ಕಾಲಕ್ಕೆ ತಕ್ಕ ಆಹಾರ, ಕಾಲಕ್ಕೆ ತಕ್ಕ ಬಟ್ಟೆ, ಬಟ್ಟೆಗೆ ತಕ್ಕ ಫ್ಯಾಷನ್. ಈಗ ಚಳಿಗಾಲ ಬಂತು. ನಮ್ಮ ಬಟ್ಟೆ, ಫ್ಯಾಷನ್ ಎರಡೂ ಬದಲಾಗಬೇಕು. ಚಳಿಗಾಲದಲ್ಲಿ ಎಲ್ಲರೂ ಶೂ ಅಥವಾ ಬೂಟ್ಸ್ ಹಾಕಿಕೊಳ್ಳಲು ಇಷ್ಟಪಡುತ್ತಾರೆ ಜೊತೆಗೆ ಈ ಕಾಲದ ಉಡುಪಿಗೆ ಬೂಟ್ಸ್‌ಗಳು ಲುಕ್ ನೀಡುತ್ತವೆ. ಅಂತೆಯೇ ಮಾರುಕಟ್ಟೆಯಲ್ಲಿ ತರ ತರದ ಶೂಗಳು, ಬೂಟ್ಸ್‌ಗಳು ಬಂದಿವೆ. ನಮಗೆ ಹೊಂದುವ, ಆರಾಮ ಎನಿಸುವ ಬೂಟ್ಸ್‌ಗಳನ್ನು ಕೊಳ್ಳುವುದರೊಂದಿಗೆ ಫ್ಯಾಷನೆಬಲ್ ಆಗಿ ಕೂಡ ಕಾಣಿಸಿಕೊಳ್ಳಬಹುದು.

ಮೊಣಕಾಲಿಗೂ ಮೇಲೆ ಬರುವ ಬೂಟ್ಸ್‌ಗಳು ಚಳಿಗಾಲಕ್ಕೆ ಹೇಳಿ ಮಾಡಿಸಿದ್ದೂ ಹೌದು; ಫ್ಯಾಷನೆಬಲ್ ಕೂಡ ಹೌದು. ಈ ವೈಡ್ ಕಾಫ್ ಬೂಟ್ಸ್‌ಗಳು ಈಗ ಟ್ರೆಂಡ್‌ನಲ್ಲಿದೆ. ಇವು ತುಸು ದುಬಾರಿಯಾಗಿವೆ ಮತ್ತು ಇಂಥ ಬೂಟ್ಸ್‌ಗಳನ್ನು ಕೊಳ್ಳುವುದು, ಬೂಟ್ಸ್‌ಗಳ ಆಯ್ಕೆ ತುಸು ಕಷ್ಟವೇ ಸರಿ. ನಮ್ಮ ಕಾಲಿನ ಅಳತೆಗೆ ತಕ್ಕ ಹಾಗೆ ಇಂಥ ಬೂಟ್ಸ್‌ಗಳು ಲಭ್ಯ ಎಂದು ಹೇಳಲಾಗುವುದಿಲ್ಲ. ಬ್ರ್ಯಾಂಡ್‌ಗಳಿಂದ ಬ್ರ್ಯಾಂಡ್‌ಗಳಿಗೆ ಈ ಅಳತೆ ಕೂಡ ವ್ಯತ್ಯಾಸವಾಗಬಹುದು. ಆದ್ದರಿಂದ ಇಂಥ ಬೂಟ್ಸ್‌ಗಳನ್ನು ಕೊಳ್ಳುವಾಗ ಕೆಲವು ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಏನವು?

ಮೊದಲು ಮಾಡಬೇಕಾಗಿರು ವುದು ನಿಮ್ಮ ಮೀನಖಂಡದ ಸುತ್ತಳತೆಯನ್ನು ಅಳೆಯುವುದು. ಎರಡೂ ಕಾಲಿನ ಅಳತೆ ಪಡೆಯುವುದು ಉತ್ತಮ. ಏಕೆಂದರೆ, ಅವು ಬೇರೆ ಬೇರೆ ಅಳತೆಯದ್ದಾಗಿರುತ್ತದೆ. ನಂತರ ಯಾವ ಅಳತೆ ಬೂಟ್ಸ್ ಕೊಳ್ಳಬೇಕು ಎಂದು ಯೋಚಿಸಿ.

ಹೆಚ್ಚಿನ ಬ್ರ್ಯಾಂಡ್‌ಗಳಲ್ಲಿ ವೈಡ್ ಕಾಫ್ ಬೂಟ್ಸ್ ಅಳತೆಯು 16 ಇಂಚಿನಿಂದಲೇ ಪ್ರಾರಂಭವಾಗುತ್ತದೆ. ಮೇಲೆ ಹೇಳಿದ ಹಾಗೆ ಎಲ್ಲಾ ಬ್ರ್ಯಾಂಡ್‌ನ ಎಲ್ಲ ಅಳತೆಯ ಬೂಟ್ಸ್‌ಗಳು ಎಲ್ಲರಿಗೂ ಬರುವುದಿಲ್ಲ.

ಈಗಂತೂ ಎಲ್ಲವನ್ನು ಆನ್‌ಲೈನ್‌ನಲ್ಲೇ ಖರೀದಿಸಿಬಿಡುತ್ತೇವೆ. ಬಟ್ಟೆ ಮತ್ತು ಇಂಥ ಬೂಟ್ಸ್‌ಗಳನ್ನು ಕೊಳ್ಳುವಾಗ ಅಳತೆಯದ್ದೇ ಗೊಂದಲ ಕಾಡುತ್ತದೆ. ಖರೀದಿ ಮಾಡುವಾಗ ಚಂದ ಕಂಡರೂ ಮನೆಗೆ ಬಂದ ಮೇಲೆ ಕಾಲಿನ ಅಳತೆಗೆ ಹೊಂದಿಕೆ ಆಗದಿರಬಹುದು. ಆದ್ದರಿಂದ ಜಾಗರೂಕರಾಗಿ ಅಳತೆ ನೋಡಿ ಖರೀದಿ ಮಾಡುವುದು ಒಳಿತು. ಈಗಂತೂ ಮಾರುಕಟ್ಟೆಯಲ್ಲಿ ವಿವಿಧ ಬ್ರ್ಯಾಂಡಿನ ವೈಡ್ ಕಾಫ್ ಬೂಟ್ಸ್ ಲಭ್ಯ ಇವೆ. ಕಾಲಿನ ಅಳತೆ ನೋಡಿಕೊಂಡು, ಅಂಗಡಿಗಳಲ್ಲೇ ಕೊಳ್ಳುವುದು ಉತ್ತಮ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.