ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ವೈವಿಧ್ಯಮಯ ‘ಫೇಸ್‌ಪ್ಯಾಕ್‌’

Last Updated 9 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಮುಖದ ತ್ವಚೆಯಲ್ಲಿ ಜಿಡ್ಡು ಅಥವಾ ಎಣ್ಣೆ ಅಂಶವಿರುವುದು ಹಲವರಿಗೆ ಕಿರಿಕಿರಿ. ಅದು ಮುಖದ ಕಾಂತಿಯನ್ನು ಕುಗ್ಗಿಸುತ್ತದೆ. ಈ ಎಣ್ಣೆಯುಕ್ತ ಚರ್ಮದ ಸಮಸ್ಯೆ ಪರಿಹಾರಕ್ಕೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.

* ಕ್ಯಾರೆಟ್ ತುರಿದು ಅದಕ್ಕೆ ಒಂದು ಚಮಚ ಜೇನು ತುಪ್ಪ, 1 ಚಮಚ ಕಡಲೆ ಹಿಟ್ಟು ಹಾಗೂ 4 ಹನಿ ನಿಂಬೆರಸವನ್ನು ಸೇರಿಸಿ, ಮಿಶ್ರಣ ಮಾಡಿ ಮುಖಕ್ಕೆ ಲೇಪಿಸಿಕೊಂಡು 20 ನಿಮಿಷ ಒಣಗಲು ಬಿಡಿ. ನಂತರ ನೀರಿನಿಂದ ಮುಖ ತೊಳೆಯಬೇಕು.

* ಒಂದು ಚಮಚ ಶ್ರೀಗಂಧದ ಪೌಡರ್‌ಗೆ 2 ಚಮಚ ಕಡ್ಲೆ ಹಿಟ್ಟು ಹಾಗೂ ಒಂದು ಚಮಚ ರೋಸ್‌ವಾಟರ್‌ ಸೇರಿಸಿ. ಮಿಶ್ರಣ ಮಾಡಿಕೊಂಡು ಮುಖಕ್ಕೆ ಲೇಪಿಸಿ. 20 ನಿಮಿಷ ಒಣಗಲು ಬಿಡಿ. ನಂತರ ನೀರಿನಿಂದ ಮುಖ ತೊಳೆಯಿರಿ.

* ಪಪ್ಪಾಯಿ ಹಣ್ಣಿನ ತಿರುಳಿಗೆ 2 ಟೇಬಲ್ ಚಮಚ ನಿಂಬೆ ರಸ ಸೇರಿಸಿ ಮಿಕ್ಸ್ ಮಾಡಿ. ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು, ನೀರಿನಿಂದ ಮುಖ ತೊಳೆಯಿರಿ.

* ಸೇಬನ್ನು ಮಿಕ್ಸಿಗೆ ಹಾಕಿ ರಸ ಮಾಡಿಕೊಳ್ಳಿ. ಒಂದು ಚಮಚ ಸೇಬಿನ ರಸಕ್ಕೆ ಅರ್ಧ ಚಮಚ ನಿಂಬೆ ರಸ ಸೇರಿಸಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಡಿ. ನಂತರ ನೀರಿನಿಂದ ಮುಖ ತೊಳೆಯಿರಿ.

* ನಿತ್ಯ ಅರಿಶಿನ ಪುಡಿಗೆ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿ. 20 ನಿಮಿಷ ಬಿಡಿ. ನಂತರ ನೀರಿನಿಂದ ಮುಖ ತೊಳೆಯಿರಿ. ಇದರಿಂದ ಮುಖದ ತ್ವಚೆ ತುಂಬಾ ಮೃದುವಾಗುತ್ತದೆ.

* ಸ್ನಾನ ಮಾಡಿ ಅಥವಾ ಮುಖ ತೊಳೆದು ಮೇಕಪ್ ಮಾಡುವ ಮೊದಲು ರೋಸ್‌ ವಾಟರ್‌ ಅನ್ನು ಹತ್ತಿಯಿಂದ ಅದ್ದಿಕೊಂಡು ಮುಖದ ಎಲ್ಲ ಭಾಗಗಳನ್ನು ಸ್ವಚ್ಛಗೊಳಿಸಿ, ಒರೆಸಿಕೊಳ್ಳಿ. ಇದರಿಂದ ಮುಖದಲ್ಲಿರುವ ಎಣ್ಣೆ ಅಂಶ ಕಡಿಮೆಯಾಗಿ ತ್ವಚೆಯ ಕಾಂತಿ ಹೆಚ್ಚುತ್ತದೆ. ಈ ಚಿಕಿತ್ಸೆಯನ್ನು ಎಲ್ಲ ವಿಧದ ಮುಖ ಚರ್ಮವುಳ್ಳವರು ಸಹ ಮಾಡಬಹುದು.⇒

(ವಿವಿಧ ಮೂಲಗಳಿಂದ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT