40ರ ವಯಸ್ಸಿನಲ್ಲೂ ಬಳುಕುವ ಮೈಸಿರಿ ಹೊಂದಿರುವ ನಟಿ ಸುಶ್ಮಿತಾ ಸೇನ್ ‘ಲೋಟಸ್ ಮೇಕ್–ಅಪ್’ ಇಂಡಿಯಾ ಫ್ಯಾಷನ್ ವೀಕ್‌ನಲ್ಲಿ ಪಾಲ್ಗೊಂಡು ಮಿಂಚಿದ್ದಾರೆ. ಚೆಂದದ ಉಡುಗೆ ತೊಟ್ಟ ನೀಳಕಾಯದ ಸುಂದರಿ ರ‍್ಯಾಂಪ್ ಮೇಲೆ ಸಖತ್ ಆಗಿಯೇ ಹೆಜ್ಜೆ ಹಾಕಿದ್ದಾರೆ.

ಖ್ಯಾತ ಫ್ಯಾಷನ್ ಡಿಸೈನರ್‌ಗಳಾದ ಭೂಮಿಕಾ ಮತ್ತು ಜ್ಯೋತಿ ಅವರು ‘ವಸಂತ ಹಾಗೂ ಬೇಸಿಗೆ’ಗೆ ಒಗ್ಗುವಂತಹ ‘ಲೆಮನ್‌ಸೆಲ್ಲೊ’ ಶ್ರೇಣಿಯ 19 ವಿಶೇಷ ವಿನ್ಯಾಸಗಳ ಉಡುಪುಗಳನ್ನು ಈ ಫ್ಯಾಷನ್ ವೀಕ್‌ನಲ್ಲಿ ಪರಿಚಯಿಸಿದರು.

ಆ ಸಂಗ್ರಹಗಳಲ್ಲಿ ಪೈಕಿ ಬಲು ವಿಭಿನ್ನವಾಗಿ ಕಂಡಿದ್ದು ಸುಶ್ಮಿತಾ ಸೇನ್ ಧರಿಸಿದ್ದ ‘ರುಫ್ಲೆಡ್’ ಮಾದರಿಯ ನಿಂಬೆ ಹಸಿರು ಬಣ್ಣದ ಉಡುಗೆ. ಆ ಉಡುಗೆಯನ್ನು ಮಿಂಚುವಂತೆ ಮಾಡಿದ್ದುಸುಶ್ಮಿತಾ ಅವರ ಅಂದ. ಅವರು ತಲೆಗೆಕಟ್ಟಿದ್ದ ನಿಂಬೆ ಹಸಿರು ಬಣ್ಣದ ಟರ್ಬನ್ ಶೈಲಿಯ ಪೇಟವು ಆಕರ್ಷಕವಾಗಿತ್ತು.

ಚೆಂದದ ಚೆಲುವೆ ಮುಗುಳುನಗೆ ಬೀರುತ್ತಾ ರ‍್ಯಾಂಪ್ ಮೇಲೆ ಸೊಗಸಾಗಿ ಹೆಜ್ಜೆ ಹಾಕುತ್ತ ಬಂದೊಡನೆನೆರೆದಿದ್ದವರಿಂದ ಜೋರಾಗಿ ಹರ್ಷೋದ್ಘಾರ. ಸುಶ್ಮಿತಾರಿಂದಾಗಿಯೇ ಕಾರ್ಯಕ್ರಮಕ್ಕೆ ವಿಶೇಷ ಮೆರಗು ಬಂತು ಎಂದು ಶೋಸ್ಟಾಪರ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಅವರು ಇತ್ತೀಚೆಗೆ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದ ಫೋಟೊಗಳು ವೈರಲ್ ಆಗಿದ್ದವು.ಅವುಗಳನ್ನು ಅಭಿಮಾನಿಗಳು ಹಾಲಿವುಡ್‌ನ ಜನಪ್ರಿಯ ತಾರೆ ಕಿಮ್ ಕರ್ದಶಿಯನ್‌ಜೊತೆ ಹೋಲಿಕೆ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.