ ತೊಳೆದ ನೀರನ್ನು ಪ್ರತಿನಿತ್ಯ ಬಳಸುವುದರಿಂದ ಮುಖದ ಚರ್ಮವು ತಾಜಾ ಆಗಿ ಹಾಗೂ ಎಳಸಾಗಿಯೇ ಇರುತ್ತದೆ. ಇದರ ಬಳಕೆಯಿಂದ ಚರ್ಮದ ಕಾಂತಿ ಹೆಚ್ಚುತ್ತದೆ, ಹೊಳಪು ಹೆಚ್ಚುತ್ತದೆ. ಅಲ್ಲದೇ ಇದು ಮೊಡವೆ, ಕಪ್ಪುಕಲೆ, ಹೈಪರ್‌ಪಿಗ್ಮಂಟೇಷನ್‌, ಸುಕ್ಕಿನಂತಹ ಇತರ ಸಮಸ್ಯೆಗಳಿಗೂ ಪರಿಹಾರ ಒದಗಿಸುತ್ತದೆ.

ಅಕ್ಕಿ ತೊಳೆದ ನೀರಿನ ಬಳಕೆ ಹೇಗೆ?

ಒಂದು ಕಪ್‌ ಅಕ್ಕಿಯನ್ನು ಅರ್ಧಗಂಟೆ ಕಾಲ ನೀರಿನಲ್ಲಿ ನೆನೆಸಬೇಕು. ನಂತರ ನೀರನ್ನು ತೆಗೆದು ಒಂದು ಪಾತ್ರೆಯಲ್ಲಿ ಇರಿಸಬೇಕು. ಅದರಿಂದ ಮುಖ ತೊಳೆಯಬೇಕು.

ಅನ್ನ ಬೇಯಿಸಿದ ನೀರಿನಿಂದಲೂ ಮುಖ ತೊಳೆದುಕೊಳ್ಳಬಹುದು. ಅದನ್ನು ಫ್ರಿಜ್‌ನಲ್ಲಿಟ್ಟು ವಾರಗಳ ಕಾಲ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT