ಶುಕ್ರವಾರ, ಅಕ್ಟೋಬರ್ 22, 2021
21 °C

ಬಳುಕುವ ಕರೀನಾ ದೇಹಸಿರಿಯ ಗುಟ್ಟೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾನೊಂದು ಮಗುವಿನ ತಾಯಿಯಾಗಬೇಕು ಎಂಬುದು ಪ್ರತಿ ಹೆಣ್ಣಿನ ಕನಸು. ಆದರೆ ಮಗು ಹಡೆದ ಮೇಲೆ ಬೇಡವೆಂದರೂ ತೂಕ ಹೆಚ್ಚುತ್ತದೆ. ಆದರೆ ತೂಕ ಇಳಿಸಲು ಮಾತ್ರ ಹರಸಾಹಸ ಪಡಬೇಕು. ಅದಕ್ಕಾಗಿ ವ್ಯಾಯಾಮ, ಯೋಗ, ಜಾಗಿಂಗ್ ಹೀಗೆ ದೇಹ ದಂಡನೆ ಮಾಡುತ್ತಾರೆ. ಆದರೆ ಗರ್ಭಧಾರಣೆಯ ನಂತರವೂ ಸುಲಭವಾಗಿ ತೂಕ ಇಳಿಸಿ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು ಎಂಬುದಕ್ಕೆ ನಟಿ ಕರೀನಾ ಕಪೂರ್ ಉತ್ತಮ ಉದಾಹರಣೆ. ಮುದ್ದಾದ ಎರಡು ಮಕ್ಕಳ ತಾಯಿಯಾಗಿರುವ ಕರೀನಾ ತಮ್ಮ ದೈಹಿಕ ಸ್ವಾಸ್ಥ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ.

ಸಿನಿಮಾದಲ್ಲಿ ತನ್ನ ಅದ್ಭುತ ನಟನೆಯ ಮೂಲಕ ಪ್ರೇಕ್ಷಕರ ಪಾಲಿಗೆ ಉತ್ತಮ ನಟಿ ಎನ್ನಿಸಿಕೊಂಡಿರುವ ಕರೀನಾ ತನ್ನ ಕ್ಷೇಮ ಹಾಗೂ ಡಯೆಟ್‌ ಪಾಲನೆಯ ವಿಷಯದಲ್ಲೂ ಅಷ್ಟೇ ಪರಿಪೂರ್ಣರಾಗಿದ್ದಾರೆ. 38 ವರ್ಷದ ಈ ನಟಿ ಈಗಲೂ ತನ್ನ ದೇಹ ಸೌಂದರ್ಯವನ್ನು ಹಾಗೇ ಕಾಪಾಡಿಕೊಂಡಿದ್ದಾರೆ. ಈಗಲೂ ಅವರ ದೇಹ ಮುಂಚಿನಂತೆ ಬಾಗಿ ಬಳುಕುತ್ತಿದ್ದು ಇಪ್ಪತ್ತರ ತರುಣಿಯರೂ ನಾಚುವಂತಿದೆ. ಹಾಗಾದರೆ ಕರೀನಾರ ಈ ಸೌಂದರ್ಯಕ್ಕೆ ಕಾರಣ ಏನು ಎಂದು ಕೇಳುವವರಿಗೆ ಇಲ್ಲಿದೆ ಉತ್ತರ. ಅದೇನೆಂದರೆ ನಿಯಮಿತವಾದ ಆಹಾರಕ್ರಮ.

ಬೇಬೊ ಹಸಿವಾದಾಗೆಲ್ಲಾ ಹಸಿವನ್ನು ನೀಗಿಸಿಕೊಳ್ಳಲು ಒಂದು ಕಪ್‌ನಲ್ಲಿ ‘ಮಖಾನ’ (ಕಮಲದ ಹೂವಿನ ಬೀಜ– ಲೋಟಸ್‌ ಅಥವಾ ಫಾಕ್ಸ್‌ ಸೀಡ್ಸ್‌) ಸೇವಿಸುತ್ತಾರಂತೆ. ಇದರಲ್ಲಿ ನಾರಿನಾಂಶ ಅಧಿಕವಿದ್ದು ಇವು ಕಡಿಮೆ ಕ್ಯಾಲೋರಿ ಅಂಶವನ್ನು ಹೊಂದಿರುತ್ತವೆ. ಆ ಕಾರಣಕ್ಕೆ ಇದು ಬಹಳ ಹೊತ್ತಿನವರೆಗೂ ಹಸಿವಾಗದಂತೆ ತಡೆಯುತ್ತದೆ. ಅಲ್ಲದೇ ಇದು ಪದೇ ಪದೇ ಹೊಟ್ಟೆ ಹಸಿವಾಗುವುದನ್ನು ತಡೆದು ತಿನ್ನುವುದಕ್ಕೆ ಕಡಿವಾಣ ಹಾಕುವಂತೆ ಮಾಡುತ್ತದೆ. ಮಖಾನದಲ್ಲಿ ಮ್ಯಾಗ್ನೆಶಿಯಂ ಅಂಶ ಅಧಿಕವಿದ್ದು ಇದು ಹೃದಯದ ಆರೋಗ್ಯಕ್ಕೆ ಬಹಳ ಉತ್ತಮ.

ಮಖಾನವನ್ನು ಸ್ನಾಕ್ಸ್ ರೂಪದಲ್ಲಿ ಸೇವಿಸುವುದು ಹೇಗೆ?

ಕಡಿಮೆ ಕ್ಯಾಲೊರಿ, ಕಡಿಮೆ ಕೊಬ್ಬಿನಾಂಶ ಇರುವ ಮಖಾನವನ್ನು ಬಿಸಿ ಮಾಡಬಹುದು ಅಥವಾ ಹುರಿಯಬಹುದು. ಇದಕ್ಕೆ ರುಚಿ ಬೇಕು ಎಂದರೆ ಹುರಿಯಬೇಕಾದರೆ ಸ್ವಲ್ಪ ಉಪ್ಪು ಸೇರಿಸಬೇಕು. ಇದನ್ನು ಬೇಯಿಸುವಾಗ ತುಪ್ಪವನ್ನು ಸೇರಿಸಬಹುದು. ಈ ಸಂಜೆ ಸ್ನಾಕ್ಸ್ ನಿಮ್ಮ ಹೊಟ್ಟೆಯನ್ನು ತಣಿಸಿ, ದೇಹತೂಕ ನಿಯಂತ್ರಣಕ್ಕೂ ಸಹಾಯ ಮಾಡುತ್ತದೆ. ನೀವು ಇದನ್ನು ತಯಾರಿಸಿ ತಿನ್ನಿ ಎನ್ನುತ್ತಾರೆ ಬಾಲಿವುಡ್ ಬೆಡಗಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು