ಭಾನುವಾರ, ಅಕ್ಟೋಬರ್ 17, 2021
23 °C

ಶಿಲ್ಪಾ, ರಶ್ಮಿ, ಸುಪ್ರೀತಾ, ಕಾವ್ಯಾಗೆ ಮಿಸೆಸ್ ಇಂಡಿಯಾ ಕಿರೀಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜೈಪುರದಲ್ಲಿ ನಡೆದ ಮಿಸೆಸ್ ಇಂಡಿಯಾ ಐ ಆಮ್ ಪವರ್‌ಫುಲ್‌ ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಶಿಲ್ಪಾ ಸುಧಾಕರ್, ರಶ್ಮಿ ರಂಗಪ್ಪ, ಸುಪ್ರೀತಾ ಹಾಗೂ ಕಾವ್ಯ ಪ್ರಶಸ್ತಿ ಗೆದ್ದುಕೊಂಡರು.

ಮಿಸೆಸ್ ಇಂಡಿಯಾ ಐ ಆಮ್ ಪವರ್‌ಫುಲ್‌ ಯೂನಿವರ್ಸ್ ವಿಭಾಗದ ಕಿರೀಟವನ್ನು ಶಿಲ್ಪಾ ಗೆದ್ದುಕೊಂಡರೆ, ಐ ಆಮ್ ಪವರ್‌ಫುಲ್‌ ವಲ್ರ್ಡ್ ವಿಭಾಗದಲ್ಲಿ ರಶ್ಮಿ, ಏಷ್ಯಾ ವಿಭಾಗದಲ್ಲಿ ಸುಪ್ರೀತಾ, ಕರ್ವಿ ವಲ್ರ್ಡ್ ವಿಭಾಗದಲ್ಲಿ ಕಾವ್ಯ ಕಿರೀಟ ಜಯಿಸಿದರು. ನಿರ್ಮಲಾ, ಹೇಮಾ, ಸ್ನೇಹ, ಸಿಂಧು ರನ್ನರ್ ಅಪ್ ಆದರು.

ನಂದಿನಿ ನಾಗರಾಜ್ ಹಾಗೂ ಜಸ್ಪ್ರೀತ್ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಬೆಂಗಳೂರಿನಿಂದ 10 ರೂಪದರ್ಶಿಯರ ತಂಡ ಜೈಪುರಕ್ಕೆ ತೆರಳಿತ್ತು. ಒಟ್ಟು 40 ಸ್ಪರ್ಧಿಗಳು ಭಾಗವಹಿಸಿದ್ದರು.

ತೆಳ್ಳಗೆ, ಬೆಳ್ಳಗೆ ಇರುವವರು, ಎತ್ತರ, ದಪ್ಪ, ವಯಸ್ಸನ್ನು ನೋಡಿ ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿಲ್ಲ. ಬದಲಾಗಿ ಅವರಿಗೆ ಇರುವ ಅರ್ಹತೆ ಹಾಗೂ ಆತ್ಮವಿಶ್ವಾಸವೇ ನಮ್ಮ ಸ್ಪರ್ಧೆಯ ಮಾನದಂಡವಾಗಿತ್ತು' ಎಂದು ಆಯೋಜಕಿ ನಂದಿನಿ ನಾಗರಾಜ್ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು